Australia beat India in 3rd test : ತಾನೇ ತೋಡಿದ ಖೆಡ್ಡಾಗೆ ಬಿದ್ದ ಟೀಮ್ ಇಂಡಿಯಾ, 3ನೇ ಟೆಸ್ಟ್‌ನಲ್ಲಿ ಕಾಂಗರೂ ಪಡೆಗೆ 9 ವಿಕೆಟ್ ಭರ್ಜರಿ ಜಯ

ಇಂದೋರ್: ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ (India Vs Australia Border-Gavaskar test series) 3ನೇ ಪಂದ್ಯದಲ್ಲಿ ಆತಿಥೇಯ ಭಾರತ ತಂಡ ತಾನೇ ತೋಡಿದ ಖೆಡ್ಡಾಗೆ ಬಿದ್ದಿದೆ. ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಸ್ಪಿನ್ ಬಲೆಯೊಳಗೆ ಕಾಂಗರೂಗಳನ್ನು ಬಂಧಿಸಿದ್ದ ಟೀಮ್ ಇಂಡಿಯಾಗೆ ಅದೇ ತಂತ್ರ 3ನೇ ಟೆಸ್ಟ್ (Australia beat India in 3rd test) ಪಂದ್ಯದಲ್ಲಿ ತಿರುಗುಬಾಣವಾಗಿದೆ. ಗೆಲ್ಲಲು 76 ರನ್’ಗಳ ಗುರಿ ಪಡೆದಿದ್ದ ಆಸ್ಟ್ರೇಲಿಯಾ ಇನ್ನಿಂಗ್ಸ್’ನ ಮೊದಲ ಎಸೆತದಲ್ಲೇ ಉಸ್ಮಾನ್ ಖವಾಜ ವಿಕೆಟ್ ಕಳೆದುಕೊಂಡಿತು.

ಆದರೆ ಮುರಿಯದ 2ನೇ ವಿಕೆಟ್’ಗೆ ಟ್ರಾವಿಸ್ ಹೆಡ್ (53 ಎಸೆತಗಳಲ್ಲಿ ಅಜೇಯ 49 ರನ್) ಮತ್ತು ಮಾರ್ನಸ್ ಲಬುಶೇನ್ (ಅಜೇಯ 28) 78 ರನ್’ಗಳ ಜೊತೆಯಾಟವಾಡಿ ತಂಡಕ್ಕೆ 9 ವಿಕೆಟ್’ಗಳ ಭರ್ಜರಿ ಗೆಲುವು ತಂದುಕೊಟ್ಟರು. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ತಂಡ 4 ಪಂದ್ಯಗಳ ಟೆಸ್ಟ್ ಸರಣಿಯನ್ನು ಹಿನ್ನಡೆಯನ್ನು 1-2ಕ್ಕೆ ಇಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಪ್ರಥಮ ಇನ್ನಿಂಗ್ಸ್’ನಲ್ಲಿ 88 ರನ್’ಗಳ ಹಿನ್ನಡೆಗೊಳಗಾದ ಭಾರತ, ದ್ವಿತೀಯ ಇನ್ನಿಂಗ್ಸ್’ನಲ್ಲಿ ಆಸೀಸ್’ನ ಅನುಭವಿ ಆಫ್’ಸ್ಪಿನ್ನರ್ ನೇಥನ್ ಲಯಾನ್ ದಾಳಿಗೆ ತತ್ತರಿಸಿ ಕೇವಲ 163 ರನ್’ಗಳಿಗೆ ಆಲೌಟಾಗಿತ್ತು.

ಭಾರತದ ದ್ವಿತೀಯ ಇನ್ನಿಂಗ್ಸ್’ನಲ್ಲಿ ಚೇತೇಶ್ವರ್ ಪೂಜಾರ 59 ರನ್ ಹಾಗೂ ಶ್ರೇಯಸ್ ಅಯ್ಯರ್ 26 ರನ್ ಗಳಿಸಿದ್ದನ್ನು ಹೊರತು ಪಡಿಸಿದ್ರೆ, ಬೇರಾವ ಬ್ಯಾಟ್ಸ್’ಮನ್ ಕೂಡ ತಂಡಕ್ಕೆ ಆಸರೆಯಾಗಲಿಲ್ಲ. ನಾಯಕ ರೋಹಿತ್ ಶರ್ಮಾ (12), ಕನ್ನಡಿಗ ಕೆ.ಎಲ್ ರಾಹುಲ್ ಬದಲು ಪ್ಲೇಯಿಂಗ್ XIನಲ್ಲಿ ಸ್ಥಾನ ಪಡೆದ ಶುಭಮನ್ ಗಿಲ್ (5), ವಿರಾಟ್ ಕೊಹ್ಲಿ (13), ರವೀಂದ್ರ ಜಡೇಜ (7), ವಿಕೆಟ್ ಕೀಪರ್ ಕೆ.ಎಸ್ ಭರತ್ (3) ಮತ್ತೊಮ್ಮೆ ತಂಡಕ್ಕೆ ಕೈ ಕೊಟ್ಟರು. ಆಸೀಸ್ ಪರ ಮಾರಕ ದಾಳಿ ಸಂಘಟಿಸಿದ ನೇಥನ್ ಲಯಾನ್ 64 ರನ್ನಿಗೆ 8 ವಿಕೆಟ್ ಕಬಳಿಸಿದರು.

ಇದನ್ನೂ ಓದಿ : Women’s Premier League: ಮಹಿಳಾ ಪ್ರೀಮಿಯರ್ ಲೀಗ್, 5 ತಂಡಗಳ ಪೈಕಿ 3 ತಂಡಗಳಿಗೆ ಕಾಂಗರೂಗಳೇ ಕ್ಯಾಪ್ಟನ್ಸ್

ಇದನ್ನೂ ಓದಿ : India vs Australia 3rd test : ಇಂದೋರ್ ಟೆಸ್ಟ್ ಪಂದ್ಯ; ಆಸೀಸ್ ಸ್ಪಿನ್ ಜಾಲದಲ್ಲಿ ಬಂಧಿಯಾದ ಭಾರತ, ಸೋಲಿನ ಸುಳಿಯಲ್ಲಿ ರೋಹಿತ್ ಬಳಗ

ಇದನ್ನೂ ಓದಿ : ತುಳುನಾಡು ಕ್ರಿಕೆಟ್‌ ಲೀಗ್‌ : ಅರಬ್‌ ದೇಶದಲ್ಲಿ ಕನ್ನಡಿಗರ ಕ್ರಿಕೆಟ್‌ ಹಬ್ಬ

ಪ್ರಥಮ ಇನ್ನಿಂಗ್ಸ್’ನಲ್ಲಿ 3 ವಿಕೆಟ್ ಸಹಿತ ಪಂದ್ಯದಲ್ಲಿ ಒಟ್ಟು 11 ವಿಕೆಟ್ ಕಬಳಿಸಿದ ನೇಥನ್ ಲಯಾನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಸರಣಿಯ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಮಾರ್ಚ್ 9ರಂದು ಅಹ್ಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ.

Australia beat India in 3rd test: Team India fell into a self-inflicted mess, Kangaroos won by 9 wickets in the 3rd test.

Comments are closed.