Asia Cup 2022 Trophy : 6 ಟೀಮ್,1 ಡ್ರೀಮ್, ಏಷ್ಯಾ ಕಪ್ ಟ್ರೋಫಿ ಅನಾವರಣ; ಯಾರಾಗ್ತಾರೆ ಚಾಂಪಿಯನ್..?


ದುಬೈ: (Asia Cup 2022 Trophy
) ಪ್ರತಿಷ್ಠಿತ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗಿನ್ನು ಮೂರೇ ದಿನಗಳು ಬಾಕಿ. ಏಷ್ಯಾ ತಂಡದ ಜಿದ್ದಾಜಿದ್ದಿಗೆ ಸಾಕ್ಷಿಯಾಗಲಿರುವ ಏಷ್ಯಾ ಕಪ್ ಟಿ20 ಟೂರ್ನಿ ಶನಿವಾರ ಆರಂಭವಾಗಲಿದ್ದು, ಟ್ರೋಫಿ ಅನಾವರಣ ಮಾಡಲಾಗಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಶೇಖ್ ನಹಾಯನ್ ಮುಬಾರಕ್ ಅಲಿ, ಏಷ್ಯಾ ಕಪ್ ಟ್ರೋಫಿಯನ್ನು ಅನಾವರಣ ಮಾಡಿದ್ದಾರೆ.

ಟೂರ್ನಿಯಲ್ಲಿ ಭಾರತ,ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ತಂಡಗಳ ಜೊತೆ ಅರ್ಹತಾ ಸುತ್ತಿನಲ್ಲಿ ಗೆಲ್ಲುವ ಒಂದು ತಂಡ ಭಾಗವಹಿಸಲಿವೆ. ಶನಿವಾರ ನಡೆಯುವ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಅಪ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಭಾನುವಾರ ದುಬೈನಲ್ಲಿ ನಡೆಯುವ ಹೈಲೋಲ್ಟೇಜ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಭಾರತ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಆಡುವ ಮೂಲಕ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.

1984ರಿಂದ ಇದುವರೆಗೆ ಒಟ್ಟು 14 ಏಷ್ಯಾ ಕಪ್ ಟೂರ್ನಿಗಳು ನಡೆದಿದ್ದು ಭಾರತ ಏಳು ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ. 1984, 1988, 1990-91, 1995, 2010, 2016, 2018ರಲ್ಲಿ ಭಾರತ ಏಷ್ಯಾ ಕಪ್ ಗೆದ್ದಿದ್ದು, ಈ ಬಾರಿಯೂ ಚಾಂಪಿಯನ್ ಪಟ್ಟವನ್ನು ತನ್ನಲ್ಲೇ ಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ. ಶ್ರೀಲಂಕಾ ತಂಡ 986, 1997, 2004, 2008, 2014ರಲ್ಲಿ ಒಟ್ಟು ಐದು ಬಾರಿ ಏಷ್ಯಾ ಕಪ್ ಚಾಂಪಿಯನ್ ಆಗಿದ್ರೆ, ಪಾಕಿಸ್ತಾನ 2000 ಮತ್ತು 2012ರಲ್ಲಿ ಪ್ರಶಸ್ತಿ ಗೆದ್ದಿದೆ.

6 Team 1 Dream Asia Cup 2022 Trophy Unveiled Abu Dubai Who will be the champion

ಏಷ್ಯಾಕಪ್ ಟಿ20 (Asia Cup 2022) ಟೂರ್ನಿಯ ವೇಳಾಪಟ್ಟಿ
Group A
ಭಾರತ Vs ಪಾಕಿಸ್ತಾನ: 28 ಆಗಸ್ಟ್, ದುಬೈ
ಭಾರತ Vs ಕ್ವಾಲಿಫೈಯರ್ ಟೀಮ್: 31 ಆಗಸ್ಟ್, ದುಬೈ
ಪಾಕಿಸ್ತಾನ Vs ಕ್ವಾಲಿಫೈಯರ್ ಟೀಮ್: 02 ಸೆಪ್ಟೆಂಬರ್, ಶಾರ್ಜಾ

Group B
ಶ್ರೀಲಂಕಾ Vs ಅಫ್ಘಾನಿಸ್ತಾನ: 27 ಆಗಸ್ಟ್, ದುಬೈ
ಬಾಂಗ್ಲಾದೇಶ Vs ಅಫ್ಘಾನಿಸ್ತಾನ: 30 ಆಗಸ್ಟ್, ಶಾರ್ಜಾ
ಶ್ರೀಲಂಕಾ Vs ಬಾಂಗ್ಲಾದೇಶ: 01 ಸೆಪ್ಟೆಂಬರ್, ದುಬೈ

ಸೂಪರ್-4 ಹಂತ
B1 Vs B2: 03 ಸೆಪ್ಟೆಂಬರ್, ಶಾರ್ಜಾ
A1 Vs A2: 04 ಸೆಪ್ಟೆಂಬರ್, ದುಬೈ
A1 Vs B1: 06 ಸೆಪ್ಟೆಂಬರ್, ದುಬೈ
A2 Vs B2: 07 ಸೆಪ್ಟೆಂಬರ್, ದುಬೈ
A1 Vs B2: 08 ಸೆಪ್ಟೆಂಬರ್, ದುಬೈ
B1 Vs A2: 09 ಸೆಪ್ಟೆಂಬರ್, ದುಬೈ
ಫೈನಲ್: 11 ಸೆಪ್ಟೆಂಬರ್, ದುಬೈ

ಪಂದ್ಯಗಳ ಆರಂಭ: ರಾತ್ರಿ 7.30ಕ್ಕೆ (ಭಾರತೀಯ ಕಾಲಮಾನ)
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್’ವರ್ಕ್ (Star Sports network)
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್’ಸ್ಟಾರ್ (Disney + Hotstar)

ಟೂರ್ನಿಯಲ್ಲಿ ಆಡಲಿರುವ ಆರು ತಂಡಗಳನ್ನು 2 ಗ್ರೂಪ್’ಗಳಾಗಿ ವಿಭಾಗಿಸಲಾಗಿದ್ದು, ಭಾರತ, ಪಾಕಿಸ್ತಾನ ಮತ್ತು ಅರ್ಹತಾ ಸುತ್ತಿನ ವಿಜೇತ ತಂಡ ಗ್ರೂಪ್ ‘ಎ’ನಲ್ಲಿ ಸ್ಥಾನ ಪಡೆದ್ರೆ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ತಂಡಗಳು ಗ್ರೂಪ್ ‘ಬಿ’ನಲ್ಲಿ ಕಾಣಿಸಿಕೊಂಡಿವೆ. ಪ್ರತೀ ತಂಡಗಳು ಗ್ರೂಪ್ ಹಂತದಲ್ಲಿ ತಲಾ ಒಂದು ಬಾರಿ ಮುಖಾಮುಖಿಯಾಗಲಿವೆ. ಅಗ್ರ ಎರಡು ತಂಡಗಳು ಸೂಪರ್-4 ಹಂತಕ್ಕೆ ಪ್ರವೇಶ ಪಡೆಯಲಿದ್ದು, ಸೂಪರ್-4 ಹಂತದಲ್ಲಿ ಎಲ್ಲಾ ನಾಲ್ಕು ತಂಡಗಳು ಪ್ರತೀ ತಂಡದ ವಿರುದ್ಧ ಆಡಲಿವೆ. ಸೂಪರ್-4ನಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಫೈನಲ್ ಪ್ರವೇಶಿಸಲಿವೆ. ಫೈನಲ್ ಪಂದ್ಯ ಸೆಪ್ಟೆಂಬರ್ 11ರಂದು ದುಬೈನಲ್ಲಿ ನಡೆಯಲಿದೆ.

ಇದನ್ನೂ ಓದಿ : Mayank Agarwal out : ಪಂಜಾಬ್ ಕಿಂಗ್ಸ್ ತಂಡದ ನಾಯಕತ್ವದಿಂದ ಮಯಾಂಕ್’ಗೆ ಕೊಕ್.. ಕುಂಬ್ಲೆ ಬಳಿಕ ಮತ್ತೊಬ್ಬ ಕನ್ನಡಿಗನ ಪಟ್ಟಕ್ಕೆ ಕುತ್ತು

ಇದನ್ನೂ ಓದಿ : Asia Cup 2022: ಏಷ್ಯಾ ಕಪ್ ಟೂರ್ನಿಯಲ್ಲಿ ಆಡಲು ದುಬೈಗೆ ಹಾರಿದ ರೋಹಿತ್ ಶರ್ಮಾ ಬಳಗ

6 Team, 1 Dream, Asia Cup 2022 Trophy Unveiled Abu Dubai Who will be the champion

Comments are closed.