India Women Vs Aus Women T20 : ಮೊದಲ ಟಿ20ಯಲ್ಲಿ ಆಸೀಸ್ ವನಿತೆಯರ ವಿರುದ್ಧ ಭಾರತಕ್ಕೆ 9 ವಿಕೆಟ್‌ಗಳ ಹೀನಾಯ ಸೋಲು

ಮುಂಬೈ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತೀಯ ವನಿತೆಯರು (India womens cricket team) 9 ವಿಕೆಟ್’ಗಳ ಹೀನಾಯ ಸೋಲು ಅನುಭವಿಸಿದ್ದಾರೆ. (India Women Vs Aus Women T20) ಮುಂಬೈನ ಡಿ.ವೈ ಪಾಟೀಲ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ಶುಕ್ರವಾರ ನಡೆದ ಪಂದ್ಯವನ್ನು 9 ವಿಕೆಟ್’ಗಳಿಂದ ಏಕಪಕ್ಷೀಯವಾಗಿ ಗೆದ್ದುಕೊಂಡ ಆಸೀಸ್ ಮಹಿಳಾ ತಂಡ, 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಹರ್ಮನ್ ಪ್ರೀತ್ ಕೌರ್ ಸಾರಥ್ಯದ ಟೀಮ್ ಇಂಡಿಯಾ, ನಿಗದಿತ 20 ಓವರ್’ಗಳಲ್ಲಿ 5 ವಿಕೆಟ್ ನಷ್ಟಕ್ಕೆ 172 ರನ್’ಗಳ ಉತ್ತಮ ಮೊತ್ತ ಕಲೆ ಹಾಕಿತು. ಭಾರತ ಪರ ಆರಂಭಿಕ ಬ್ಯಾಟರ್’ಗಳಾದ ಸ್ಮೃತಿ ಮಂಧನ (22 ಎಸೆತಗಳಲ್ಲಿ 28 ರನ್) ಮತ್ತು ಶೆಫಾಲಿ ವರ್ಮಾ (10 ಎಸೆತಗಳಲ್ಲಿ 21 ರನ್) ಸಿಕ್ಕ ಉತ್ತಮ ಆರಂಭವನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸುವಲ್ಲಿ ವಿಫಲರಾದರು. ಕೆಳ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ರಿಚಾ ಘೋಷ್ (20 ಎಸೆತಗಳಲ್ಲಿ 36 ರನ್) ಮತ್ತು ದೀಪ್ತಿ ಶರ್ಮಾ (15 ಎಸೆತಗಳಲ್ಲಿ ಅಜೇಯ 36 ರನ್) ಸ್ಫೋಟಕ ಆಟವಾಡಿದ್ದರಿಂದ ಭಾರತದ ಮೊತ್ತ 170ರ ಗಡಿ ದಾಟುವಂತಾಯಿತು.

ಇದನ್ನೂ ಓದಿ : India Vs Bangladesh 3rd ODI: ಕ್ಲೀನ್ ಸ್ವೀಪ್ ಭೀತಿಯಲ್ಲಿ ಭಾರತ, ಕನ್ನಡಿಗ ಕೆ.ಎಲ್ ರಾಹಲ್ ಮುಂದೆ ಬಿಗ್ ಚಾಲೆಂಜ್

ಇದನ್ನೂ ಓದಿ : BCCI selection committee: ಬಿಸಿಸಿಐ ಆಯ್ಕೆ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರೇಸ್; ಕನ್ನಡಿಗ ವೆಂಕಟೇಶ್ ಪ್ರಸಾದ್ ಆಯ್ಕೆ ಬಹುತೇಕ ಖಚಿತ

ಇದನ್ನೂ ಓದಿ : BCCI postmortem Meeting : ಬಾಂಗ್ಲಾ ವಿರುದ್ಧ ಏಕದಿನ ಸರಣಿ ಸೋಲು, ಬಿಸಿಸಿಐ ಮೀಟಿಂಗ್’ನಲ್ಲಿ ಹೊರ ಬೀಳಲಿದೆ ಮಹತ್ವದ ನಿರ್ಧಾರ

ನಂತರ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾಗೆ ಆರಂಭಿಕ ಆಟಗಾರ್ತಿಯರಾದ ನಾಯಕಿ ಅಲೀಸಾ ಹೀಲಿ (23 ಎಸೆತಗಳಲ್ಲಿ 37 ರನ್) ಮತ್ತು ಬೆಥ್ ಮೂನಿ (57 ಎಸೆತಗಳಲ್ಲಿ ಅಜೇಯ 89 ರನ್) ಮೊದಲ ವಿಕೆಟ್’ಗೆ 73 ರನ್ ಸೇರಿಸಿ ಭದ್ರ ಅಡಿಪಾಯ ಹಾಕಿಕೊಟ್ಟರು. ನಾಯಕಿ ಹೀಲಿ ಔಟಾದ ನಂತರ ಬೆಥ್ ಮೂನಿ ಅವರನ್ನು ಸೇರಿಕೊಂಡ ತಹಿಲಾ ಮೆಗ್ರಾತ್ (29 ಎಸೆತಗಳಲ್ಲಿ 40 ರನ್) ಮುರಿಯದ 2ನೇ ವಿಕೆಟ್’ಗೆ 56 ಎಸೆತಗಳಲ್ಲಿ 100 ರನ್ ಸೇರಿಸಿದರು. ಅಗ್ರಕ್ರಮಾಂಕದ ಬ್ಯಾಟರ್’ಗಳ ಸಿಡಿಲಬ್ಬರದ ಬ್ಯಾಟಿಂಗ್ ಪರಿಣಾಮ ಆಸ್ಟ್ರೇಲಿಯಾ ತಂಡ 18.1 ಓವರ್’ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು ಭಾರತದ ಸವಾಲನ್ನು ಮೆಟ್ಟಿ ನಿಂತಿತು. 5 ಪಂದ್ಯಗಳ ಸರಣಿಯ 2ನೇ ಪಂದ್ಯ ಭಾನುವಾರ ನಡೆಯಲಿದೆ.

India Women Vs Aus Women T20: In the first T20, India suffered a crushing defeat by 9 wickets against the Aussies.

Comments are closed.