IPL 2023 Auction Player list : ಐಪಿಎಲ್ ಹರಾಜು: ಆಟಗಾರರ ಅಂತಿಮ ಪಟ್ಟಿ ಪ್ರಕಟ, ಫೈನಲ್ ಲಿಸ್ಟ್’ನಲ್ಲಿ ಒಟ್ಟು 405 ಆಟಗಾರರು

ಬೆಂಗಳೂರು: IPL 2023 Auction Player list : ಮುಂಬರುವ ಐಪಿಎಲ್ ಟೂರ್ನಿಗೆ (IPL 2022) ಆಟಗಾರರ ಹರಾಜು ಡಿಸೆಂಬರ್ 23ರಂದು ಕೇರಳದ ಕೊಚ್ಚಿಯಲ್ಲಿ ನಡೆಯಲಿದ್ದು, ಹರಾಜು ಪಟ್ಟಿಯಲ್ಲಿ ಅಂತಿಮವಾಗಿ 405 ಮಂದಿ ಆಟಗಾರರಿದ್ದಾರೆ.

ಐಪಿಎಲ್ ಹರಾಜಿಗೊಳಪಡಲಿರುವ ಆಟಗಾರರ ಅಂತಿಮ ಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದ್ದು, ಇದರಲ್ಲಿ 273 ಭಾರತೀಯರು ಮತ್ತು 132 ಮಂದಿ ವಿದೇಶಿ ಆಟಗಾರರು ಸೇರಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್ ಆಡಿದ ಒಟ್ಟು 119 ಆಟಗಾರರು ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 10 ತಂಡಗಳಲ್ಲಿ ಒಟ್ಟು 87 ಸ್ಥಾನಗಳು ಖಾಲಿಯಿದ್ದು, ಇದರಲ್ಲಿ 30 ಮಂದಿ ವಿದೇಶಿ ಆಟಗಾರರಿಗೆ ಅವಕಾಶವಿದೆ.

ಐಪಿಎಲ್ ಹರಾಜಿನಲ್ಲಿ ಒಟ್ಟು 19 ಮಂದಿ ವಿದೇಶಿ ಆಟಗಾರರು 2 ಕೋಟಿ ರೂ.ಗಳ ಮೂಲ ಬೆಲೆಯನ್ನು ನಿಗದಿ ಪಡಿಸಿಕೊಂಡಿದ್ದಾರೆ. ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್, ಸ್ಯಾಮ್ ಕರನ್, ಕ್ರಿಸ್ ಜೋರ್ಡನ್, ಆಸ್ಟ್ರೇಲಿಯಾದ ನೇಥನ್ ಕುಲ್ಟರ್’ನೈಲ್, ಕ್ಯಾಮರೂನ್ ಗ್ರೀನ್, ಟ್ರಾವಿಸ್ ಹೆಡ್, ಕ್ರಿಸ್ ಲಿನ್, ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್, ಜೇಮ್ಸ್ ನೀಶಮ್, ದಕ್ಷಿಣ ಆಫ್ರಿಕಾದ ರಾಲೀ ರೊಸೋ, ರಾಸೀ ವಾನ್ ಡರ್ ಡ್ಯುಸೆನ್, ವೆಸ್ಟ್ ಇಂಡೀಸ್’ನ ಜೇಸನ್ ಹೋಲ್ಡನ್ ಮತ್ತು ನಿಕೋಲಸ್ ಪೂರನ್ 2 ಕೋಟಿ ಮೂಲೆ ಬೆಲೆ ಹೊಂದಿರುವ ಆಟಗಾರರ ಪಟ್ಟಿಯಲ್ಲಿದ್ದಾರೆ.

ಆಸ್ಟ್ರೇಲಿಯಾ ಶಾನ್ ಅಬಾಟ್, ರೀಲೀ ಮೆರಿಡಿತ್, ಆಡಂ ಜಾಂಪಾ, ಬಾಂಗ್ಲಾದೇಶದ ಶಾಕಿಬ್ ಅಲ್ ಹಸನ್, ಇಂಗ್ಲೆಂಡ್’ನ ಜೇಸನ್ ರಾಯ್, ಹ್ಯಾರಿ ಬ್ರೂಕ್, ಡಾವಿಡ್ ಮಲಾನ್ ಸಹಿತ ಒಟ್ಟು 11 ಮಂದಿ ಆಟಗಾರರು 1.5 ಕೋಟಿಯ ಮೂಲ ಬೆಲೆ ಹೊಂದಿದ್ದಾರೆ. ಕರ್ನಾಟಕದ ಮನೀಶ್ ಪಾಂಡೆ ಮತ್ತು ಮಯಾಂಕ್ ಅಗರ್ವಾಲ್ ಸೇರಿದಂತೆ 20 ಆಟಗಾರರು 1 ಕೋಟಿ ರೂ. ಮೂಲ ಬೆಲೆ ನಿಗದಿ ಪಡಿಸಿಕೊಂಡಿದ್ದಾರೆ.

ಐಪಿಎಲ್ ಹರಾಜು: ಫ್ರಾಂಚೈಸಿಗಳ ಬಳಿ ಉಳಿದಿರುವ ಮೊತ್ತ

ಚೆನ್ನೈ ಸೂಪರ್ ಕಿಂಗ್ಸ್: 20.45 ಕೋಟಿ
ಡೆಲ್ಲಿ ಕ್ಯಾಪಿಟಲ್ಸ್: 19.45 ಕೋಟಿ
ಗುಜರಾತ್ ಟೈಟನ್ಸ್: 19.25 ಕೋಟಿ
ಕೋಲ್ಕತಾ ನೈಟ್ ರೈಡರ್ಸ್: 7.05 ಕೋಟಿ
ಲಕ್ನೋ ಸೂಪರ್ ಜೈಂಟ್ಸ್: 23.35 ಕೋಟಿ
ಮುಂಬೈ ಇಂಡಿಯನ್ಸ್: 20.55 ಕೋಟಿ
ಪಂಜಾಬ್ ಕಿಂಗ್ಸ್: 32.20 ಕೋಟಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು: 8.75 ಕೋಟಿ
ರಾಜಸ್ಥಾನ್ ರಾಯಲ್ಸ್: 13.20 ಕೋಟಿ
ಸನ್ ರೈಸರ್ಸ್ ಹೈದರಾಬಾದ್: 42.25 ಕೋಟಿ

ಇದನ್ನೂ ಓದಿ : Karnataka Vs Services : ರಣಜಿ ಟ್ರೋಫಿಯ ಮೊದಲ ದಿನವೇ ಕರ್ನಾಟಕಕ್ಕೆ ಆಘಾತ

ಇದನ್ನೂ ಓದಿ : Andrew Flintoff : ಕಾರು ಅಪಘಾತದಲ್ಲಿ ಆ್ಯಂಡ್ರ್ಯೂ ಫ್ಲಿಂಟಾಫ್‌ಗೆ ಗಂಭೀರ ಗಾಯ, ಆಸ್ಪತ್ರೆಗೆ ಏರ್ ಲಿಫ್ಟ್

ಇಂಗ್ಲಿಷ್‌ ಕ್ರೀಡಾ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

IPL 2023 Auction Player list announced

Comments are closed.