Pro kabaddi league: ಸೆಮಿಫೈನಲ್ ಪ್ರವೇಶಿಸಿದ ಬೆಂಗಳೂರು ಬುಲ್ಸ್, ತಮಿಳ್ ತಲೈವಾಸ್

ಮುಂಬೈ: (Pro kabaddi league)ಬೆಂಗಳೂರು ಬುಲ್ಸ್ (Bengaluru Bulls) ಹಾಗೂ ತಮಿಳ್ ತಲೈವಾಸ್ (Tamil Talaiwas) ತಂಡಗಳು ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯ ಟೂರ್ನಿಯಲ್ಲಿ ಸೆಮಿಫೈನಲ್’ಗೆ ಲಗ್ಗೆ ಇಟ್ಟಿವೆ.

(Pro kabaddi league)ಮುಂಬೈನ ಸರ್ದಾರ್ ವಲ್ಲಭಾಯ್ ಪಟೇಲ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಮೊದಸ ಎಲಿಮಿನೇಟರ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ಕೆ.ಸಿ ತಂಡವನ್ನು 56-24 ಅಂಕಗಳ ಅಂತರದಲ್ಲಿ ಅಕ್ಷರಶಃ ಹೊಸಕಿ ಹಾಕಿತು. ಬೆಂಗಳೂರು ಬುಲ್ಸ್ ಪರ ಸ್ಟಾರ್ ರೇಡರ್’ಗಳಾದ ಭರತ್ ಹೂಡ ಮತ್ತು ವಿಕಾಸ್ ಖಂಡೋಲ ಸೂಪರ್ 10 ಸಾಧನೆಯೊಂದಿಗೆ ತಂಡವನ್ನು ಸೆಮಿಫೈನಲ್’ಗೆ ಮುನ್ನಡೆಸಿದರು. ರೈಟ್ ಕಾರ್ನರ್ ಡಿಫೆಂಡರ್ ಸೌರಭ್ ನಂದಲ್ 5 ಟ್ಯಾಕಲ್ ಪಾಯಿಂಟ್ ಗಳಿಸಿ ಬುಲ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಗುರುವಾರ ನಡೆಯುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ಮೊದಲ ಆವೃತ್ತಿಯ ಚಾಂಪಿಯನ್, ಟೇಬಲ್ ಟಾಪರ್ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು ಎದುರಿಸಲಿದೆ.

ಇದನ್ನೂ ಓದಿ :Karnataka weather report: ಕರಾವಳಿಯಲ್ಲಿ ಡಿ. 16ರ ವರೆಗೆ ಮಳೆ: 3 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಣೆ

ಇದನ್ನೂ ಓದಿ:Andrew Flintoff : ಕಾರು ಅಪಘಾತದಲ್ಲಿ ಆ್ಯಂಡ್ರ್ಯೂ ಫ್ಲಿಂಟಾಫ್‌ಗೆ ಗಂಭೀರ ಗಾಯ, ಆಸ್ಪತ್ರೆಗೆ ಏರ್ ಲಿಫ್ಟ್

ತಮಿಳ್ ತಲೈವಾಸ್ ಮತ್ತು ಯು.ಪಿ ಯೋಧಾ ನಡುವಿನ 2ನೇ ಎಲಿಮಿನೇಟರ್ ಪಂದ್ಯ ರೋಚಕ ಕ್ಷಣಗಳಿಗೆ ಸಾಕ್ಷಿಯಾಯಿತು. 40 ನಿಮಿಷಗಳ ಪೂರ್ಣ ಅವಧಿಯಲ್ಲಿ ಎರಡೂ ತಂಡಗಳು 36-36ರಲ್ಲಿ ಸಮಬಲ ಸಾಧಿಸಿದವು. ಹೀಗಾಗಿ ಫಲಿತಾಂಶಕ್ಕೆ ಟೈ ಬ್ರೇಕರ್ ಮೊರೆ ಹೋಗಲಾಯಿತು. ತಲಾ 5 ರೇಡ್’ಗಳ ಟೈ ಬ್ರೇಕರ್’ನಲ್ಲಿ ಯು.ಪಿ ಯೋಧಾ ಪಡೆಯನ್ನು 6-4ರಿಂದ ಅತ್ಯಂತ ರೋಚಕವಾಗಿ ಮಣಿಸಿದ ತಮಿಳ್ ತಲೈವಾಸ್ ಸೆಮಿಫೈನಲ್’ಗೆ ಲಗ್ಗೆಯಿಟ್ಟಿತು.ಗುರುವಾರ ನಡೆಯುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ತಮಿಳ್ ತಲೈವಾಸ್ ತಂಡ ಅಂಕಪಟ್ಟಿಯ 2ನೇ ಸ್ಥಾನಿ ಪುಣೇರಿ ಪಲ್ಟನ್ ತಂಡವನ್ನು ಎದುರಿಸಲಿದೆ.

ಇದನ್ನೂ ಓದಿ : India Vs Bangladesh test: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ, ಟೀಮ್ ಇಂಡಿಯಾದಲ್ಲಿ ತ್ರಿವಳಿ ಸ್ಪಿನ್ನರ್ಸ್

ಇಂಗ್ಲಿಷ್‌ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Pro kabaddi league Bangalore Bulls, Tamil Thalaivas entered the semi-finals

Comments are closed.