India Vs Australia test series : ನಾಳೆಯಿಂದ ಭಾರತ Vs ಆಸೀಸ್ 3ನೇ ಟೆಸ್ಟ್; ರಾಹುಲ್ Vs ಗಿಲ್, ರೋಹಿತ್ ಜೊತೆ ಯಾರು ಓಪನರ್?

ಇಂದೋರ್: ಭಾರತ ಮತ್ತು ಪ್ರವಾಸಿ ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ (India Vs Australia Border-Gavaskar test series) 3ನೇ ಪಂದ್ಯ ನಾಳೆ (ಬುಧವಾರ) ಇಂದೋರ್’ನ ಹೋಳ್ಕರ್ ಮೈದಾನದಲ್ಲಿ ಆರಂಭವಾಗಲಿದೆ. ಸರಣಿಯ ಮೊದಲೆರಡೂ ಪಂದ್ಯಗಳನ್ನು ಗೆದ್ದು 4 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆಯಲ್ಲಿರುವ ಟೀಮ್ ಇಂಡಿಯಾ, ಈ ಪಂದ್ಯವನ್ನು ಗೆದ್ದು ಬಾರ್ಡರ್-ಗವಾಸ್ಕರ್ ಟೆಸ್ಟ್ (India Vs Aussies 3rd Test) ಸರಣಿಯನ್ನು ಕೈವಶ ಮಾಡಿಕೊಳ್ಳುವ ವಿಶ್ವಾಸದಲ್ಲಿದೆ.

ನಾಗ್ಪುರದಲ್ಲಿ ನಡೆದ ಪ್ರಥಮ ಟೆಸ್ಟ್ ಪಂದ್ಯವನ್ನು ಇನ್ನಿಂಗ್ಸ್ ಹಾಗೂ 132 ರನ್’ಗಳಿಂದ ಗೆದ್ದುಕೊಂಡಿದ್ದ ರೋಹಿತ್ ಶರ್ಮಾ ಬಳಗ, ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯವನ್ನು 6 ವಿಕೆಟ್’ಗಳಿಂದ ಗೆದ್ದುಕೊಂಡಿತ್ತು. ಇದೀಗ ಇಂದೋರ್’ನಲ್ಲಿ ನಡೆಯುವ 3ನೇ ಟೆಸ್ಟ್ ಪಂದ್ಯವನ್ನು ಗೆದ್ದರೆ, ಸರಣಿ ಕೈವಶ ಮಾಡಿಕೊಳ್ಳುವ ಜೊತೆಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್’ನಲ್ಲಿ ಭಾರತ ಫೈನಲ್ ತಲುಪಲಿದೆ.

3ನೇ ಟೆಸ್ಟ್ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸುವವರು ಯಾರು ಎಂಬುದೇ ದೊಡ್ಡ ಕುತೂಹಲ. ಮೊದಲೆರಡೂ ಪಂದ್ಯಗಳಲ್ಲಿ ಎಡವಿರುವ ಕನ್ನಡಿಗ ಕೆ.ಎಲ್ ರಾಹುಲ್ ಬದಲು ಯುವ ಆರಂಭಕಾರ ಶುಭಮನ್ ಗಿಲ್ ಆಡುವ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ.

ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI
1.ರೋಹಿತ್ ಶರ್ಮಾ (ನಾಯಕ), 2.ಕೆ.ಎಲ್ ರಾಹುಲ್/ಶುಭಮನ್ ಗಿಲ್, 3.ಚೇತೇಶ್ವರ್ ಪೂಜಾರ, 4.ವಿರಾಟ್ ಕೊಹ್ಲಿ, 5.ಶ್ರೇಯಸ್ ಅಯ್ಯರ್, 6.ಕೆ.ಎಸ್ ಭರತ್ (ವಿಕೆಟ್ ಕೀಪರ್), 7. ರವೀಂದ್ರ ಜಡೇಜ, 8.ರವಿಚಂದ್ರನ್ ಅಶ್ವಿನ್, 9.ಅಕ್ಷರ್ ಪಟೇಲ್, 10.ಮೊಹಮ್ಮದ್ ಶಮಿ, 11.ಮೊಹಮ್ಮದ್ ಸಿರಾಜ್.

ಇದನ್ನೂ ಓದಿ : Sachin Tendulkar statue : ಸಚಿನ್ ತೆಂಡೂಲ್ಕರ್ 50ನೇ ಹುಟ್ಟುಹಬ್ಬಕ್ಕೆ ಮುಂಬೈ ಕ್ರಿಕೆಟ್ ಸಂಸ್ಥೆಯಿಂದ ವಿಶೇಷ ಉಡುಗೊರೆ

ಇದನ್ನೂ ಓದಿ : New Zeeland vs England test : ಫಾಲೋ ಆನ್‌ಗೆ ತುತ್ತಾದರೂ ಇಂಗ್ಲೆಂಡ್ ಸೊಕ್ಕಡಗಿಸಿ ಗೆದ್ದು ಬೀಗಿದ ನ್ಯೂಜಿಲೆಂಡ್

ಇದನ್ನೂ ಓದಿ : Meg Lanning : ಧೋನಿಯೂ ಅಲ್ಲ, ಪಾಂಟಿಂಗೂ ಅಲ್ಲ; ಕ್ರಿಕೆಟ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ನಾಯಕಿ ಈ ಮಹಿಳೆ

India Vs Aussies 3rd Test : ಭಾರತ Vs ಆಸ್ಟ್ರೇಲಿಯಾ 3ನೇ ಟೆಸ್ಟ್ ಪಂದ್ಯ
ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ
ಸ್ಥಳ: ಹೋಳ್ಕರ್ ಕ್ರಿಕೆಟ್ ಕ್ರೀಡಾಂಗಣ, ಇಂದೋರ್
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

India Vs Australia test series : India Vs Aussies 3rd Test from tomorrow; Who will be the opener with Rahul Vs Gill, Rohit?

Comments are closed.