Border-Gavaskar test series: ಆಸ್ಟ್ರೇಲಿಯಾ ಬೃಹತ್ ಮೊತ್ತ, ಟೀಮ್ ಇಂಡಿಯಾ ಮುಂದಿದೆ ಬಿಗ್ ಚಾಲೆಂಜ್

ಅಹ್ಮದಾಬಾದ್: (Border-Gavaskar Test series ) ಆತಿಥೇಯ ಭಾರತ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡ ಬೃಹತ್ ಮೊತ್ತ ಕಲೆ ಹಾಕಿದೆ. ಅಹ್ಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ (Border-Gavaskar test series) 4ನೇ ಪಂದ್ಯದ 2ನೇ ದಿನ ಮೇಲುಗೈ ಸಾಧಿಸಿದ ಆಸೀಸ್ ತನ್ನ ಪ್ರಥಮ ಇನ್ನಿಂಗ್ಸ್’ನಲ್ಲಿ 480 ರನ್’ಗಳ ಬೃಹತ್ ಮೊತ್ತ ಕಲೆ ಹಾಕಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಆಸೀಸ್ ಮೊದಲ ದಿನದಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 255 ರನ್ ಗಳಿಸಿತ್ತು. ಶುಕ್ರವಾರ ಆಟ ಮುಂದುವರಿಸಿದ ಆಸೀಸ್’ಗೆ ಮತ್ತೆ ಉಸ್ಮಾನ್ ಖವಾಜ ಮತ್ತು ಕ್ಯಾಮರೂನ್ ಗ್ರೀನ್ ಅಮೋಘ ಶತಕಗಳ ಮೂಲಕ ಆಸರೆಯಾದರು. ಅಜೇಯ 104 ರನ್’ಗಳಿಂದ ದಿನದಾಟ ಆರಂಭಿಸಿದ ಎಡಗೈ ಓಪನರ್ ಉಸ್ಮಾನ್ ಖವಾಜ 422 ಎಸೆತಗಳಲ್ಲಿ ತಾಳ್ಮೆಯ 180 ರನ್ ಗಳಿಸಿ ಔಟಾಗಿ ದ್ವಿಶತಕ ವಂಚಿತರಾದರು.

ಮತ್ತೊಂದೆಡೆ 49 ರನ್’ಗಳಿಂದ 2ನೇ ದಿನ ಆಟ ಮುಂದುವರಿಸಿದ ಯುವ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಬಿರುಸಿನ ಹೊಡೆತಗಳ ಮೂಲಕ ಇನ್ನಿಂಗ್ಸ್ ಕಟ್ಟಿ ಟೆಸ್ಟ್ ಕ್ರಿಕೆಟ್’ನಲ್ಲಿ ಮೊದಲ ಶತಕ ಬಾರಿಸಿದ ಸಾಧನೆ ಮಾಡಿದರು. 170 ಎಸೆತಗಳನ್ನೆದುರಿಸಿದ ಗ್ರೀನ್ 18 ಬೌಂಡರಿಗಳ ನೆರವಿನಿಂದ 114 ರನ್ ಗಳಿಸಿ ಔಟಾದರು.

8 ವಿಕೆಟ್ ನಷ್ಟಕ್ಕೆ 408 ರನ್ ಗಳಿಸಿದ್ದ ಆಸ್ಟ್ರೇಲಿಯಾ ಕೊನೆಯ 2 ವಿಕೆಟ್’ಗಳ ನೆರವಿನಿಂದ 71 ರನ್ ಕಲೆ ಹಾಕಿತು. 9ನೇ ವಿಕೆಟ್’ಗೆ ಜೊತೆಯಾದ ಸ್ಪಿನ್ನರ್’ಗಳಾದ ನೇಥನ್ ಲಯಾನ್ (34) ಮತ್ತು ಟಾಡ್ ಮರ್ಫಿ 70 ರನ್’ಗಳ ಜೊತೆಯಾಟವಾಡಿ ಭಾರತದ ಬೌಲರ್’ಗಳನ್ನು ಕಾಡಿದರು. ಅಂತಿಮವಾಗಿ ಆಸೀಸ್ ತನ್ನ ಪ್ರಥಮ ಇನ್ನಿಂಗ್ಸ್’ನಲ್ಲಿ 480 ರನ್’ಗಳಿಗೆ ಆಲೌಟಾಯಿತು. ಭಾರತ ಪರ ಆಫ್’ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 91 ರನ್ನಿಗೆ 6 ವಿಕೆಟ್ ಉರುಳಿಸಿದರು.

ನಂತರ ತನ್ನ ಪ್ರಥಮ ಇನ್ನಿಂಗ್ಸ್ ಆರಂಭಿಸಿದ ಭಾರತ 2ನೇ ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 36 ರನ್ ಗಳಿಸಿದೆ. ನಾಯಕ ರೋಹಿತ್ ಶರ್ಮಾ ಅಜೇಯ 17 ಮತ್ತು ಶುಭಮನ್ ಗಿಲ್ ಅಜೇಯ 18 ರನ್’ಗಳೊಂದಿಗೆ 3ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಇದನ್ನೂ ಓದಿ : India Vs Australia 4th test match : ಖವಾಜ 150, ಕ್ಯಾಮರೂನ್ ಗ್ರೀನ್ ಚೊಚ್ಚಲ ಶತಕ; 24 ಗಂಟೆಗಳಲ್ಲಿ 2ನೇ ಬಾರಿ ಟೀಮ್ ಇಂಡಿಯಾ ವಿಕೆಟ್ ಲೆಸ್

ಇದನ್ನೂ ಓದಿ : KL Rahul : ಕಳೆದ ಟೆಸ್ಟ್ ಸರಣಿಯಲ್ಲಿ ನಾಯಕ, ಈಗ ವಾಟರ್ ಬಾಯ್ ಕಾಯಕ : ಕೆ.ಎಲ್ ರಾಹುಲ್ ಕಥೆ ಹೇಗಾಯ್ತು ನೋಡಿ!

ಇಂಗ್ಲಿಷ್‌ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Comments are closed.