Anjeer Benefits : ಅಂಜೂರ : ಈ ಒಣ ಹಣ್ಣು ನಿಮ್ಮ ದೇಹದ ತೂಕ ಕಾಪಾಡಲು ಬಹಳ ಪ್ರಯೋಜನಕಾರಿ

ಡ್ರೈ ಫ್ರುಟ್ಸ್‌ (Dry Fruits) ಎಲ್ಲರಿಗೂ ಇಷ್ಟ. ಬಹಳಷ್ಟು ಜನರು ದ್ರಾಕ್ಷಿ, ಕರ್ಜೂರ, ಬಾದಾಮಿ, ಗೋಡಂಬಿ ಮುಂತಾದ ಒಣ ಹಣ್ಣು ಮತ್ತು ಬೀಜಗಳನ್ನು ಇಷ್ಟ ಪಡುತ್ತಾರೆ. ಆದರೆ ಕೆಲವರು ಮಾತ್ರ ಅಂಜೂರ (Fig) ವನ್ನು ತಿನ್ನುತ್ತಾರೆ. ಅಂಜೂರ ರುಚಿಯಾದ ಮತ್ತು ಆರೋಗ್ಯಕರವಾದ ಒಣ ಹಣ್ಣು (Anjeer Benefits ). ಅದು ಹಲವು ಪೋಷಕಾಂಶಗಳನ್ನು ಹೊಂದಿದೆ. ಅಂಜೂರವು ಬೊಜ್ಜನ್ನು ನಿಯಂತ್ರಿಸಬಲ್ಲದು. ಅಂಜೂರ ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆಯು ಸುಧಾರಿಸುತ್ತದೆ ಮತ್ತು ಮೂಳೆಗಳು ಬಲಿಷ್ಟವಾಗುತ್ತವೆ. ಇದರಲ್ಲಿರುವ ಹೆಚ್ಚಿನ ಪೊಟ್ಯಾಶಿಯಂ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಇದು ಕ್ಯಾಲ್ಸಿಯಂ, ಪೊಟ್ಯಾಶಿಯಂ, ಫಾಸ್ಪರಸ್‌, ಮ್ಯಾಗ್ನೇಸಿಯಂ, ಕಾಪರ್‌ ಮತ್ತು ಮ್ಯಾಂಗನೀಸ್‌ ಗಳ ಉತ್ತಮ ಮೂಲವಾಗಿದೆ. ಅಂಜೂರದಲ್ಲಿರುವ ಕಾರ್ಬೋಹೈಡ್ರೆಟ್‌ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ನಿಶ್ಯಕ್ತಿಯನ್ನು ದೂರಮಾಡಲು ಅಂಜೂರವು ಪ್ರಯೋಜನಕಾರಿಯಾಗಿದೆ.

ಹಾಗಾದರೆ, ದಿನವೊಂದಕ್ಕೆ ಎಷ್ಟು ಅಂಜೂರವನ್ನು ತಿನ್ನಬೇಕು ಅಂದರೆ 2 ರಿಂದ 3 ಒಣ ಅಂಜೂರವನ್ನು ತಿನ್ನಬಹುದು. ಚಳಿಗಾಲದಲ್ಲಿ ಇದನ್ನು ಹಾಗೆಯೇ ತಿಂದರೂ ಬೇಸಿಗೆಯಲ್ಲಿ ಮಾತ್ರ ನೀರಿನಲ್ಲಿ ನೆನೆಸಿ ತಿನ್ನುವುದು ಉತ್ತಮ. ತಾಜಾ ಅಂಜೂರ ಹಣ್ಣು ಸಿಗುವಾಗ ಅವುಗಳನ್ನು ಖಂಡಿತವಾಗಿಯೂ ಸೇವಿಸಿ. ಒಣ ಅಂಜೂರವನ್ನು ರಾತ್ರಿಯಿಡಿ ನೆನೆಸಿ ಮಾರನೆ ದಿನ ಬೆಳಿಗ್ಗೆ ಖಾಲಿ ಹೊಟ್ಟಿಯಲ್ಲಿ ಸೇವಿಸುವುದರಿಂದ ಅದರಲ್ಲಿಯ ಪೋಷಕಾಂಶಗಳನ್ನು ಸಂಪೂರ್ಣವಾಗಿ ಪಡೆದುಕೊಳ್ಳಬಹುದು.

ಅಂಜೂರದ ಪ್ರಯೋಜನಗಳು :

  • ಇದು ಚಯಾಪಚಯ ಕ್ರಿಯೆಗೆ ಸಂಬಂಧಿಸಿದ ತೊಂದರೆಗಳನ್ನು ನಿವಾರಿಸುವುದು.
  • ಜೀರ್ಣಕ್ರಿಯೆ ಸುಧಾರಿಸಿ ತೂಕ ಇಳಿಸಲು ಸಹಾಯಮಾಡುವುದು.
  • ವಿಟಮಿನ್‌ ಮತ್ತು ಮಿನರಲ್ಸ್‌ಗಳು ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಹಸಿವೆಯನ್ನು ತಡೆದು, ತೂಕ ಇಳಿಕೆಯಲ್ಲಿ ನಿಮಗೆ ಸಹಾಯಮಾಡಬಲ್ಲದು.
  • ನಾರಿನಾಂಶ ಹೆಚ್ಚಿನ ಪ್ರಮಾಣದಲ್ಲಿರುವ ಅಂಜೂರ ಸೇವೆನೆಯಿಂದ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಇದರಿಂದ ದೇಹ ಶುದ್ಧಿಕರಿಸಲು ಸಹಾಯವಾಗುವುದು.
  • ಫಿಸಿನ್‌ ಎಂಬ ಕಣ್ವವುನ್ನು ಹೊಂದಿರುವ ಅಂಜೂರವು ಆಹಾರವನ್ನು ಬೇಗನೆ ಜೀರ್ಣ ಮಾಡಲು ಸಹಾಯ ಮಾಡುತ್ತದೆ.
  • ಅಂಜೂರದಲ್ಲಿರುವ ಒಮೆಗಾ–3 ಫ್ಯಾಟಿ ಆಸಿಡ್‌ ಹೃದಯದ ಆರೋಗ್ಯ ಕಾಪಿಡಿಕೊಳ್ಳಲು ಉತ್ತಮವಾಗಿದೆ.
  • ಇದು ಸಿಹಿಯಾದ ಹಣ್ಣಾದರೂ ಸಹ ಅಂಜೂರವನ್ನು ಡಯಾಬಿಟಿಸ್‌ ಇರವವರೂ ಸೇವಿಸಬಹುದಾಗಿದೆ.

ಇದನ್ನೂ ಓದಿ : Soaked Almonds : ಹೃದಯದ ಆರೋಗ್ಯ ಕಾಪಾಡಲು ಸೇವಿಸಿ, ನೀರಿನಲ್ಲಿ ನೆನೆಸಿದ ಬಾದಾಮಿ

ಇದನ್ನೂ ಓದಿ : Dates Fruit : ಖರ್ಜೂರ ತಿನ್ನುವಾಗ ನೀವು ಈ ತಪ್ಪುಗಳನ್ನು ಮಾಡ್ಲೇಬೇಡಿ

(Anjeer Benefits how is fig beneficial for the body)

Comments are closed.