new traffic rules : ಬೆಂಗಳೂರಿನಲ್ಲಿ ಅಪಘಾತ‌ ನಿಯಂತ್ರಣಕ್ಕೆ ಹೊಸ ಪ್ರಯತ್ನ: ಎಲ್ಲೆಂದರಲ್ಲಿ ರಸ್ತೆ ದಾಟಿದ್ರೇ ಬೀಳುತ್ತೆ ಫೈನ್

ಬೆಂಗಳೂರು : ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ಗಲ್ಲಿಗೊಂದು ರೂಲ್ಸ್, ನೊರೆಂಟು ನಿಯಮ ವಿರೋದು ಕಾಮನ್ ( new traffic rules in Bangalore ). ಅದರಲ್ಲೂ ಬೆಂಗಳೂರಿನ ರಸ್ತೆಗಳಂತೂ ಯಾವಾಗಲೂ ಯಮ ಸ್ವರೂಪಿಯೇ. ಪ್ರತಿವರ್ಷ ನೂರಾರು ಜನರು ಈ ರಸ್ತೆಯಿಂದಾಗಿ ಪ್ರಾಣ ಕಳೆದುಕೊಳ್ಳುತ್ತಲೇ ಇರುತ್ತಾರೆ. ಇದನ್ನು ತಪ್ಪಿಸಲು ರಸ್ತೆಗಳಲ್ಲಿ ಸೇಫ್ ಕ್ರಾಸಿಂಗ್ ಕೂಡ ಅಳವಡಿಕೆಯಾಗಿದೆ. ಆದರೂ ಪ್ರಯೋಜನವಾಗಿಲ್ಲ. ಹೀಗಾಗಿ ಎಲ್ಲೆಂದರಲ್ಲಿ ರಸ್ತೆ ದಾಟಲು ಹೋಗಿ ಪ್ರಾಣ ಕಳೆದುಕೊಳ್ಳುವ ಜನರನ್ನು ನಿಯಂತ್ರಿಸಲು ಇನ್ಮುಂದೆ ದಂಡವಿಧಿಸಲು ಸಿದ್ಧತೆ ನಡೆದಿದೆ.

ನಗರದ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ಜನರು ಸುರಕ್ಷಿತವಾಗಿ ರಸ್ತೆ ದಾಟಲು ನೆರವಾಗುವಂತೆ ಜೀಬ್ರಾ ಕ್ರಾಸಿಂಗ್ ವ್ಯವಸ್ಥೆ ಮಾಡಲಾಗಿದೆ. ಆದರೂ ವಾಹನ ದಟ್ಟನೆ ಇರುವ ಹಾಗೂ ವಾಹನಗಳು ವೇಗವಾಗಿ ಬರುವ ಸ್ಥಳದಲ್ಲಿ ರಸ್ತೆ ದಾಟಲು ಹೋಗುವ ಜನರು ತಮ್ಮ ಪ್ರಾಣವನ್ನು ಪಣಕೊಡ್ಡುವುದಲ್ಲದೇ ವಾಹನ ಸವಾರರ ಸಾವಿಗೂ ಕಾರಣವಾಗುತ್ತಿದ್ದಾರೆ‌. ಈಗ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲೆಂದರಲ್ಲಿ ರಸ್ತೆ ದಾಟುವ ಜನರನ್ನು ನಿಯಂತ್ರಿಸಲು ದಂಡ ವಿಧಿಸಲು ನಿರ್ಧರಿಸಲಾಗಿದೆ. ಈಗಾಗಲೇ ಟ್ರಾಫಿಕ್ ಪೊಲೀಸರು ನಿರ್ಧರಿಸಿರುವ ಜಾಗಗಳನ್ನು ಹೊರತುಪಡಿಸಿ ಉಳಿದ ಸ್ಥಳದಲ್ಲಿ ರಸ್ತೆ ದಾಟುವವರಿವೆ ಇನ್ಮುಂದೆ ಪೊಲೀಸರು 10 ರೂಪಾಯಿ ದಂಡ ವಿಧಿಸಲಿದ್ದಾರೆ.

ಈ ಬಗ್ಗೆ ವಿವರಣೆ ನೀಡಿರುವ ನಗರ ಸಂಚಾರಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇ ಗೌಡ, ರಸ್ತೆಗಳಲ್ಲಿ ಈಗ 20 ಸೆಕೆಂಡ್ ಎಲ್ಲಾ ಸಿಗ್ನಲ್ ನಿಲ್ಲಿಸುವ ವ್ಯವಸ್ಥೆ ಮಾಡಲಾಗಿದೆ. ಪೂರ್ತಿಯಾಗಿ ರೆಡ್ ಸಿಗ್ನಲ್ ಮಾಡಲಾಗಿದೆ. ಕೆಲವು ಕಡೆ ರಸ್ತೆ ಮೇಲೆ ದಾಟುವುದನ್ನು ತಪ್ಪಿಸಲು ಅಂಡರ್ ಪಾಸ್ ನಿರ್ಮಿಸಲಾಗಿದೆ. ಈ ಅಂಡರ್ ಪಾಸ್ ಗಳನ್ನು ರಿಪೇರಿ ಮಾಡಿಸಲು ಬಿಬಿಎಂಪಿ ಗೆ ಸೂಚಿಸಲಾಗಿದೆ.

ನೃಪತುಂಗ ರಸ್ತೆಯಲ್ಲಂತೂ ಅಂಡರ್ ಪಾಸ್ ನಲ್ಲಿ ಜನರ ಸುರಕ್ಷತೆಗಾಗಿ ಹೋಂ ಗಾರ್ಡ್ ಕೂಡ ನೇಮಿಸಲಾಗಿದೆ. ನಗರದ ಅಂಡರ್ ಪಾಸ್ ಹಾಗೂ ಹಲವೆಡೆ ಸಿಸಿಟಿವಿ ಕೂಡ ಹಾಕಲಾಗಿದೆ. ಇದನ್ನು ಕಮಾಂಡ್ ಸೆಂಟರ್ ನಲ್ಲಿ ಮಾನಿಟರ್ ಮಾಡಲಾಗುತ್ತಿದೆ. ಹೀಗಿದ್ದೂ ಜನರು ನಿಯಮ ಪಾಲಿಸುತ್ತಿಲ್ಲ. ಹೀಗಾಗಿ ಇನ್ಮುಂದೆ ನಿಯಮ ಪಾಲಿಸದೇ ರಸ್ತೆ ದಾಟುವವರನ್ನು ಹಿಡಿದು ಫೈನ್ ಹಾಕಲಾಗುತ್ತದೆ ಎಂದಿದ್ದಾರೆ.

ಕಳೆದ ಮೂರು ವರ್ಷಗಳ ಅಂಕಿ ಸಂಖ್ಯೆಗಳನ್ನು ಗಮನಿಸಿದರೇ ಬೆಂಗಳೂರಿನಲ್ಲಿ ವಿದ್ಯಾವಂತರೇ ಹೆಚ್ಚು ರಸ್ತೆ ಅಪಘಾತಕ್ಕೆ ಬಲಿಯಾಗಿದ್ದು ಅವಸರದಲ್ಲಿ ನಿಗದಿತವಲ್ಲದ ಸ್ಥಳದಲ್ಲಿ ರಸ್ತೆ ದಾಟಲು ಹೋಗಿಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ನಗರ ಪೊಲೀಸ್ ಇಲಾಖೆ ದಂಡದ ಮೂಲಕ ನಾಗರೀಕರನ್ನು ನಿಯಂತ್ರಿಸುವ ಕ್ರಮಕ್ಕೆ ಮುಂದಾಗಿದೆ.

ಇದನ್ನೂ ಓದಿ : ಬಿಬಿಎಂಪಿ ಕೊರೋನಾ ನೆಗೆಟಿವ್ ರಿಪೋರ್ಟ್ ಕೊಡಲ್ಲ, ಕಂಪನಿಗಳು ಬಿಡಲ್ಲ: ಸೋಂಕಿತರ ಪರದಾಟ ಕೇಳೋರಿಲ್ಲ

ಇದನ್ನೂ ಓದಿ : ಮದುವೆಯಾಗಲು ನಾದಿನಿಯನ್ನೇ ಕಿಡ್ನಾಪ್‌ ಮಾಡಿದ ಬಾವ

( new traffic rules in Bangalore)

Comments are closed.