Abhimanyu Eswaran : ತಂದೆ ಕಟ್ಟಿಸಿದ ತನ್ನ ಸ್ವಂತ ಮೈದಾನದಲ್ಲೇ ರಣಜಿ ಪಂದ್ಯವಾಡುತ್ತಿದ್ದಾನೆ ಅಭಿಮನ್ಯು!

ಡೆಹ್ರಾಡೂನ್: ತನ್ನದೇ ಹೆಸರಿನಲ್ಲಿರುವ ತನ್ನ ಸ್ವಂತ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡುವ ಅವಕಾಶ ಎಷ್ಟು ಜನರಿಗೆ ಸಿಗತ್ತೆ ಹೇಳಿ? ಅ ಭಾಗ್ಯ ಈಗ ಬಂಗಾಳ ಕ್ರಿಕೆಟ್ ತಂಡದ ನಾಯಕ ಅಭಿಮನ್ಯು ಈಶ್ವರನ್’ಗೆ (Abhimanyu Eswaran) ಸಿಕ್ಕಿದೆ.

ಬಂಗಾಳ ಹಾಗೂ ಆತಿಥೇಯ ಉತ್ತರಾಖಂಡ್ ನಡುವಿನ ರಣಜಿ ಟ್ರೋಫಿ ಗ್ರೂಪ್ ‘ಬಿ’ ಪಂದ್ಯ ಉತ್ತರಾಖಂಡ್’ನ ಡೆಹ್ರಾಡೂನ್’ನಲ್ಲಿರುವ ಅಭಿಮನ್ಯು ಕ್ರಿಕೆಟ್ ಅಕಾಡೆಮಿ (Abhimanyu Cricket Academy) ಮೈದಾನದಲ್ಲಿ ಆರಂಭಗೊಂಡಿದೆ. ಇದು ಬಂಗಾಳ ತಂಡದ ನಾಯಕ ಅಭಿಮನ್ಯು ಈಶ್ವರನ್ (Abhimanyu Cricket Academy ground) ಅವರ ಹೆಸರಿನಲ್ಲಿ ತಂದೆ ನಿರ್ಮಿಸಿರುವ ಕ್ರಿಕೆಟ್ ಕ್ರೀಡಾಂಗಣ.

27 ವರ್ಷದ ಅಭಿಮನ್ಯು ಈಶ್ವರನ್ ಅವರ ತಂದೆ ರಂಗನಾಥನ್ ಪರಮೇಶ್ವರನ್ ಕೆಲ ವರ್ಷಗಳ ಹಿಂದೆ ಮಗನ ಹೆಸರಿನಲ್ಲಿ ಈ ಕ್ರೀಡಾಂಗಣ ನಿರ್ಮಿಸಿದ್ದರು. ಇದೀಗ ಮಗನೇ ಆ ಕ್ರೀಡಾಂಗಣದಲ್ಲಿ ರಣಜಿ ಪಂದ್ಯ ಆಡುತ್ತಿರುವುದು ತಂದೆಯ ಪಾಲಿಗೆ ಹೆಮ್ಮೆಯ ಕ್ಷಣ.ಡೆಹ್ರಾಡೂನ್’ನ ಇಂಡಿಯನ್ ಮಿಲಿಟರಿ ಅಕಾಡೆಮಿಯಿಂದ 12 ಕಿ.ಮೀ ದೂರದಲ್ಲಿ ಈ ಕ್ರೀಡಾಂಗಣ ಎದ್ದು ನಿಂತಿದೆ. ಅಂತರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣದಲ್ಲಿ ಇದುವರೆಗೆ ಕಿರಿಯರ ವಯೋಮಿತಿಯ ಕ್ರಿಕೆಟ್ ಪಂದ್ಯಗಳು ನಡೆಯುತ್ತಿದ್ದು, ಇದೇ ಮೊದಲ ಬಾರಿ ರಣಜಿ ಪಂದ್ಯ ನಡೆಯುತ್ತಿದೆ.

“ಮೊದಲು ನಾನು ನ್ಯೂಸ್ ಪೇಪರ್ ಏಜೆಂಟ್ ಆಗಿದ್ದೆ. ನಂತರ ಚಾರ್ಟೆಟ್ ಅಕೌಂಟೆಂಟ್ ಆದೆ. ಅದಾದ ನಂತರ ಕ್ರೀಡಾಂಗಣ ನಿರ್ಮಿಸುವ ಕನಸು ಹುಟ್ಟಿತು. ಡೆಹ್ರಾಡೂನ್’ನಲ್ಲಿ ಭೂಮಿ ಖರೀದಿಸಿ ಕ್ರೀಡಾಂಗಣ ನಿರ್ಮಿಸಿದೆ. ನನ್ನ ಪುತ್ರ ಅಭಿಮನ್ಯು ಮುಂದಿನ 10 ವರ್ಷಗಳಲ್ಲಿ ಭಾರತ ಪರ 80ರಿಂದ 100 ಟೆಸ್ಟ್ ಪಂದ್ಯಗಳನ್ನಾಡಬೇಕೆಂಬುದು ನನ್ನ ಕನಸು” ಎನ್ನುತ್ತಾರೆ ರಂಗನಾಥನ್ ಪರಮೇಶ್ವರನ್.

ಇದನ್ನೂ ಓದಿ : Virat Kohli 50 ODI hundreds: 2023 ವಿರಾಟ್ ಕೊಹ್ಲಿ ವರ್ಷ, ಈ ವರ್ಷವೇ 50 ಏಕದಿನ ಶತಕ ಬಾರಿಸಲಿದ್ದಾರೆ ಕಿಂಗ್ ಕೊಹ್ಲಿ

ಇದನ್ನೂ ಓದಿ : India Vs Sri Lanka T20 : ಹೊಸ ವರ್ಷ ಹೊಸ ಸವಾಲು, ನಾಳೆ ಭಾರತ Vs ಶ್ರೀಲಂಕಾ ಮೊದಲ ಟಿ20; ಇಲ್ಲಿದೆ ಪ್ಲೇಯಿಂಗ್ XI, ಮ್ಯಾಚ್ ಟೈಮ್, live ಟೆಲಿಕಾಸ್ಟ್ ಡೀಟೇಲ್ಸ್

ಇದನ್ನೂ ಓದಿ : Dexa test : ಟೀಮ್ ಇಂಡಿಯಾ ಆಟಗಾರರಿಗೆ ಇನ್ನು ಡೆಕ್ಸಾ ಪರೀಕ್ಷೆ ಕಡ್ಡಾಯ, ಏನಿದು ಡೆಕ್ಸಾ ಟೆಸ್ಟ್?

ತಮಿಳುನಾಡು ಮೂಲದವರಾದ ರಂಗನಾಥನ್ ಪರಮೇಶ್ವರನ್ ಪಂಜಾಬಿ ಮೂಲದವರನ್ನು ಮದುವೆಯಾಗಿದ್ದರು. ತಂದೆ ತಮಿಳಿಯನ್, ತಾಯಿ ಪಂಜಾಬಿ, ಕ್ರೀಡಾಂಗಣ ನಿರ್ಮಿಸಿದ್ದು ಉತ್ತರಾಖಂಡ್’ನಲ್ಲಿ. ಪುತ್ರ ಆಡುತ್ತಿರುವುದು ಬಂಗಾಳ ತಂಡದ ಪರ ಅಭಿಮನ್ಯು ಈಶ್ವರನ್.ಬಲಗೈ ಆರಂಭಿಕ ಬ್ಯಾಟ್ಸ್’ಮನ್ ಆಗಿರುವ ಅಭಿಮನ್ಯು ಈಶ್ವರನ್ ಈಗಾಗಲೇ ಭಾರತ ‘ಎ’ ಪರ ಆಡಿದ ಅನುಭವ ಹೊಂದಿದ್ದಾರೆ.

ಇತ್ತೀಚೆಗೆ ನಡೆದ ಬಾಂಗ್ಲಾಗೇಶ ವಿರುದ್ಧದ ಟೆಸ್ಟ್ ಸರಣಿಗೆ ಅಭಿಮನ್ಯು ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದರು. ಆದರೆ ಟೆಸ್ಟ್ ಪದಾರ್ಪಣೆಯ ಅವಕಾಶ ಸಿಕ್ಕಿರಲಿಲ್ಲ.ಇದುವರೆಗೆ 79 ಪ್ರಥಮದರ್ಜೆ ಪಂದ್ಯಗಳನ್ನಾಡಿರುವ ಅಭಿಮನ್ಯು ಈಶ್ವರನ್ 46.33ರ ಸರಾಸರಿಯಲ್ಲಿ 19 ಶತಕಗಳ ಸಹಿತ 5746 ರನ್ ಕಲೆ ಹಾಕಿದ್ದಾರೆ. 78 ಲಿಸ್ಟ್ ‘ಎ’ ಪಂದ್ಯಗಳಿಂದ 46.24ರ ಸರಾಸರಿಯಲ್ಲಿ 7 ಶತಕಗಳ ಸಹಿತ 3376 ರನ್ ಗಳಿಸಿದ್ದಾರೆ.

Abhimanyu Eswaran: Abhimanyu is playing Ranji matches in his own ground built by his father!

Comments are closed.