India Vs Australia 4th test match : ಖವಾಜ 150, ಕ್ಯಾಮರೂನ್ ಗ್ರೀನ್ ಚೊಚ್ಚಲ ಶತಕ; 24 ಗಂಟೆಗಳಲ್ಲಿ 2ನೇ ಬಾರಿ ಟೀಮ್ ಇಂಡಿಯಾ ವಿಕೆಟ್ ಲೆಸ್

ಅಹ್ಮದಾಬಾದ್: ಆಸ್ಟ್ರೇಲಿಯಾದ ಎಡಗೈ ಆರಂಭಿಕ ಬ್ಯಾಟ್ಸ್’ಮನ್ ಉಸ್ಮಾನ್ ಖವಾಜ (Usman Khawaja) ಬಾರ್ಡರ್-ಗವಾಸ್ಕರ್ ಟೆಸ್ ಸರಣಿಯ ಅಂತಿಮ ಪಂದ್ಯದ 2ನೇ ದಿನದಾಟದಲ್ಲಿ 150 ರನ್’ಗಳ ಗಡಿ ದಾಟಿದ್ದಾರೆ. ಇದೇ ವೇಳೆ ಯುವ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ (Cameron Green) ಚೊಚ್ಚಲ ಟೆಸ್ಟ್ ಶತಕ ಬಾರಿಸಿ ಸಂಭ್ರಮಿಸಿದ್ದಾರೆ. ಅಹ್ಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ (India Vs Australia 4th test match) ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ (Border-Gavaskar test series) 4ನೇ ಪಂದ್ಯದ 2ನೇ ದಿನವೂ ಆಸೀಸ್ ತನ್ನ ಮೇಲುಗೈ ಮುಂದುವರಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಆಸೀಸ್ ಮೊದಲ ದಿನದಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 255 ರನ್ ಗಳಿಸಿತ್ತು. ಶುಕ್ರವಾರ ಆಟ ಮುಂದುವರಿಸಿದ ಆಸೀಸ್’ಗೆ ಮತ್ತೆ ಉಸ್ಮಾನ್ ಖವಾಜ ಮತ್ತು ಕ್ಯಾಮರೂನ್ ಗ್ರೀನ್ ಆಸರೆಯಾದರು. ಅಜೇಯ 104 ರನ್’ಗಳಿಂದ ದಿನದಾಟ ಆರಂಭಿಸಿದ ಖವಾಜ 150 ರನ್ ಗಡಿ ದಾಟಿ ಭಾರತದ ದಾಳಿಗೆ ಮತ್ತೊಮ್ಮೆ ಸಡ್ಡು ಹೊಡೆದರು. ಮತ್ತೊಂದೆಡೆ 49 ರನ್’ಗಳಿಂದ 2ನೇ ದಿನ ಆಟ ಮುಂದುವರಿಸಿದ ಕ್ಯಾಮರೂನ್ ಗ್ರೀನ್ ಬಿರುಸಿನ ಹೊಡೆತಗಳ ಮೂಲಕ ಇನ್ನಿಂಗ್ಸ್ ಕಟ್ಟಿ ಟೆಸ್ಟ್ ಕ್ರಿಕೆಟ್’ನಲ್ಲಿ ಮೊದಲ ಶತಕ ಬಾರಿಸಿದ ಸಾಧನೆ ಮಾಡಿದರು.

ಇದನ್ನೂ ಓದಿ : India Vs Australia test : ಉಸ್ಮಾನ್ ಖವಾಜ ಭರ್ಜರಿ ಶತಕ, ಮೋದಿ ಸ್ಟೇಡಿಯಂನಲ್ಲಿ ಕಾಂಗರೂಗಳ ಆರ್ಭಟ, ಮೊದಲ ದಿನವೇ ಕೈಜಾರಿತಾ ಟೆಸ್ಟ್?

ಇದನ್ನೂ ಓದಿ : ಮೊದಲ ಪ್ರೋಮೋ ರಿಲೀಸ್, ಭರ್ಜರಿ ಸ್ಟೆಪ್ಸ್ ಹಾಕಿದ ರೋಹಿತ್, ರಾಹುಲ್, ಪಾಂಡ್ಯ

ಇದನ್ನೂ ಓದಿ : India Vs Australia test : ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಒಂದು ಲಕ್ಷ ಪ್ರೇಕ್ಷಕರು, ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ವಿಶ್ವದಾಖಲೆ

ಪ್ರಥಮ ದಿನದಾಟದ 2ನೇ ಅವಧಿಯಲ್ಲಿ ವಿಕೆಟ್ ಪಡೆಯಲು ವಿಫಲವಾಗಿದ್ದ ಭಾರತ, 2ನೇ ದಿನದಾಟದ ಮೊದಲ ಅವಧಿಯಲ್ಲೂ ವಿಕೆಟ್ ಪಡೆಯಲು ವಿಫಲವಾಯಿತು. ಈ ಮೂಲಕ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತದ ನೆಲದಲ್ಲಿ 24 ಗಂಟೆಗಳೊಳಗೆ 2ನೇ ಬಾರಿ ಒಂದು ಅವಧಿಯಲ್ಲಿ ವಿಕೆಟ್ ಪಡೆಯಲು ಭಾರತ ವಿಫಲವಾಗಿದೆ. ವಿರಾಟ್ ಕೊಹ್ಲಿ ನಾಯಕತ್ವದ 7 ವರ್ಷಗಳಲ್ಲಿ ಭಾರತ ತಂಡ ತವರು ನೆಲದಲ್ಲಿ ಟೆಸ್ಟ್ ಪಂದ್ಯದ ಒಂದು ಅವಧಿಯಲ್ಲಿ 2 ಬಾರಿ ವಿಕೆಟ್ ಪಡೆಯಲು ವಿಫಲವಾಗಿತ್ತು.

ಇದನ್ನೂ ಓದಿ : India Vs Australia : ಭಾರತ Vs ಆಸ್ಟ್ರೇಲಿಯಾ ಕ್ರಿಕೆಟ್ ಬಾಂಧವ್ಯಕ್ಕೆ 75 ವರ್ಷ, ಐತಿಹಾಸಿಕ ಸಂಭ್ರಮಕ್ಕೆ ಸಾಕ್ಷಿಯಾದ ಪ್ರಧಾನಿ ಮೋದಿ

India Vs Australia 4th test match : Usman Khawaja 150, Cameron Green debut century; Team India is wicketless for the 2nd time in 24 hours

Comments are closed.