India vs South Africa 2nd TTest Day 2 : 7 ವಿಕೆಟ್ ಕಿತ್ತ ಶಾರ್ದೂಲ್ ಠಾಕೂರ್ ಅಬ್ಬರದ ನಡುವೆಯೂ ಇನ್ನಿಂಗ್ಸ್ ಮುನ್ನಡೆ ಸಾಧಿಸಿದ ದಕ್ಷಿಣ ಆಫ್ರಿಕಾ

ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತಗಳ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ( IND vs SA 2nd Test Day 2) ದಕ್ಷಿಣ ಆಫ್ರಿಕಾ 229 ರನ್‌ಗಳಿಗೆ ಆಲೌಟ್ ಆಗಿದೆ. ಈಮೂಲಕ ದಕ್ಷಿಣ ಆಫ್ರಿಕಾ 27 ರನ್‌ಗಳಲ್ಲಿ ಮುನ್ನಡೆ ಗಳಿಸಿದೆ. ದಕ್ಷಿಣ ಆಫ್ರಿಕಾ  ತಂಡದ ಪರ ಇಬ್ಬರು ಬ್ಯಾಟ್ಸ್‌ಮನ್‌ಗಳು ಅರ್ಧಶತಕ ಬಾರಿಸಿದ್ದು ಉತ್ತಮ ಪ್ರದರ್ಶನವಾಗಿತ್ತು. ಅದರಲ್ಲಿ ಕೀಗನ್ ಪೀಟರ್ಸನ್ ಗರಿಷ್ಠ 62 ರನ್, ತೆಂಬಾ ಬಾವುಮಾ ಕೂಡ 51 ರನ್‌ಗಳನ್ನು ಬಾರಿಸುವ ಮೂಲಕ ಅತ್ಯುತ್ತಮ ಇನ್ನಿಂಗ್ಸ್‌ ಕಟ್ಟಲು ನೆರವಾದರು. ಅಲ್ಲದೇ ದಕ್ಷಿಣ ಆಫ್ರಿಕಾದ ವೆರಿನ್, ಮಾರ್ಕೊ ಜಾನ್ಸೆನ್ ಇಬ್ಬರೂ ಸಹ ತಲಾ 21 ರನ್ ಗಳಿಸಿ ಕೊಂಚ ನೆರವಾದರು. ಜೊತೆಗೆ ಕೇಶವ್ ಮಹಾರಾಜ್ ಕೂಡ 21 ರನ್​ಗಳನ್ನು ಗಳಿಸಿ ನೆರವಾದರು.

ಇತ್ತ ಭಾರತದ ಪರ ಬಲಗೈ ವೇಗದ ಬೌಲರ್ ಶಾರ್ದೂಲ್ ಠಾಕೂರ್ (Shardul Thakur) 7 ವಿಕೆಟ್ ಪಡೆದು ಮಿಂಚಿದ್ದಾರೆ. ಏಳು ವಿಕೆಟ್ ಪಡೆದ ಅವರ ಇಂದಿನ ಪ್ರದರ್ಶನ ಶಾರ್ದೂಲ್ ಠಾಕೂರ್ ಅವರ ಟೆಸ್ಟ್ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನವಾಗಿದೆ. ಶಾರ್ದೂಲ್ ಠಾಕೂರ್ ಅವರ ಪ್ರದರ್ಶನ ದಕ್ಷಿಣ ಆಫ್ರಿಕಾವನ್ನು ಕಟ್ಟಿಹಾಕಿತು. ಅಲ್ಲದೇ ಅವರು ಬಿಟ್ಟುಕೊಟ್ಟಿದ್ದು ಕೇವಲ 61 ರನ್‌ಗಳು ಮಾತ್ರ.

ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ವಿರುದ್ದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ನಾಯಕ ವಿರಾಟ್‌ ಕೊಯ್ಲಿ ಹೊರ ನಡೆದಿದ್ದ ಕಾರಣ ಕನ್ನಡಿಗ ಕೆ.ಎಲ್.ರಾಹುಲ್‌ ನಾಯಕತ್ವದಲ್ಲಿ ಟೀಂ ಇಂಡಿಯಾ ಕಣಕ್ಕೆ ಇಳಿದಿತ್ತು. ಅಂದಹಾಗೆ ಭಾರತ ತಂಡದ ವಿರುದ್ಧ ಮೊದಲ ಟೆಸ್ಟ್‌ ಪಂದ್ಯದಲ್ಲಿ 113 ರನ್ ಅಂತರದಿಂದ ದಕ್ಷಿಣ ಆಫ್ರಿಕಾ ಸೋಲು ಕಂಡಿತ್ತು. ಆದರೆ  2022ರಲ್ಲಿ ಆಡುತ್ತಿರುವ ಮೊದಲ ಮತ್ತು ಈ ಸರಣಿಯ ಎರಡನೇ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ಮುನ್ನಡೆ ಪಡೆದುಕೊಂಡಿದೆ. ಈಮೂಲಕ 2022ನ್ನು ಆಶಾದಾಯಕವಾಗಿ ಆರಂಭಿಸುವ ಪ್ರಯತ್ನವನ್ನು ದಕ್ಷಿಣ ಆಫ್ರಿಕಾ  ಕ್ರಿಕೆಟ್ ತಂಡ ನಡೆಸುತ್ತಿದೆ.

ಬಾಂಗ್ಲಾದೇಶ ವಿರುದ್ಧ ನ್ಯೂಜಿಲ್ಯಾಂಡ್ ಟೆಸ್ಟ್ ಪಂದ್ಯದ ಅಪ್‌ಡೇಟ್ ಇಲ್ಲಿದೆ (New Zealand vs Bangladesh, 1st Test, Day 4 Score Update)
ಇತ್ತ ಬಾಂಗ್ಲಾದೇಶ  ಮತ್ತು ನ್ಯೂಜಿಲ್ಯಾಂಡ್ ಟೆಸ್ಟ್ ಸರಣಿ ನಡೆಯುತ್ತಿದೆ. ಬಾಂಗ್ಲಾದೇಶವು ಮೊದಲ ಇನಿಂಗ್ಸ್‌ನಲ್ಲಿ 130 ರನ್‌ಗಳ ಮುನ್ನಡೆ ಗಳಿಸಿತ್ತು. ಇಬಾದತ್ ನಾಲ್ಕು ವಿಕೆಟ್ ಪಡೆದು ಬೌಲಿಂಗ್ ಮುಂದೆ ಕುಸಿದ ಆತಿಥೇಯ ತಂಡವು ನಾಲ್ಕನೇ ದಿನದಾಟದ ಮುಕ್ತಾಯಕ್ಕೆ 63 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 147 ರನ್ ಗಳಿಸಿತು. ರಾಸ್ ಟೇಲರ್  37 ರನ್ ಮತ್ತು ರಚಿನ್ ರವೀಂದ್ರ 6 ರನ್ ಗಳಿಸಿ ಆಡುತ್ತಿದ್ದಾರೆ.

ಇದನ್ನೂ ಓದಿ: Tiger Prabhakar : ಜನಮೆಚ್ಚುಗೆ ಗಳಿಸಿದ್ದ ಟೈಗರ್ ಪ್ರಭಾಕರ್ ಹೆಸರಿಗೆ ‘ಟೈಗರ್’ ಸೇರಿಕೊಂಡಿದ್ದು ಹೇಗೆ?

ಇದನ್ನೂ ಓದಿ: Buy Gold in Google Pay: ಗೂಗಲ್ ಪೇ ಆ್ಯಪ್‌ನಲ್ಲೇ ಚಿನ್ನ ಖರೀದಿಸಬಹುದು, ಮಾರಬಹುದು! ಹೇಗೆ ಎಂಬ ವಿವರ ಇಲ್ಲಿದೆ

(India vs South Africa 2nd Test Day 2 Score Update Shardul Thakur take 7 Wickets but SA lead the innings)

Comments are closed.