Mitchell Johnson Yusuf Pathan : ಲೆಜೆಂಡ್ಸ್ ಲೀಗ್ ಕ್ರಿಕೆಟ್: ಯೂಸುಫ್ ಪಠಾಣ್ ಮೇಲೆ ಮೈದಾನದಲ್ಲೇ ಹಲ್ಲೆ ನಡೆಸಿದ ಆಸೀಸ್ ವೇಗಿ ಜಾನ್ಸನ್

ಜೋಧಪುರ್: Mitchell Johnson Yusuf Pathan : ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ (Legends League Cricket Match) ಭಾರತೀಯ ಆಟಗಾರ ಯೂಸುಫ್ ( Yusuf Pathan) ಮೇಲೆ ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಜಾನ್ಸನ್ ( Mitchell Johnson ) ಹಲ್ಲೆ ನಡೆಸಿದ ಘಟನೆ ನಡೆದಿದೆ. ಜೋಧಪುರದ ಬರ್ಖತುಲ್ಲಾ ಖಾನ್ ಮೈದಾನದಲ್ಲಿ ನಡೆದ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಕ್ವಾಲಿಫೈಯರ್ ಪಂದ್ಯದಲ್ಲಿ ಈ ಘಟನೆ ನಡೆದಿದೆ. ಇಂಡಿಯಾ ಕ್ಯಾಪಿಟಲ್ಸ್ ಹಾಗೂ ಬಿಲ್ವಾರ ಕಿಂಗ್ಸ್ ನಡುವಿನ ಪಂದ್ಯದ ವೇಳೆ ನಡೆದ ಘಟನೆಯಿದು.

ಬಿಲ್ವಾರ ಕಿಂಗ್ಸ್ ತಂಡವನ್ನು ಪ್ರತಿನಿಧಿಸುವ ಯೂಸುಫ್ ಪಠಾಣ್, ಇಂಡಿಯಾ ಕ್ಯಾಪಿಟಲ್ಸ್ ತಂಡದ ವೇಗಿ ಮಿಚೆಲ್ ಜಾನ್ಸನ್ ಎಸೆದ 19ನೇ ಓವರ್’ನ ಮೊದಲ 3 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 1 ಬೌಂಡರಿ ಬಾರಿಸಿದರು. ಈ ವೇಳೆ ತಾಳ್ಮೆ ಕಳೆದುಕೊಂಡ ಜಾನ್ಸನ್, ಯೂಸುಫ್ ಪಠಾಣ್ ಅವರನ್ನು ಕೆಟ್ಟ ಶಬ್ದಗಳಲ್ಲಿ ನಿಂದಿಸಿದರು. ಪಠಾಣ್ ಕೂಡ ತಿರುಗೇಟು ನೀಡಿದಾಗ ಮತ್ತಷ್ಟು ಕೋಪಗೊಂಡ ಮಿಚೆಲ್ ಜಾನ್ಸನ್, ಯೂಸುಫ್ ಫಠಾಣ್ ಅವರನ್ನು ದೂರಕ್ಕೆ ತಳ್ಳಿದರು. ಈ ಆಘಾತಕಾರಿ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಶಿಸ್ತಿನ ಎಲ್ಲೆ ಮೀರಿದ ಮಿಚೆಲ್ ಜಾನ್ಸನ್ ವಿರುದ್ಧ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಯೂರ್ನಿಯ ಕಮಿಷನರ್ ರವಿ ಶಾಸ್ತ್ರಿ ಕಿಡಿ ಕಾರಿದ್ದು, ಜಾನ್ಸನ್’ಗೆ ಎಚ್ಚರಿಕೆ ನೀಡಿ ಪಂದ್ಯ ಸಂಭಾವನೆಯ 50% ದಂಡ ವಿಧಿಸಿದ್ದಾರೆ.

ಕ್ವಾವಿಫೈಯರ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇರ್ಫಾನ್ ಪಠಾಣ್ ನಾಯಕತ್ವದ ಬಿಲ್ವಾರ ಕಿಂಗ್ಸ್ ನಿಗದಿತ 20 ಓವರ್’ಗಳಲ್ಲಿ 5 ವಿಕೆಟ್ ನಷ್ಟಕ್ಕೆ 226 ರನ್ ಕಲೆ ಹಾಕಿತು. ಶೇನ್ ವಾಟ್ಸನ್ (65 ರನ್, 39 ಎಸೆತ), ವಿಲಿಯಮ್ ಪೋರ್ಟರ್’ಫೀಲ್ಡ್ (59 ರನ್, 37 ಎಸೆತ) ಮತ್ತು ಯೂಸುಫ್ ಪಠಾಣ್ (48 ರನ್, 24 ಎಸೆತ) ಸ್ಫೋಟಕ ಅರ್ಧಶತಕಗಳನ್ನು ಬಾರಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು.

ಬೃಹತ್ ಗುರಿ ಬೆನ್ನಟ್ಟಿದ ಇಂಡಿಯಾ ಕ್ಯಾಪಿಟಲ್ಸ್ ಇನ್ನೂ 3 ಎಸೆತಗಳು ಬಾಕಿ ಇರುತ್ತಲೇ 6 ವಿಕೆಟ್ ನಷ್ಟಕ್ಕೆ 231 ರನ್ ಗಳಿಸಿ ಭರ್ಜರಿ ಗೆಲುವು ದಾಖಲಿಸಿತು. ನ್ಯೂಜಿಲೆಂಡ್’ನ ರಾಸ್ ಟೇಲರ್ (84 ರನ್, 39 ಎಸೆತ) ಹಾಗೂ ವೆಸ್ಟ್ ಇಂಡೀಸ್ ಆಲ್ರೌಂಡರ್ ಆ್ಯಶ್ಲೆ ನರ್ಸ್ (60* ರನ್, 28 ಎಸೆತ) ಸ್ಫೋಟಕ ಆಟವಾಡಿ ತಂಡದ ಗೆಲುವಿಗೆ ಕಾರಣರಾದರು

ಇದನ್ನೂ ಓದಿ : India vs South Africa T20 series : ಭಾರತ Vs ದಕ್ಷಿಣ ಆಫ್ರಿಕಾ ಟಿ20 ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿದ ಹಾವು!

ಇದನ್ನೂ ಓದಿ : KL Rahul Virat Kohli : ದಕ್ಷಿಣ ಆಫ್ರಿಕಾ ವಿರುದ್ಧದ ಟಿ20: ರಾಹುಲ್, ಕೊಹ್ಲಿಗೆ ರೆಸ್ಟ್, ಓಪನರ್ ಯಾರು ?

Australia former pacer Johnson attacked Yusuf Pathan Legends League Cricket Match

Comments are closed.