Rohit Sharma Slim : ವೆಸ್ಟ್ ಇಂಡೀಸ್ ಸರಣಿಗೆ ಮುನ್ನ ಸ್ಲಿಮ್‌ ಆಂಡ್‌ ಫಿಟ್‌ ಆದ ರೋಹಿತ್ ಶರ್ಮಾ

ಮುಂಬೈ: ಟೀಂ ಇಂಡಿಯಾ ಏಕದಿನ ತಂಡದ ನಾಯಕ ರೋಹಿತ್‌ ಶರ್ಮಾ ಅವರಿಗೆ ಫಿಟ್ನೆಸ್‌ ಸಮಸ್ಯೆ ಸದಾ ಕಾಡುತ್ತಿದೆ. ಇದೇ ಕಾರಣಕ್ಕೆ ನಾಯಕನಾದ ನಂತರದಲ್ಲೂ ತಂಡವನ್ನು ಮುನ್ನಡೆಸುವುದಕ್ಕೆ ಸಾಧ್ಯವಾಗಿಲ್ಲ. ಹೀಗಾಗಿಯೇ ಎನ್‌ಸಿಎ ಸೇರಿರುವ ರೋಹಿತ್‌ ಶರ್ಮಾ ಇದೀಗ ಸ್ಲಿಮ್‌ ಆಂಡ್‌ ಫಿಟ್‌ ( Rohit Sharma Slim ) ಆಗಿದ್ದಾರೆ. ಬರೋಬ್ಬರಿ ಐದರಿಂದ ಆರು ಕೆಜಿ ತೂಕ ಕಳೆದುಕೊಂಡಿರುವ ಶರ್ಮಾ ಸ್ಲೀಮ್‌ ಆದಂತೆ ಕಾಣಿಸುತ್ತಿದ್ದಾರೆ.

ಟೀಂ ಇಂಡಿಯಾದ ನಾಯಕನಾಗಿದ್ದ ವಿರಾಟ್‌ ಕೊಯ್ಲಿ ನಾಯಕತ್ವದಿಂದ ಕಳೆಗಿಳಿಯುತ್ತಿದ್ದಂತೆಯೇ ರೋಹಿತ್‌ ಶರ್ಮಾ ಅವರನ್ನು ನಾಯಕನನ್ನಾಗಿ ನೇಮಕ ಮಾಡಲಾಗಿತ್ತು. ಆದರೆ ಗಾಯದ ಸಮಸ್ಯೆಯಿಂದಾಗಿ ದಕ್ಷಿಣ ಆಫ್ರಿಕಾ ಸರಣಿಯನ್ನು ಮಿಸ್‌ ಮಾಡಿಕೊಂಡಿದ್ದರು. ಇದೇ ಕಾರಣದಿಂದಲೇ ಬಿಸಿಸಿಐ ರೋಹಿತ್‌ ಶರ್ಮಾ ಅವರಿಗೆ ದೇಹದ ತೂಕ ಕಡಿಮೆ ಮಾಡಿಕೊಳ್ಳುವಂತೆ ಖಡಕ್‌ ಸೂಚನೆಯನ್ನು ನೀಡಿತ್ತು.

ಇದೇ ಕಾರಣದಿಂದಾಗಿ ರೋಹಿತ್‌ ಶರ್ಮಾ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಸೇರಿದ್ದರು. ಆದ್ರೆ ಕಠಿಣ ಅಭ್ಯಾಸ, ಕಸರತ್ತಿನಿಂದಾಗಿ ರೋಹಿತ್‌ ಶರ್ಮಾ ಇದೀಗ ಸ್ಲಿಮ್‌ ಆಂಡ್‌ ಫಿಟ್‌ ಆಗಿದ್ದಾರೆ. ಅಲ್ಲದೇ ಮುಂಬರುವ ಫೆಬ್ರವರಿ ತಿಂಗಳಿನಲ್ಲಿ ನಡೆಯಲಿರುವ ವೆಸ್ಟ್‌ ಇಂಡಿಸ್‌ ವಿರುದ್ದದ ಸರಣಿಯ ಹೊತ್ತಿಗೆ ಸಂಪೂರ್ಣವಾಗಿ ಫಿಟ್‌ ಆಗುವ ಸಾಧ್ಯತೆಯಿದೆ. ತೂಕ ಕಳೆದುಕೊಂಡಿರುವ ರೋಹಿತ್‌ ಶರ್ಮಾ ಹೆಚ್ಚು ಚುರುಕುತನದಿಂದ ತರಬೇತಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ರೋಹಿತ್‌ ಶರ್ಮಾ ತಾವು ಸ್ಲಿಮ್‌ ಆಗಿರುವ ಪೋಟೋವನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ. ತನ್ಮಯ್ ಮಿಶಾ ಅವರೊಂದಿಗೆ ಇರುವ ಪೋಟೋದಲ್ಲಿ ಶರ್ಮಾ ಸಖತ್‌ ಫಿಟ್‌ ಆದಂತೆ ಕಾಣಿಸುತ್ತಿದ್ದಾರೆ. ವೆಸ್ಟ್‌ ಇಂಡಿಸ್‌ ತಂಡದ ವಿರುದ್ದ ಫೆಬ್ರವರಿ 6 ರಂದು ಅಹಮದಾಬಾದ್‌ನಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದೆ. ಈ ವೇಳೆಯಲ್ಲಿ ಭಾರತ ತಂಡವನ್ನು ರೋಹಿತ್‌ ಶರ್ಮಾ ಕೂಡಿಕೊಳ್ಳುವ ಸಾಧ್ಯತೆಯಿದೆ.

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಹಾಗೂ ಟಿ 20 ಪಂದ್ಯಗಳು ನಡೆಯಲಿದೆ. ಫೆಬ್ರವರಿ 6 ರಿಂದ 12 ರವರೆಗೆ ಏಕದಿನ ಪಂದ್ಯಗಳು ನಡೆಯಲಿದ್ದು, ನಂತರ ಫೆಬ್ರವರಿ 15 ರಿಂದ 20 ರವರೆಗೆ ಟಿ20 ಪಂದ್ಯಗಳು ನಡೆಯಲಿವೆ. ದಕ್ಷಿಣ ಆಫ್ರಿಕಾ ವಿರುದ್ದ ಸೋಲಿನ ಕಹಿಯನ್ನು ಮರೆಸಲು ವೆಸ್ಟ್‌ ಇಂಡಿಸ್‌ ವಿರುದ್ದ ಸರಣಿ ವೇದಿಕೆಯಾಗಲಿದೆ. ರೋಹಿತ್‌ ಶರ್ಮಾ ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯನ್ನು ಮಿಸ್‌ ಮಾಡಿಕೊಂಡ್ರೆ ಕನ್ನಡಿಗ ರಾಹುಲ್‌ ಟೀಂ ಇಂಡಿಯಾವನ್ನು ಮುನ್ನಡೆಸುವ ಸಾಧ್ಯತೆಯಿದೆ.

ಇದನ್ನೂ ಓದಿ : ವೈರಲ್​ ಆಗುತ್ತಿರುವ ವಮಿಕಾಳ ಫೋಟೋ ಬಗ್ಗೆ ಸ್ಪಷ್ಟನೆ ನೀಡಿದ ವಿರುಷ್ಕಾ ದಂಪತಿ

ಇದನ್ನೂ ಓದಿ :  ಲಕ್ನೋ ತಂಡಕ್ಕೆ ಲಕ್ನೋ ಸೂಪರ್‌ ಜೈಂಟ್ಸ್‌ ಹೆಸರಿಟ್ಟ RPS ಗ್ರೂಫ್‌

( Rohit Sharma Slim and fit before West Indies Series, Viral pics)

Comments are closed.