India Vs Australia 3rd ODI : ಆಸ್ಟ್ರೇಲಿಯಾ ವಿರುದ್ಧದ “ಫೈನಲ್” ಪಂದ್ಯಕ್ಕೆ ಹೀಗಿದೆ ಟೀಮ್ ಇಂಡಿಯಾ ಪ್ಲೇಯಿಂಗ್ XI, ಸೂರ್ಯನಿಗೆ ಇದೇ ಲಾಸ್ಟ್ ಚಾನ್ಸ್

ಚೆನ್ನೈ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ (India Vs Australia 3rd ODI) ಸರಣಿಯನ್ನು 2-1ರಿಂದ ಗೆದ್ದಿದ್ದ ಟೀಮ್ ಇಂಡಿಯಾ, ಏಕದಿನ ಸರಣಿ ಗೆಲುವನ್ನು ಎದುರು ನೋಡುತ್ತಿದೆ. ಆತಿಥೇಯ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3 ಪಂದ್ಯಗಳ ಏಕದಿನ (India Vs Australia ODI series) ಸರಣಿಯ ಅಂತಿಮ ಪಂದ್ಯ ನಾಳೆ (ಬುಧವಾರ) ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ (ಚೆಪಾಕ್ ಮೈದಾನ) ನಡೆಯಲಿದೆ.

3 ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು 1-1ರ ಸಮಬಲ ಸಾಧಿಸಿದ್ದು, 3ನೇ ಪಂದ್ಯ ಸರಣಿ ನಿರ್ಣಾಯಕ ಪಂದ್ಯವಾಗಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮೊದಲ ಏಕದಿನ ಪಂದ್ಯವನ್ನು ಭಾರತ 5 ವಿಕೆಟ್’ಗಳಿಂದ ಗೆದ್ದರೆ, ವಿಶಾಖಪಟ್ಟಣದಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ 10 ವಿಕೆಟ್’ಗಳ ಭರ್ಜರಿ ಗೆಲುವು ದಾಖಲಿಸಿದ್ದ ಆಸೀಸ್ ಆತಿಥೇಯರಿಗೆ ತಿರುಗೇಟು ನೀಡಿತ್ತು. ಹೀಗಾಗಿ 3ನೇ ಪಂದ್ಯಕ್ಕೆ ಫೈನಲ್ ಮಹತ್ವ ಬಂದಿದೆ.

ಮುಂಬೈ ಬ್ಯಾಟ್ಸ್’ಮನ್ ಸೂರ್ಯಕುಮಾರ್ ಯಾದವ್ (Suryakumar Yadav) ಅವರಿಗೆ ಆಸೀಸ್ ವಿರುದ್ಧದ 3ನೇ ಏಕದಿನ ಪಂದ್ಯ ತಮ್ಮ ಸಾಮರ್ಥ್ಯ ಸಾಬೀತು ಪಡಿಸಲು ಕೊನೆಯ ಅವಕಾಶವಾಗಿದೆ. ಆಸೀಸ್ ವಿರುದ್ಧದ ಏಕದಿನ ಸರಣಿಯ ಮೊದಲ ಎರಡೂ ಪಂದ್ಯಗಳಲ್ಲಿ ಸೂರ್ಯಕುಮಾರ್ ಯಾದವ್ ಗೋಲ್ಡನ್ ಡಕ್’ಗೆ ಔಟಾಗಿದ್ದಾರೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಎದುರಿಸಿದ ಮೊದಲ ಎಸೆತದಲ್ಲೇ ವೇಗಿ ಮಿಚೆಲ್ ಸ್ಟಾರ್ಕ್’ಗೆ ಎಲ್ಬಿಡಬ್ಲ್ಯೂ ಆಗಿದ್ದ ಸೂರ್ಯಕುಮಾರ್ ವಿಶಾಖಪಟ್ಟಣದಲ್ಲಿ ನಡೆದ ಎರಡನೇ ಪಂದ್ಯದಲ್ಲೂ ಮೊದಲ ಎಸೆತದಲ್ಲೇ ಮಿಚೆಲ್ ಸ್ಟಾರ್ಕ್ ಬೌಲಿಂಗ್’ನಲ್ಲಿ ಎಲ್ಬಿಡಬ್ಲ್ಯೂ ಆಗಿ ಔಟಾಗಿದ್ದಾರೆ. ಟಿ20 ಕ್ರಿಕೆಟ್’ನಲ್ಲಿ ಜಗತ್ತಿನ ನಂ.1 ಬ್ಯಾಟ್ಸ್’ಮನ್ ಆಗಿರುವ ಸೂರ್ಯಕುಮಾರ್ ಯಾದವ್ ಏಕದಿನ ಕ್ರಿಕೆಟ್’ನಲ್ಲಿ ದಯನೀಯ ವೈಫಲ್ಯ ಎದುರಿಸಿದ್ದಾರೆ. ಕಳೆದ 10 ಏಕದಿನ ಇನ್ನಿಂಗ್ಸ್’ಗಳಿಂದ ಸೂರ್ಯಕುಮಾರ್ ಯಾದವ್ ಗಳಿಸಿರುವ ಒಟ್ಟು ರನ್ ಕೇವಲ 110.

ಕಳೆದ 10 ಏಕದಿನ ಇನ್ನಿಂಗ್ಸ್’ಗಳಲ್ಲಿ ಸೂರ್ಯಕುಮಾರ್ ಯಾದವ್ ಗಳಿಸಿರುವ ರನ್:
9 (8), 8 (6), 4 (3), 34* (25), 6 (10), 4 (4), 31 (26), 14 (9), 0 (1), 0 (1).

ಸೂರ್ಯಕುಮಾರ್ ಯಾದವ್ ಹೊರತಾಗಿ ಯುವ ಆರಂಭಿಕ ಬ್ಯಾಟ್ಸ್’ಮನ್ ಶುಭಮನ್ ಗಿಲ್ ಕೂಡ ಮೊದಲ ಎರಡೂ ಪಂದ್ಯಗಳಲ್ಲಿ ಎಡವಿದ್ದಾರೆ. ಮೊದಲ ಪಂದ್ಯದಲ್ಲಿ 20 ರನ್ನಿಗೆ ಔಟಾಗಿದ್ದ ಗಿಲ್, 2ನೇ ಪಂದ್ಯದಲ್ಲಿ ಖಾತೆ ತೆರೆಯಲು ವಿಫಲರಾಗಿದ್ದರು. ಹೀಗಾಗಿ ಗಿಲ್ ಅವರಿಗೂ ಆಸೀಸ್ ವಿರುದ್ಧದ 3ನೇ ಏಕದಿನ ಪಂದ್ಯ ಮಹತ್ವದ್ದಾಗಿದೆ.

ಭಾರತ Vs ಆಸ್ಟ್ರೇಲಿಯಾ 3ನೇ ಏಕದಿನ ಪಂದ್ಯ
ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ
ಸ್ಥಳ: ಎಂ.ಎ ಚಿದಂಬರಂ ಕ್ರೀಡಾಂಗಣ, ಚೆಪಾಕ್; ಚೆನ್ನೈ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

ಆಸ್ಟ್ರೇಲಿಯಾ ವಿರುದ್ಧದ 3ನೇ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI :

  1. ರೋಹಿತ್ ಶರ್ಮಾ (ನಾಯಕ)
  2. ಶುಭಮನ್ ಗಿಲ್
  3. ವಿರಾಟ್ ಕೊಹ್ಲಿ
  4. ಸೂರ್ಯಕುಮಾರ್ ಯಾದವ್
  5. ಕೆ.ಎಲ್ ರಾಹುಲ್ (ವಿಕೆಟ್ ಕೀಪರ್)
  6. ಹಾರ್ದಿಕ್ ಪಾಂಡ್ಯ
  7. ರವೀಂದ್ರ ಜಡೇಜ
  8. ಅಕ್ಷರ್ ಪಟೇಲ್
  9. ಕುಲ್ದೀಪ್ ಯಾದವ್
  10. ಮೊಹಮ್ಮದ್ ಶಮಿ
  11. ಮೊಹಮ್ಮದ್ ಸಿರಾಜ್

ಇದನ್ನೂ ಓದಿ : IPL media rights : ವಯಕಾಮ್-ಸ್ಟಾರ್ ಸ್ಪೋರ್ಟ್ಸ್ ಜಾಹೀರಾತು ಯುದ್ಧ, ಇದು ಧೋನಿ Vs ಕೊಹ್ಲಿ ಕಾಳಗ

ಇದನ್ನೂ ಓದಿ : MS Dhoni: ಚೆನ್ನೈನಲ್ಲಿ ನಾಳೆ ಭಾರತ Vs ಆಸ್ಟ್ರೇಲಿಯಾ ಪಂದ್ಯ ವೀಕ್ಷಿಸಲಿದ್ದಾರೆ ಎಂ.ಎಸ್‌ ಧೋನಿ

India Vs Australia 3rd ODI : Here is the Team India Playing XI for the “Final” match against Australia, this is Surya’s last chance

Comments are closed.