Anand Mahindra Raghavindra DVGI : ಟೀಮ್ ಇಂಡಿಯಾ ಆಟಗಾರರ Shoes ಕ್ಲೀನ್ ಮಾಡಿದ ಕನ್ನಡಿಗನ ಬಗ್ಗೆ ಮಹೀಂದ್ರಾ ಚೇರ್ಮನ್ ಟ್ವೀಟ್

ಬೆಂಗಳೂರು: Anand Mahindra Raghavindra DVGI :ಬಾಂಗ್ಲಾದೇಶ ವಿರುದ್ಧದ ಟಿ20 ವಿಶ್ವಕಪ್ (T20 World Cup 2022) ಪಂದ್ಯದಲ್ಲಿ ಟೀಮ್ ಇಂಡಿಯಾ ಆಟಗಾರ ಶೂಸ್ ಕ್ಲೀನ್ ಮಾಡಿ ಸುದ್ದಿಯಾಗಿರುವ ತಂಡದ ಥ್ರೋಡೌನ್ ಸ್ಪೆಷಲಿಸ್ಟ್ ರಾಘವೇಂದ್ರ ಡ್ವಿಗಿ ಬಗ್ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ರಾಘವೇಂದ್ರ ಅವರ ನಿಸ್ವಾರ್ಥ ಮನೋಭಾವದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಇದೀಗ ದೇಶದ ಖ್ಯಾತ ಮೋಟಾರ್ ನಿರ್ಮಾಣ ಸಂಸ್ಥೆಯಾಗಿರುವ ಮಹೀಂದ್ರಾ ಕಂಪನಿಯ ಮುಖ್ಯಸ್ಥ ಆನಂದ್ ಮಹೀಂದ್ರಾ, ಕನ್ನಡಿಗ ರಾಘವೇಂದ್ರ ಡ್ವಿಗಿ ಬಗ್ಗೆ ಮೆಚ್ಚುಗೆಯ ಸಾಲುಗಳನ್ನು ಬರೆದು ಟ್ವೀಟ್ ಮಾಡಿದ್ದಾರೆ.

“ಯಾವುದೇ ಸಮುದಾಯದಲ್ಲಿ ಅಥವಾ ಸಂಸ್ಥೆಯಲ್ಲಿ ಮಹತ್ವವಿಲ್ಲದ ಅಥವಾ ಪ್ರಸ್ತುತವಿಲ್ಲದ ಕೆಲಸ ಯಾವುದೂ ಇಲ್ಲ.ವಾಸ್ತವವಾಗಿ, ಅತ್ಯಂತ ವಿನಮ್ರವಾಗಿ ಮತ್ತು ತೆರೆಯ ಹಿಂದೆ ಕೆಲಸಗಳನ್ನು ನಿರ್ವಹಿಸುವ ಜನರಲ್ಲಿ ಹೆಚ್ಚಿನ ಸ್ಫೂರ್ತಿ ಅಥವಾ ಬದ್ಧತೆಯನ್ನು ಹೆಚ್ಚಾಗಿ ಕಾಣಬಹುದು” ಎಂದು ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ. ಅಡಿಲೇಡ್ ಓವಲ್ ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಭಾರತ 5 ರನ್’ಗಳ ರೋಚಕ ಗೆಲುವು ಸಾಧಿಸಿ ಸೆಮಿಫೈನಲ್ ಸ್ಥಾನವನ್ನು ಖಚಿತ ಪಡಿಸಿಕೊಂಡಿತ್ತು. ಬಾಂಗ್ಲಾ ವಿರುದ್ಧ ಭಾರತ ಗೆಲ್ಲಲು ಕಾರಣ ಕನ್ನಡಿಗ ಕೆ.ಎಲ್ ರಾಹುಲ್ ಬಾರಿಸಿದ ಸ್ಫೋಟಕ ಅರ್ಧಶತಕ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಅಜೇಯ ಅರ್ಧಶತಕ. ಇವರ ಜೊತೆ ಟೀಮ್ ಇಂಡಿಯಾ ಗೆಲುವಿನಲ್ಲಿ ತಂಡದ ಥ್ರೋಡೌನ್ ಸ್ಪೆಷಲಿಸ್ಟ್ ರಾಘವೇಂದ್ರ ಡ್ವಿಗಿ (Raghavindraa DVGI) ಮಹತ್ವದ ಪಾತ್ರ ವಹಿಸಿದ್ದರು.

ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಕಾರಣ ಬಾಂಗ್ಲಾ ಗೆಲುವಿಗೆ 16 ಓವರ್’ಗಳಲ್ಲಿ 151 ರನ್’ಗಳ ಪರಿಷ್ಕೃತ ಗುರಿ ನಿಗದಿ ಪಡಿಸಲಾಗಿತ್ತು. ಮಳೆಯಿಂದ ಒದ್ದೆಯಾಗಿದ್ದ ಮೈದಾನದಿಂದ ಸೂಪರ್ ಸಾಪರ್’ಗಳ ಮೂಲಕ ನೀರು ಹೊರ ಹಾಕಿದ್ರೂ, ಹುಲ್ಲು ಹಾಸಿನ ಮೇಲೆ ತೇವ ಹಾಗೇ ಉಳಿದುಕೊಂಡಿತ್ತು. ಹೀಗಾಗಿ ಫೀಲ್ಡಿಂಗ್ ಮಾಡುತ್ತಿದ್ದ ಟೀಮ್ ಇಂಡಿಯಾ ಆಟಗಾರರ ಶೂ ಸ್ಪೈಕ್’ನಲ್ಲಿ ಮಣ್ಣು ಅಂಟಿಕೊಂಡು ಮೈದಾನದಲ್ಲಿ ಜಾರಿ ಬೀಳುವ ಅಪಾಯವಿತ್ತು. ಈ ಅಪಾಯದಿಂದ ಆಟಗಾರರನ್ನು ರಕ್ಷಿಸಿದ್ದು ತಂಡದ ಸಹಾಯಕ ಸಿಬ್ಬಂದಿ ರಾಘವೇಂದ್ರ. ಭಾರತ ತಂಡದ ಆಟಗಾರರು ಫೀಲ್ಡಿಂಗ್ ನಡೆಸುತ್ತಿದ್ದ ವೇಳೆ ಕೈಯಲ್ಲಿ ಬ್ರಷ್ ಹಿಡಿದು ಬೌಂಡರಿ ಗೆರೆಯ ಸುತ್ತ ಓಡಾಡಿದ ರಾಘವೇಂದ್ರ ಆಟಗಾರರ ಶೂನಲ್ಲಿ ಸೇರಿದ್ದ ಮಣ್ಣನ್ನು ತೆಗೆದರು. ಇದರಿಂದ ಆಟಗಾರರು ಮೈದಾನದಲ್ಲಿ ಜಾರಿ ಬೀಳುವ ಸಂಭಾವ್ಯ ಅಪಾಯದಿಂದ ಪಾರಾಗಿದ್ದರು. ಹೀಗೆ ಭಾರತದ ಗೆಲುವಿಗೆ ರಾಘವೇಂದ್ರ ಕಿರು ಕಾಣಿಕೆ ನೀಡಿದ್ದರು. ರಾಘವೇಂದ್ರ ಅವರ ಈ ಕಾರ್ಯಕ್ಕೆ ಕ್ರಿಕೆಟ್ ಪ್ರಿಯರು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿತ್ತು.

ಇದನ್ನೂ ಓದಿ : India Vs Bangladesh: ಭಾರತದ ಗೆಲುವಿಗೆ ಕನ್ನಡಿಗನ ಕಿರು ಕಾಣಿಕೆ, ಬಾಂಗ್ಲಾ ವಿರುದ್ಧದ ಗೆಲುವಿನ ಹಿಂದೆ ‘ಬ್ರಷ್’ ಮಹಿಮೆ

ಇದನ್ನೂ ಓದಿ : Raghavendra Divgi life story : ಭಾರತ ವಿಶ್ವಕಪ್ ತಂಡದಲ್ಲಿರುವ ಥ್ರೋಡೌನ್ ಸ್ಪೆಷಲಿಸ್ಟ್ ರಾಘವೇಂದ್ರ ಅವರ ಮನಮಿಡಿಯುವ ಕಥೆ

Anand Mahindra praises Raghavindra DVGI for Cleaning Shoes Indian Players

Comments are closed.