IND VS ENG TEST : 191 ಕ್ಕೆ ಭಾರತ ಸರ್ಪ ಪತನ, ಇಂಗ್ಲೆಂಡ್‌ಗೆ ಆರಂಭಿಕ ಆಘಾತ ಕೊಟ್ಟ ಬೂಮ್ರಾ

ಲಂಡನ್‌ : ಇಂಗ್ಲೆಂಡ್‌ ವಿರುದ್ದ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ನಿರಾಸೆ ಅನುಭವಿಸಿದ್ದು, ೧೯೧ ರನ್‌ ಗಳಿಗೆ ಸರ್ಪ ಪತನ ಕಂಡಿದೆ. ಆದ್ರೆ ಭಾರತದ ವೇಗಿ ಬೂಮ್ರಾ ಎರಡು ವಿಕೆಟ್‌ ಪಡೆಯುವ ಮೂಲಕ ಆರಂಭಿಕ ಆಘಾತ ನೀಡಿದ್ದಾರೆ.

ಲಂಡನ್‌ನ ಕೆನ್ನಿಂಗ್ಟನ್‌ ಓವಲ್‌ ಸ್ಟೇಡಿಯಂನಲ್ಲಿ ಆರಂಭಗೊಂಡಿರುವ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡ ಬೃಹತ್‌ ಮೊತ್ತವನ್ನು ದಾಖಲಿಸುವಲ್ಲಿ ವಿಫಲವಾಗಿದೆ. ಮೊದಲು ಬ್ಯಾಟಿಂಗ್‌ ನಡೆಸಿದ್ದ ಭಾರತ ತಂಡ 61.3 ಓವರ್‌ಗಳಲ್ಲಿ 191 ರನ್‌ಗಳಿಗೆ ಸರ್ಪ ಪತನ ಕಂಡಿದೆ. ವಿರಾಟ್‌ ಕೊಯ್ಲಿ 50, ಶಾರ್ದೂಲ್‌ ಠಾಕೂರ್‌ 57 ರನ್‌ ಬಾರಿಸಿದ್ದನ್ನು ಹೊರತು ಪಡಿಸಿ ಉಳಿದ ಆಟಗಾರರು ವೈಫಲ್ಯ ಅನುಭವಿಸಿದ್ದಾರೆ.

ಇನ್ನು ಮೊದಲ ಇನ್ನಿಂಗ್ಸ್‌ ಬ್ಯಾಟಿಂಗ್‌ ಆರಂಭಿಸಿದ್ದ ಇಂಗ್ಲೆಂಡ್‌ ತಂಡಕ್ಕೆ ಭಾರತದ ವೇಗಿ ಜಸ್ಪ್ರಿತ್‌ ಬೂಮ್ರಾ ಆಘಾತ ನೀಡಿದ್ದಾರೆ. ಜೋಸೆಫ್‌ ಬರ್ನ್ಸ್‌ 5 ಹಾಗೂ ಹಸೀಬ ಹಮೀದ್‌ ಸೊನ್ನೆ ಗಳಿಸಿ ಫೆವಿಲಿಯನ್‌ ಸೇರಿದ್ದಾರೆ. ಭಾರತೀಯ ಬೌಲರ್‌ಗಳು ಇಂಗ್ಲೆಂಡ್‌ ವಿರುದ್ದ ಪ್ರತಿಕಾರ ತೀರಿಸಿಕೊಳ್ಳಲು ಸಜ್ಜಾದಂತಿದೆ.

ಇದನ್ನೂ ಓದಿ : ICC TEST RANKINGನಲ್ಲಿ ವಿರಾಟ್‌ಗೆ ನಿರಾಸೆ : ಕೊಹ್ಲಿಯನ್ನು ಹಿಂದಿಕ್ಕಿದ ರೋಹಿತ್ ಶರ್ಮಾ

ಇದನ್ನೂ ಓದಿ : ಕ್ರಿಕೆಟ್‌ ವೃತ್ತಿ ಬದುಕಿಗೆ ವಿದಾಯ ಹೇಳಿದ ವೇಗಿ ಡೇಲ್‌ ಸ್ಟೇನ್

( India vs England 4th test India All Out 191 runs )

Comments are closed.