ಟೀಮ್ ಇಂಡಿಯಾಗೆ ಟಾಪ್-3 ಫೋಬಿಯಾ : ಕಾಡುತ್ತಿದೆ ತ್ರಿಮೂರ್ತಿಗಳ ಅನುಪಸ್ಥಿತಿ

ಬೆಂಗಳೂರು: ಟೀಮ್ ಇಂಡಿಯಾ ಟಿ20 ತಂಡಕ್ಕೀಗ ಹೊಸ ಫೋಬಿಯಾ ಶುರುವಾಗಿದೆ. ಅದೇ ಟಾಪ್-3 ಫೋಬಿಯಾ. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್ ಲೈನಪ್’ನ ಟಾಪ್-3 ಬ್ಯಾಟ್ಸ್’ಮನ್’ಗಳು (India top 3 batsmen) ದಯನೀಯ ವೈಫಲ್ಯ ಕಂಡಿದ್ದಾರೆ. ಏಕದಿನ ಕ್ರಿಕೆಟ್’ನಲ್ಲಿ ಅಮೋಘ ಫಾರ್ಮ್’ನಲ್ಲಿರುವ ಶುಭಮನ್ ಗಿಲ್ (Shubhman Gill), ಇಶಾನ್ ಕಿಶನ್ (Ishan Kishan) ಮತ್ತು ರಾಹುಲ್ ತ್ರಿಪಾಠಿ (Rahul Tripathi) ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲೆರಡೂ ಪಂದ್ಯಗಳಲ್ಲಿ ಮುಗ್ಗರಿಸಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ ಭಾರತದ ಟಾಪ್-3 ದಾಂಡಿಗರು:
ಮೊದಲ ಟಿ20: ಇಶಾನ್ ಕಿಶನ್ 4(5), ಶುಭಮನ್ ಗಿಲ್ 7(6), ರಾಹುಲ್ ತ್ರಿಪಾಠಿ 0(6).
ಎರಡನೇ ಟಿ20: ಇಶಾನ್ ಕಿಶನ್ 19(32), ಶುಭಮನ್ ಗಿಲ್ 11(9), ರಾಹುಲ್ ತ್ರಿಪಾಠಿ 13(18).

ರೋಹಿತ್ ಶರ್ಮಾ ಮತ್ತು ಕೆ.ಎಲ್ ರಾಹುಲ್ ಅನುಪಸ್ಥಿತಿಯಲ್ಲಿ ಯುವ ಆರಂಭಿಕರಾದ ಬಲಗೈ ದಾಂಡಿಗ ಶುಭಮನ್ ಗಿಲ್ ಮತ್ತು ಎಡಗೈ ಓಪನರ್ ಇಶಾನ್ ಕಿಶನ್ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ಆದರೆ ಮೊದಲ ಎರಡೂ ಪಂದ್ಯಗಳಲ್ಲಿ ಗಿಲ್ ಮತ್ತು ಇಶಾನ್ ಕಿಶನ್ ದಯನೀಯ ವೈಫಲ್ಯ ಕಂಡಿದ್ದಾರೆ.

ಅದೇ ರೀತಿ ರನ್ ಮಷಿನ್ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಮಹಾರಾಷ್ಟ್ರದ ಬಲಗೈ ಬ್ಯಾಟ್ಸ್’ಮನ್ ರಾಹುಲ್ ತ್ರಿಪಾಠಿ ಮೂರನೇ ಕ್ರಮಾಂಕದಲ್ಲಿ ಆಡುತ್ತಿದ್ದಾರೆ. ಆದರೆ ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದ ತ್ರಿಪಾಠಿ ಲಕ್ನೋದಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ 13 ರನ್ ಗಳಿಸಿ ಔಟಾಗಿದ್ದರು.

ಇದನ್ನೂ ಓದಿ : India Vs Australia test series : ಭಾರತವನ್ನು ಮಣಿಸಲು ಆಸೀಸ್ ಮಾಸ್ಟರ್ ಪ್ಲಾನ್; ಆಸ್ಟ್ರೇಲಿಯಾದಲ್ಲೇ ಸ್ಪಿನ್ ಪಿಚ್ ನಿರ್ಮಿಸಿ ಕಾಂಗರೂಗಳು

ಇದನ್ನೂ ಓದಿ : MS Dhoni bike craze : RX100 ಬೈಕ್’ಗೆ ಹೊಸ ಲುಕ್ ಕೊಟ್ಟ ಎಂ.ಎಸ್ ಧೋನಿ; ಹೇಗಿದೆ ಗೊತ್ತಾ ಮಾಹಿ ಆರ್.ಎಕ್ಸ್ 100 ?

ಇದನ್ನೂ ಓದಿ : India won : U19 ಮಹಿಳಾ ಟಿ20 ವಿಶ್ವಕಪ್ ಗೆದ್ದು ಇತಿಹಾಸ ಬರೆದ ಟೀಮ್ ಇಂಡಿಯಾ ಹುಡುಗಿಯರು

ಮುಂದಿನ ವರ್ಷ ನಡೆಯುವ ಟಿ20 ವಿಶ್ವಕಪ್ ದೃಷ್ಠಿಯಿಂದ ಯುವ ತಂಡ ಕಟ್ಟಲು ಮುಂದಾಗಿರುವ ಬಿಸಿಸಿಐ ಹಿರಿಯ ಆಟಗಾರರನ್ನು ಟಿ20 ತಂಡದಿಂದ ಕೈ ಬಿಟ್ಟಿದೆ. ಕಳೆದ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದಿದ್ದ ರೋಹಿತ್ ಶರ್ಮಾ, ಕೆ.ಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿಯವರನ್ನು ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಿಂದಲೂ ಹೊರಗಿಡಲಾಗಿದೆ. ಈ ಬ್ಯಾಟಿಂಗ್ ತ್ರಿಮೂರ್ತಿಗಳ ಬದಲು ಸ್ಥಾನ ಪಡೆದಿರುವ ಶುಭಮನ್ ಗಿಲ್, ಇಶಾನ್ ಕಿಶನ್ ಮತ್ತು ರಾಹುಲ್ ತ್ರಿಪಾಠಿ ತಮ್ಮ ಮೇಲಿನ ನಿರೀಕ್ಷೆ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.

India top 3 batsmen: Top-3 phobia for Team India: Absence of trinity is haunting

Comments are closed.