Black Raisin: ಮಹಿಳೆಯರ ಅನೇಕ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ‘ಕಪ್ಪು ಒಣದ್ರಾಕ್ಷಿ’

ಇತ್ತಿಚಿನ ದಿನಗಳಲ್ಲಿ ಮಹಿಳೆಯರಲ್ಲಿ (Women’s Health) ಅನೇಕ ದೈಹಿಕ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಣಿಸುತ್ತಿವೆ. ಪಿರಿಯಡ್ಸ್‌, ಅನೀಮಿಯಾ ಮತ್ತು ಹಾರ್ಮೋನ್‌ ಅಸಮತೋಲನದಂತಹ ಸಮಸ್ಯೆಗಳನ್ನು ಮಹಿಳೆಯರು ಎದುರಿಸುತ್ತಿದ್ದಾರೆ. ಮನೆಯಲ್ಲಿಯೇ ಸಿಗುವ ವಸ್ತುಗಳಿಂದ ಇಂತಹ ಸಮಸ್ಯೆಗಳನ್ನು ಸಮರ್ಪಕವಾಗಿ ಪರಿಹರಿಸಿಕೊಳ್ಳಬಹುದಾಗಿದೆ. ಒಣ ಹಣ್ಣುಗಳು (Dry Fruits) ಮತ್ತು ತರಕಾರಿಗಳು (Vegetables) ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತವೆ. ವೈದ್ಯರಿಂದ ಹಿಡಿದು ಮನೆಯ ಹಿರಿಯವರೆಗೂ ಅವುಗಳನ್ನು ತಿನ್ನುವಂತೆ ಸಲಹೆ ನೀಡುತ್ತಾರೆ. ಒಣ ಹಣ್ಣುಗಳು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ. ಅಂತಹವುಗಳಲ್ಲಿ ಕಪ್ಪು ಒಣದ್ರಾಕ್ಷಿಯೂ (Black Raisin) ಒಂದು. ಅನೇಕ ಪೋಷಕಾಂಶಗಳನ್ನು ಒಳಗೊಂಡಿರುವ ಕಪ್ಪು ಒಣದ್ರಾಕ್ಷಿ ಮಹಿಳೆಯರ ಆರೋಗ್ಯ ಸುಧಾರಣೆಗೆ ಉಪಯುಕ್ತವಾಗಿದೆ. ಇದರ ಬಳಕೆಯು ಮಹಿಳೆಯರ ಆರೋಗ್ಯದ ಮೇಲೆ ಯಾವ ರೀತಿಯಲ್ಲಿ ಉತ್ತಮ ಪರಿಣಾಮ ಬೀರಬಲ್ಲದು ಇಲ್ಲಿದೆ ಓದಿ.

ಕಪ್ಪು ಒಣದ್ರಾಕ್ಷಿ ಸೇವನೆಯಿಂದ ಸಿಗುವ ಪ್ರಯೋಜನಗಳು :

ಪಿರಿಯಡ್ಸ್‌ ಸಮಸ್ಯೆ :
ಕಪ್ಪು ಒಣದ್ರಾಕ್ಷಿ ರಕ್ತ ಶೋಧಕವಾಗಿದೆ. ಇದು ಅನಿಯಮಿತ ಅವಧಿಗಳು, ಪಿಸಿಓಎಸ್ ಮತ್ತು ಪಿರಿಯಡ್ಸ್ ಸಮಯದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಂತಹ ವಿವಿಧ ಮುಟ್ಟಿನ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಇದು ಐರನ್‌ ನಿಂದ ಸಮೃದ್ಧವಾಗಿದ್ದು, ಕೆಂಪು ರಕ್ತಕಣಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ರಕ್ತಹೀನತೆ ತಡೆಯಲು ಸಹಕಾರಿಯಾಗಿದೆ.

ದೇಹ ಶುದ್ಧೀಕರಿಸಲು :
ಕಪ್ಪು ಒಣದ್ರಾಕ್ಷಿಯು ನೈಸರ್ಗಿಕವಾಗಿ ದೇಹ ಶುದ್ಧೀಕರಿಸುವ ಗುಣ ಹೊಂದಿದೆ. ಇದು ದೇಹದಲ್ಲಿರುವ ಅನಗತ್ಯ ವಸ್ತುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದರಲ್ಲಿ ಆಂಟಿಒಕ್ಸಿಡೆಂಟ್‌ಗಳು ಸಹ ಕಂಡುಬರುತ್ತವೆ. ಇದು ದೇಹವನ್ನು ಸ್ವತಂತ್ರ ರಾಡಿಕಲ್ ಮತ್ತು ಇತರ ಹಾನಿಕಾರಕ ವಸ್ತುಗಳಿಂದ ರಕ್ಷಿಸುತ್ತದೆ. ಪ್ರತಿದಿನ ಇದನ್ನು ಸೇವಿಸುವುದರಿಂದ ಯಕೃತ್ತು, ಮೂತ್ರಪಿಂಡ ಮತ್ತು ಇತರ ಅಂಗಗಳನ್ನು ಸ್ವಚ್ಛಗೊಳಿಸಲು ಬಹಳಷ್ಟು ಸಹಾಯ ಮಾಡುತ್ತದೆ.

ಅನೀಮಿಯಾ ತಡೆಗಟ್ಟುವಲ್ಲಿ ಸಹಕಾರಿ:
ಕಪ್ಪು ಒಣದ್ರಾಕ್ಷಿ ಕಬ್ಬಿಣ, ವಿಟಮಿನ್ ಮತ್ತು ತಾಮ್ರದ ಉತ್ತಮ ಮೂಲವಾಗಿದೆ. ಇದು ದೇಹದಲ್ಲಿ ಕೆಂಪು ರಕ್ತ ಕಣಗಳ ಉತ್ಪಾದನೆಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಪ್ರತಿದಿನ ಕಪ್ಪು ಒಣದ್ರಾಕ್ಷಿ ಸೇವಿಸುವುದರಿಂದ ರಕ್ತಹೀನತೆಯನ್ನು ತಡೆಯಬಹುದು.

ಹೃದಯದ ಆರೋಗ್ಯ ಕಾಪಾಡುತ್ತದೆ:
ಕಪ್ಪು ಒಣದ್ರಾಕ್ಷಿ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಏಕೆಂದರೆ ಇದರಲ್ಲಿ ಆಂಟಿ–ಕೊಲೆಸ್ಟ್ರಾಲ್ ಕಂಪೌಂಡ್‌ಗಳಿವೆ. ಇದು ದೇಹದಲ್ಲಿನ LDL ಅಂದರೆ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಪಾರ್ಶ್ವವಾಯು, ಅಧಿಕ ರಕ್ತದೊತ್ತಡ ಮತ್ತು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ.

ಕಪ್ಪು ಒಣದ್ರಾಕ್ಷಿ ಬಳಸುವುದು ಹೇಗೆ?
ಕಪ್ಪು ಒಣದ್ರಾಕ್ಷಿಯನ್ನು ಇತರೆ ಒಣ ಹಣ್ಣುಗಳಂತೆ ಹಾಗೆಯೇ ಸೇವಿಸಬಹುದು. ಇಲ್ಲವೇ ಕಪ್ಪು ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿಯೂ ತಿನ್ನಬಹುದು. ನೀರು ಮತ್ತು ನೆನೆಸಿದ ಒಣದ್ರಾಕ್ಷಿ ಇವೆರಡೂ ಮಹಿಳೆಯರ ದೈಹಿಕ ಆರೋಗ್ಯಕ್ಕೆ ಬಹಳ ಉತ್ತಮವಾಗಿದೆ.

ಇದನ್ನೂ ಓದಿ : Banana Blossom Benefits : ಬಾಳೆಹಣ್ಣಿನಿಂದಷ್ಟೇ ಅಲ್ಲ; ಬಾಳೆ ಹೂವಿನಿಂದಲೂ ಇದೆ ಅನೇಕ ಪ್ರಯೋಜನಗಳು

ಇದನ್ನೂ ಓದಿ : Long Hair Beauty Tips: ನೀಳ ಕೇಶರಾಶಿ ನಿಮ್ಮದಾಗಬೇಕಾ ? ಹಾಗಾದ್ರೆ ಈ ಟಿಫ್ಸ್ ಫಾಲೋ ಮಾಡಿ

(ಸೂಚನೆ : ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಮತ್ತು ಸೂಚನೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಹೆಚ್ಚಿನ ಮಾಹಿತಿಗಾಗಿ ತಜ್ಞ ವೈದ್ಯರನ್ನು ಸಂಪರ್ಕಿಸಿ)

(Black Raisin Benefits for women’s health. It prevents anemia, irregular periods, and many more.)

Comments are closed.