Karnataka Players IPL Auction 2023: ಐಪಿಎಲ್ ಹರಾಜು ಪಟ್ಟಿಯಲ್ಲಿರುವ ಕರ್ನಾಟಕ ಆಟಗಾರರ ಕಂಪ್ಲೀಟ್ ಲಿಸ್ಟ್

ಬೆಂಗಳೂರು: ಐಪಿಎಲ್-2023ರ ಟೂರ್ನಿಗೆ ಆಟಗಾರರ ಹರಾಜು ಪ್ರಕ್ರಿಯೆ ಮುಂದಿನ ಶುಕ್ರವಾರ (ಡಿಸೆಂಬರ್ 23) ಕೇರಳದ ಕೊಚ್ಚಿಯಲ್ಲಿ ನಡೆಯಲಿದ್ದು, ಕರ್ನಾಟಕದ (Karnataka Players IPL Auction 2023) ಒಟ್ಟು 16 ಮಂದಿ ಆಟಗಾರರು ಅಂತಿಮ ಪಟ್ಟಿಯಲ್ಲಿದ್ದಾರೆ. ಐಪಿಎಲ್ ಹರಾಜಿನಲ್ಲಿ ಒಟ್ಟು 405 ಮಂದಿ ಆಟಗಾರರಿದ್ದು, ಇದರಲ್ಲಿ 273 ಭಾರತೀಯರು ಮತ್ತು 132 ಮಂದಿ ವಿದೇಶಿ ಆಟಗಾರರು ಸೇರಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್ ಆಡಿದ ಒಟ್ಟು 119 ಆಟಗಾರರು ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 10 ತಂಡಗಳಲ್ಲಿ ಒಟ್ಟು 87 ಸ್ಥಾನಗಳು ಖಾಲಿಯಿದ್ದು, ಇದರಲ್ಲಿ 30 ಮಂದಿ ವಿದೇಶಿ ಆಟಗಾರರಿಗೆ ಅವಕಾಶವಿದೆ.

ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ಮತ್ತು ಮಾಜಿ ನಾಯಕ ಮನೀಶ್ ಪಾಂಡೆ ಐಪಿಎಲ್ ಹರಾಜು ಪಟ್ಟಿಯಲ್ಲಿದ್ದು 1 ಕೋಟಿ ರೂ. ಮೂಲಬೆಲೆ ಹೊಂದಿದ್ದಾರೆ. ಮಯಾಂಕ್ ಅಗರ್ವಾಲ್ ಕಳೆದ ಐಪಿಎಲ್’ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕತ್ವ ವಹಿಸಿ ತಂಡಕ್ಕೆ 7 ಗೆಲುವುಗಳನ್ನು ತಂದುಕೊಟ್ಟಿದ್ದರು. ಆದರೆ ಮಯಾಂಕ್ ಅವರನ್ನು ಪಂಜಾಬ್ ಫ್ರಾಂಚೈಸಿ ತಂಡದಿಂದ ರಿಲೀಸ್ ಮಾಡಿದೆ. ಕಳೆದ ಟೂರ್ನಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿದ್ದ ಮನೀಶ್ ಪಾಂಡೆ ಈ ಬಾರಿ ಹೊಸ ತಂಡ ಸೇರುವ ನಿರೀಕ್ಷೆಯಲ್ಲಿದ್ದಾರೆ. ಮತ್ತೊಂದೆಡ ಕರ್ನಾಟಕ ತಂಡದಿಂದ ಹೊರ ಬಿದ್ದಿರುವ ಟೆಸ್ಟ್ ತ್ರಿಶತಕವೀರ ಕರುಣ್ ನಾಯರ್ ಐಪಿಎಲ್’ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, 50 ಲಕ್ಷ ರೂ.ಗಳ ಮೂಲ ಬೆಲೆ ಹೊಂದಿದ್ದಾರೆ.

Karnataka Players IPL Auction 2023 : ಐಪಿಎಲ್ ಹರಾಜು ಪಟ್ಟಿಯಲ್ಲಿರುವ ಕರ್ನಾಟಕದ ಆಟಗಾರರು:

ಆಟಗಾರ ಮೂಲಬೆಲೆ
ಮಯಾಂಕ್ ಅಗರ್ವಾಲ್ 1 ಕೋಟಿ
ಮನೀಶ್ ಪಾಂಡೆ 1 ಕೋಟಿ
ಕರುಣ್ ನಾಯರ್ 50 ಲಕ್ಷ
ಜೆ.ಸುಚಿತ್ 20 ಲಕ್ಷ
ವಾಸುಕಿ ಕೌಶಿಕ್ 20 ಲಕ್ಷ
ಮನೋಜ್ ಭಾಂಡಗೆ 20 ಲಕ್ಷ
ಚೇತನ್ ಎಲ್.ಆರ್ 20 ಲಕ್ಷ
ಶ್ರೇಯಸ್ ಗೋಪಾಲ್ 20 ಲಕ್ಷ
ಲವ್ನೀತ್ ಸಿಸೋಡಿಯಾ 20 ಲಕ್ಷ
ಅನೀಶ್ವರ್ ಗೌತಮ್ 20 ಲಕ್ಷ
ವಿದ್ವತ್ ಕಾವೇರಪ್ಪ 20 ಲಕ್ಷ
ವೈಶಾಖ್ ವಿಜಯ್ 20 ಲಕ್ಷ
ರೋಹನ್ ಪಾಟೀಲ್ 20 ಲಕ್ಷ
ಬಿ.ಆರ್ ಶರತ್ 20 ಲಕ್ಷ
ವೆಂಕಟೇಶ್ ಎಂ. 20 ಲಕ್ಷ
ಶುಭಾಂಗ್ ಹೆಗ್ಡೆ 20 ಲಕ್ಷ

ಇದನ್ನೂ ಓದಿ : News Next Special: IPL Players Auction; ಈ ಮೂವರು ಕನ್ನಡಿಗರ ಮೇಲೆ ಕೃಪೆ ತೋರುತ್ತಾ RCB ?

ಇದನ್ನೂ ಓದಿ : Lionel Messi Fifa World cup: ಕೊನೆಗೂ ನನಸಾಯ್ತು ಮೆಸ್ಸಿ ಕನಸು, ಜೀವನದ ಅತೀ ದೊಡ್ಡ ಕ್ಷಣಕ್ಕೆ ಸಾಕ್ಷಿಯಾದ ಅರ್ಜೆಂಟೀನಾ ಸೂಪರ್ ಸ್ಟಾರ್

Karnataka Players in IPL Auction 2023 indian premier league

Comments are closed.