IND vs NZ Test : ಗೆಲುವಿನ ಸನಿಹದಲ್ಲೊಂದು ಸಂಕಷ್ಟ; ಭಾರತ ತಂಡದ ಈ ಸಮಸ್ಯೆಯ ನಿವಾರಣೆ ಹೇಗೆ?

ಮುಂಬೈ: ಗೆಲುವಿನ ಸನಿಹದಲ್ಲಿರುವ ಭಾರತ ತಂಡಕ್ಕೆ ( IND vs NZ Test) ಸಂಕಷ್ಟವೊಂದು ಎದುರಾಗಿದೆ. ಹೌದು ಇದು ಸುಳ್ಳಲ್ಲ, ಭಾರತ ತಂಡಕ್ಕೆ ಆಗಿದ್ದು ಮತ್ತೇನಲ್ಲ, ಆಟಗಾರರಿಗೆ ಗಾಯದ ಸಮಸ್ಯೆ. ಮುಂಬೈನ ಪ್ರಸಿದ್ಧ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದ ಮಯಂಕ್ ಅಗರ್ವಾಲ್ ಹಾಗೂ ಶುಭಮನ್ ಗಿಲ್ ಗಾಯದ ಕಾರಣ ಮೂರನೇ ದಿನದಾಟದಲ್ಲಿ ಫೀಲ್ಡಿಂಗ್‌ಗೆ ಬರಲು ಸಾಧ್ಯವಾಗಲಿಲ್ಲ.

2ನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಅಗರ್ವಾಲ್ ಅವರ ಬಲಗೈಗೆ ಪೆಟ್ಟಾಗಿತ್ತು. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಅವರು ಫೀಲ್ಡಿಂಗ್‌ ಮಾಡುತ್ತಿಲ್ಲ ಎಂದು ಬಿಸಿಸಿಐ ತಿಳಿಸಿದೆ. ಇವರು ಮೊದಲ ಇನ್ನಿಂಗ್ಸ್‌ನಲ್ಲಿ 150 ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ 62 ರನ್ ಗಳಿಸಿದ್ದರು.

ಶುಭಮನ್‌ ಗಿಲ್‌ ಕೂಡ ಕೈಬೆರಳಿಗೆ ಗಾಯ ಮಾಡಿಕೊಂಡಿದ್ದು, ಫೀಲ್ಡಿಂಗ್ ಮಾಡುತ್ತಿಲ್ಲ. ಗಾಯದ ಕಾರಣ ಅವರ ಬದಲು ಎರಡನೇ ಇನ್ನಿಂಗ್ಸ್‌ನಲ್ಲಿ ಚೇತೇಶ್ವರ್ ಪೂಜಾರ ಮಯಂಕ್ ಜತೆ ಆರಂಭಿಕನಾಗಿ ಕ್ರೀಸಿಗೆ ಬಂದಿದ್ದರು. ಆದರೂ ಎರಡನೇ ಇನ್ನಿಂಗ್ಸ್‌ನಲ್ಲಿ ಒನ್‌ಡೌನ್ ಬ್ಯಾಟಿಂಗ್‌ಗೆ ಬಂದಿದ್ದ ಗಿಲ್ 47 ರನ್ ಗಳಿಸಿದ್ದರು. ಎರಡನೇ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ಕಳೆದುಕೊಂಡು 276 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಡಿರುವ ಟೀಂ ಇಂಡಿಯಾ ದಿನದಾಟದ ಕೊನೆಯಲ್ಲಿ ನ್ಯೂಜಿಲೆಂಡ್‌ನ 5 ವಿಕೆಟ್ ಕಬಳಿಸಿದೆ. ದಿನದಾಟದ ಕೊನೆಗೆ ಪ್ರವಾಸಿ ತಂಡ ಗಳಿಸಿರುವ ಕೇವಲ ರನ್ 140.

ಎರಡನೇ ಟೆಸ್ಟ್ ( IND vs NZ Test ) ಆರಂಭಕ್ಕೂ ಮುನ್ನ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ, ಆಲ್‌ರೌಂಡರ್ ರವೀಂದ್ರ ಜಡೇಜ, ವೇಗಿ ಇಶಾಂತ್ ಶರ್ಮಾ ಗಾಯಾಳುಗಳಾಗಿರುವುದು ತಿಳಿದುಬಂದಿತ್ತು. ಹೀಗಾಗಿ ಅವರು ಪಂದ್ಯದಿಂದ ಹೊರಗುಳಿದಿದ್ದರು. ಹೀಗಾಗಿ ಭಾರತಕ್ಕೆ ಸ್ವಲ್ಪ ಮಟ್ಟಿಗಿನ ಸಂಕಷ್ಟ ಬಂದೊದಗಿದೆ. ಇದನ್ನು ಭಾರತ ತಂಡ ಹೇಗೆ ನಿವಾರಿಸಿಕೊಳ್ಳುವುದು ಎಂಬುದನ್ನು ಎದುರುನೋಡುತ್ತಿದ್ದಾರೆ ಭಾರತ ತಂಡದ ಅಭಿಮಾನಿಗಳು.

ಇದನ್ನೂ ಓದಿ: IND vs NZ Test: ಗೆದ್ದು ಬೀಗುವ ಉಮೇದನ್ನು ನನಸಾಗಿಸಿಕೊಳ್ಳುವ ಕ್ಷಣದಲ್ಲಿ ಭಾರತ ತಂಡ; ಗೆಲುವು ಇನ್ನಷ್ಟು ಸಮೀಪ

( IND vs NZ Test : IND vs New Zealand 2nd test Mayank Agarwal and gill did not field because of injuries )

Comments are closed.