ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗೆ ಆಸೀಸ್ ಎಂಟ್ರಿ, ಹೀಗಿದೆ ಭಾರತದ ಫೈನಲ್ ಪ್ರವೇಶದ ಲೆಕ್ಕಾಚಾರ

ಇಂದೋರ್ : ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ (India Vs Australia Border-Gavaskar test series) 3ನೇ ಪಂದ್ಯದಲ್ಲಿ ಆತಿಥೇಯ ಭಾರತವನ್ನು 9 ವಿಕೆಟ್’ಗಳಿಂದ ಬಗ್ಗು ಬಡಿದ ಆಸ್ಟ್ರೇಲಿಯಾ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್’ಗೆ (ICC World test championship – WTC 2021-23) ಎಂಟ್ರಿ ಕೊಟ್ಟಿದೆ. ಹೋಳ್ಕರ್ ಮೈದಾನದಲ್ಲಿ ನಡೆದ ತೃತೀಯ ಟೆಸ್ಟ್ ಪಂದ್ಯವನ್ನು ಮೂರೇ ದಿನಗಳಲ್ಲಿ ಗೆದ್ದುಕೊಂಡ ಆಸೀಸ್ ಜೂನ್ ತಿಂಗಳಲ್ಲಿ ಇಂಗ್ಲೆಂಡ್’ನ ಲಾರ್ಡ್ಸ್ ಮೈದಾನದಲ್ಲಿ ನಡೆಯುವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್’ಗೆ ಅರ್ಹತೆ ಪಡೆಯಿತು.

2021-23ನೇ ಸಾಲಿನ ಟೆಸ್ಟ್ ಚಾಂಪಿಯನ್’ಷಿಪ್ ಋತುವಿನಲ್ಲಿ ಆಡಿದ 18 ಟೆಸ್ಟ್ ಪಂದ್ಯಗಳಲ್ಲಿ 11ನ್ನು ಗೆದ್ದಿರುವ ಆಸೀಸ್ ಫೈನಲ್’ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಇದೇ ವೇಳೆ ಇಂದೋರ್ ಟೆಸ್ಟ್ ಪಂದ್ಯವನ್ನು ಸೋಲುವುದರೊಂದಿಗೆ ಭಾರತ ತಂಡ 2021-23ನೇ ಸಾಲಿನ ಐಸಿಸಿ ಟೆಸ್ಟ್ ಚಾಂಪಿಯನ್’ಷಿಪ್ ಋತುವಿನಲ್ಲಿ 5ನೇ ಸೋಲು ಕಂಡಂತಾಗಿದೆ. ಇದರೊಂದಿಗೆ ಭಾರತದ ಅಂಕ ಸರಾಸರಿ 64.06ರಿಂದ 60.29ಕ್ಕೆ ಕುಸಿದಿದೆ.

ಐಸಿಸಿ ಟೆಸ್ಟ್ ಚಾಂಪಿಯನ್’ಷಿಪ್’ನಲ್ಲಿ ಫೈನಲ್ ಪ್ರವೇಶಿಸಬೇಕಾದರೆ ಭಾರತ ತಂಡ ಅಹ್ಮದಾಬಾದ್’ನಲ್ಲಿ ಮಾರ್ಚ್ 9ರಿಂದ ಆರಂಭವಾಗಲಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 4ನೇ ಪಂದ್ಯವನ್ನು ಗೆಲ್ಲಲೇಬೇಕಿದೆ. ಒಂದೊಮ್ಮೆ ಸೋತರೆ ಫೈನಲ್ ಅರ್ಹತೆಗಾಗಿ ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿಯ ಫಲಿತಾಂಶವನ್ನು ಅವಲಂಬಿಸಬೇಕಾಗುತ್ತೆ. ಅಹ್ಮದಾಬಾದ್ ಟೆಸ್ಟ್ ಪಂದ್ಯವನ್ನು ಭಾರತ ಗೆದ್ದರೆ ತಂಡದ ಒಟ್ಟು ಅಂಕಗಳ ಸರಾಸರಿ 62.50ಗೆ ಏರಿಕೆಯಾಗಲಿದೆ.

ಇದನ್ನೂ ಓದಿ : Women’s Premier League: ಮಹಿಳಾ ಪ್ರೀಮಿಯರ್ ಲೀಗ್, 5 ತಂಡಗಳ ಪೈಕಿ 3 ತಂಡಗಳಿಗೆ ಕಾಂಗರೂಗಳೇ ಕ್ಯಾಪ್ಟನ್ಸ್

ಇದನ್ನೂ ಓದಿ : Women’s Premier League: ಮಹಿಳಾ ಪ್ರೀಮಿಯರ್ ಲೀಗ್, 5 ತಂಡಗಳ ಪೈಕಿ 3 ತಂಡಗಳಿಗೆ ಕಾಂಗರೂಗಳೇ ಕ್ಯಾಪ್ಟನ್ಸ್

ಇದನ್ನೂ ಓದಿ : India vs Australia 3rd test : ಇಂದೋರ್ ಟೆಸ್ಟ್ ಪಂದ್ಯ; ಆಸೀಸ್ ಸ್ಪಿನ್ ಜಾಲದಲ್ಲಿ ಬಂಧಿಯಾದ ಭಾರತ, ಸೋಲಿನ ಸುಳಿಯಲ್ಲಿ ರೋಹಿತ್ ಬಳಗ

ಐಸಿಸಿ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ ಲೆಕ್ಕಾಚಾರ :

  • 18 ಪಂದ್ಯಗಳಿಂದ 148 ಅಂಕ ಗಳಿಸಿ ಫೈನಲ್ ಪ್ರವೇಶಿಸಿದ ಆಸ್ಟ್ರೇಲಿಯಾ.
  • ಆಸ್ಟ್ರೇಲಿಯಾ ತಂಡದ ಅಂಕ ಸರಾಸರಿ 68.51.
  • ಫೈನಲ್’ನ ಮತ್ತೊಂದು ಸ್ಥಾನಕ್ಕಾಗಿ ಭಾರತ ಮತ್ತು ಶ್ರೀಲಂಕಾ ಮಧ್ಯೆ ಪೈಪೋಟಿ.
  • ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯವನ್ನು ಭಾರತ ಗೆದ್ದರೆ ಭಾರತದ ಕೈಯಲ್ಲಿ 135 ಅಂಕ.
  • 62.50 ಅಂಕ ಸರಾಸರಿಯೊಂದಿಗೆ ಫೈನಲ್ ಪ್ರವೇಶಿಸಿರುವ ಟೀಮ್ ಇಂಡಿಯಾ.
  • ಆಗ ನ್ಯೂಜಿಲೆಂಡ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಶ್ರೀಲಂಕಾ 2-0 ಅಂತರದಲ್ಲಿ ಗೆದ್ದರೂ ಭಾರತದ ಫೈನಲ್ ಸ್ಥಾನ ಸೇಫ್.
  • ಒಂದು ವೇಳೆ 4ನೇ ಟೆಸ್ಟ್ ಪಂದ್ಯವನ್ನು ಆಸೀಸ್ ಗೆದ್ದರೆ ಅಥವಾ ಪಂದ್ಯ ಡ್ರಾಗೊಂಡರೆ 58.79ಕ್ಕೆ ಕುಸಿಯಲಿರುವ ಭಾರತದ ಅಂಕ ಸರಾಸರಿ.
  • ಇದೇ ವೇಳೆ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಶ್ರೀಲಂಕಾ 2-0 ಅಂತರದಲ್ಲಿ ಗೆದ್ದರೆ 61.11ಕ್ಕೆ ಏರಲಿರುವ ಲಂಕಾ ತಂಡದ ಅಂಕ ಸರಾಸರಿ.
  • ಒಂದು ವೇಳೆ ಆಸೀಸ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯವನ್ನು ಭಾರತ ಸೋತು, ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಶ್ರೀಲಂಕಾ ಸೋತರೆ, ಭಾರತ ಫೈನಲ್’ಗೆ.

Aussies entry to ICC World Test Championship final, this is the calculation of India’s final entry

Comments are closed.