ICC T20 World Cup India Team: ಭಾರತ ಟಿ20 ವಿಶ್ವಕಪ್ ತಂಡದಲ್ಲೊಬ್ಬ “ಕೋಟಾ” ಪ್ಲೇಯರ್

ಬೆಂಗಳೂರು: (Quota Player Team India) ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನು (ICC T20 World Cup India Team) ಪ್ರಕಟಿಸಲಾಗಿದ್ದು, ತಂಡದಲ್ಲಿ ಒಬ್ಬ ಆಟಗಾರನ ಆಯ್ಕೆಯ ಬಗ್ಗೆ ಅಪಸ್ವರ ಎದ್ದಿದೆ. ಆ ಆಟಗಾರನನ್ನು ಯಾವ ಮಾನದಂಡದ ಮೇಲೆ ಆಯ್ಕೆ ಮಾಡಲಾಗಿದೆ ಎಂದು ಕ್ರಿಕೆಟ್ ಪ್ರಿಯರು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಶ್ನಿಸುತ್ತಿದ್ದಾರೆ. ಅಂದ ಹಾಗೆ ಆ ಆಟಗಾರನ ಹೆಸರು ರಿಷಭ್ ಪಂತ್ (Rishabh Pant).

ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್’ಗೆ ರೋಹಿತ್ ಶರ್ನಾ ನಾಯಕತ್ವದಲ್ಲಿ 15 ಮಂದಿ ಆಟಗಾರರ ತಂಡವನ್ನು ಬಿಸಿಸಿಐ ಆಯ್ಕೆ ಸಮಿತಿ ಸೋಮವಾರ ಪ್ರಕಟಿಸಿದೆ. ಸತತ ವೈಫಲ್ಯಗಳ ನಂತರವೂ ಎಡಗೈ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ರಿಷಬ್ ಪಂತ್ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ತಂಡಕ್ಬೊಬ್ಬ ಎಡಗೈ ಬ್ಯಾಟ್ಸ್’ಮನ್ ಬೇಕು ಎಂಬ ಒಂದೇ ಒಂದು ಕಾರಣಕ್ಕೆ ರಿಷಭ್ ಪಂತ್ ಅವರನ್ನು ತಂಡದಲ್ಲಿ ಮುಂದುವರಿಸಲಾಗಿದೆ. ಎಡಗೈ ಬ್ಯಾಟ್ಸ್’ಮನ್ ಕೋಟಾದಲ್ಲಿ ಪಂತ್ ಸ್ಥಾನ ಉಳಿಸಿಕೊಂಡಿದ್ದಾರೆ. ಇದು ಕ್ರಿಕೆಟ್ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ. ರಿಷಭ್ ಪಂತ್’ಗಾಗಿ ಸಂಜು ಸ್ಯಾಮ್ಸನ್’ರಂತಹ (Sanju Samson) ಪ್ರತಿಭಾವಂತರನ್ನು ಕಡೆಗಣಿಸಲಾಗುತ್ತಿದೆ ಎಂದು ಕ್ರಿಕೆಟ್ ಫ್ಯಾನ್ಸ್ ಅಸಮಾಧಾನ ಹೊರ ಹಾಕುತ್ತಿದ್ದಾರೆ.

ರಿಷಭ್ ಪಂತ್ Vs ಸಂಜು ಸ್ಯಾಮ್ಸನ್

ರಿಷಭ್ ಪಂತ್ ಹಾಗೂ ಸಂಜು ಸ್ಯಾಮ್ಸನ್ ಅವರ ಈ ವರ್ಷದ ಟಿ20 ದಾಖಲೆಗಳನ್ನು ನೋಡಿದ್ರೆ ಸಂಜು ಸ್ಯಾಮ್ಸನ್ ಹೆಚ್ಚು ರನ್ ಗಳಿಸಿದ್ದಾರೆ. ರಿಷಭ್ ಪಂತ್ ಈ ವರ್ಷ ಒಟ್ಟು 15 ಟಿ20 ಪಂದ್ಯಗಳನ್ನಾಡಿದ್ದು, 22.81ರ ಸರಾಸರಿಯಲ್ಲಿ ಕೇವಲ 251 ರನ್ ಗಳಿಸಿದ್ದಾರೆ. ಇದೇ ವೇಳೆ ಸಂಜು ಸ್ಯಾಮ್ಸನ್ 2022ರಲ್ಲಿ ಆಡಿದ ಕೇವಲ 3 ಟಿ20 ಪಂದ್ಯಗಳಿಂದ 61ರ ಅಮೋಘ ಸರಾಸರಿಯಲ್ಲಿ 122 ರನ್ ಕಲೆ ಹಾಕಿದ್ದಾರೆ. ಅಷ್ಟೇ ಅಲ್ಲ, ಟಿ20 ಕ್ರಿಕೆಟ್’ನಲ್ಲಿ ಸಂಜು ಸ್ಯಾಮ್ಸನ್ 135ಕ್ಕೂ ಹೆಚ್ಚಿನ ಸ್ಟ್ರೈಕ್ ರೇಟ್ ಹೊಂದಿದ್ದರೆ, ರಿಷಭ್ ಪಂತ್ ಕೇವಲ 126ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ದಾಖಲೆಗಳು ಸಂಜು ಸ್ಯಾಮ್ಸನ್ ಪರವಾಗಿದ್ದರೂ ರಿಷಭ್ ಪಂತ್ ಅವರಿಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಿರುವುದು ಎಷ್ಟು ಸರಿ ಎಂದು ಕ್ರಿಕೆಟ್ ಪ್ರಿಯರು ಪ್ರಶ್ನೆ ಎತ್ತಿದ್ದಾರೆ.

ಅದ್ಭುತ ಪ್ರತಿಭಾವಂತ ಸಂಜು ಸ್ಯಾಮ್ಸನ್ ಅವರ ಕ್ರಿಕೆಟ್ ಕರಿಯರ್ ಅನ್ನು ಸ್ವತಃ ಬಿಸಿಸಿಐ ತನ್ನ ಕೈಯಾರೆ ಹಾಳು ಮಾಡುತ್ತಿದೆ ಎಂದು ಕ್ರಿಕೆಟ್ ಪ್ರಿಯರು ಕಿಡಿ ಕಾರಿದ್ದಾರೆ. ಮತ್ತೊಂದೆಡ ಸಂಜು ಸ್ಯಾಮ್ಸನ್ ಅವರ ಸಾಮರ್ಥ್ಯದ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ “ಆತನಿಗೆ ಬಿಸಿಸಿಐ ಬೆಂಬಲ ಕೊಟ್ಟರೆ ಆತ ವಿಶ್ವದ ನಂ.1 ಬ್ಯಾಟ್ಸ್’ಮನ್ ಆಗಬಲ್ಲ. ಸಂಜು ಸ್ಯಾಮ್ಸನ್ ವಿಶ್ವಕಪ್ ಟೂರ್ನಿಯಲ್ಲಿ ಆಡದಿದ್ದರೆ ಅದರಿಂದ ಸಂಜುಗೆ ನಷ್ಟವಿಲ್ಲ, ಭಾರತ ತಂಡಕ್ಕೆ ನಷ್ಟ” ಎಂದಿದ್ದಾರೆ.

ಇದನ್ನೂ ಓದಿ : T20 World Cup: 15 ಮಂದಿ ಸದಸ್ಯರ ಟೀಮ್ ಇಂಡಿಯಾ ಪ್ರಕಟ; ತಂಡದಲ್ಲಿ ಯಾರ್ಯಾರಿದ್ದಾರೆ ಗೊತ್ತಾ?

ಇದನ್ನೂ ಓದಿ : Asia Cup Final : ಪಾಕಿಸ್ತಾನ ಸೋತ ಬೆನ್ನಲ್ಲೇ ಭಾರತದ ಪತ್ರಕರ್ತನ ಫೋನ್ ಕಸಿದುಕೊಂಡ PCB ಚೀಫ್ ರಮೀಜ್ ರಾಜಾ

A “quota” player in team India ICC T20 World Cup squad Rishabh Pant And Sanju Samson

Comments are closed.