Karnataka Vs Services : ರಣಜಿ ಟ್ರೋಫಿಯ ಮೊದಲ ದಿನವೇ ಕರ್ನಾಟಕಕ್ಕೆ ಆಘಾತ

ಬೆಂಗಳೂರು: ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಟೂರ್ನಿಯ (Ranji Trophy 2022-23) ಮೊದಲ ಪಂದ್ಯದ ಮೊದಲ ದಿನವೇ ಆತಿಥೇಯ ಕರ್ನಾಟಕಕ್ಕೆ ಆಘಾತ ಎದುರಾಗಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ಆರಂಭಗೊಂಡ ಎಲೈಟ್ ‘ಸಿ’ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಕರ್ನಾಟಕಕ್ಕೆ ಪ್ರಥಮ ದಿನವೇ ಸರ್ವಿಸಸ್ ಶಾಕ್ ( Karnataka Vs Services ranji match) ಕೊಟ್ಟಿತು. ಮಳೆಯಿಂದ ಮೈದಾನದ ಒದ್ದೆಯಾಗಿದ್ದ ಕಾರಣ ತಡವಾಗಿ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.

ಕರ್ನಾಟಕ ಪರ ಇನ್ನಿಂಗ್ಸ್ ಆರಂಭಿಸಿದ ನಾಯಕ ಮಯಾಂಕ್ ಅಗರ್ವಾಲ್ (Mayank Agarwal) ಮತ್ತು ಉಪನಾಯಕ ಆರ್.ಸಮರ್ಥ್ ಜೋಡಿ ತಂಡಕ್ಕೆ ಉತ್ತಮ ಆರಂಭ ಒದಗಿಸುವಲ್ಲಿ ವಿಫಲವಾಯಿತು. ಇಬ್ಬರೂ 8 ರನ್ನಿಗೆ ಔಟಾಗುವ ಮೂಲಕ ಕರ್ನಾಟಕ ಆರಂಭಿಕ ಆಘಾತ ಎದುರಿಸಿತು. ಪದಾರ್ಪಣೆಯ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದ ಯುವ ಬ್ಯಾಟರ್ ವಿಶಾಲ್ ಓನಟ್ ಭರವಸೆ ಮೂಡಿಸಿದರಾದರೂ 33 ರನ್ ಗಳಿಸಿ ಔಟಾದರು. 4ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದ ಮತ್ತೊಬ್ಬ ಪದಾರ್ಪಣೆಯ ಆಟಗಾರ ನಿಕಿನ್ ಜೋಸ್ ಆಕರ್ಷಕ ಅರ್ಧಶತಕ (62) ಗಳಿಸಿದರು. ಕರ್ನಾಟಕ ತಂಡ ಕೇವಲ 16 ರನ್ನಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಜೊತೆಯಾದ ವಿಶಾಲ್-ಜೋಸ್ ಜೋಡಿ 3ನೇ ವಿಕೆಟ್’ಗೆ 84 ರನ್ ಸೇರಿಸಿ ತಂಡಕ್ಕೆ ಚೇತರಿಕೆ ನೀಡಿತು.

ಆದರೆ ಇಬ್ಬರೂ ಔಟಾದ ನಂತರ ಮತ್ತೆ ಕುಸಿತ ಕಂಡ ಕರ್ನಾಟಕ ಕೇವಲ 33 ರನ್’ಗಳ ಅಂತರದಲ್ಲಿ 4 ವಿಕೆಟ್ ಕಳೆದುಕೊಂಡಿತು. 5ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದ ಮಾಜಿ ನಾಯಕ ಮನೀಶ್ ಪಾಂಡೆ (Manish Pandey) 10 ರನ್ನಿಗೆ ಔಟಾದ್ರೆ, ಆಲ್ರೌಂಡರ್ ಶ್ರೇಯಸ್ ಗೋಪಾಲ್ ಶೂನ್ಯಕ್ಕೆ ಔಟಾದರು. ಸರ್ವಿಸಸ್ ಪರ ಬೌಲಿಂಗ್’ನಲ್ಲಿ ಮಿಂಚಿದ ಬಲಗೈ ಮಧ್ಯಮ ವೇಗಿ ದಿನೇಶ್ ಪಥಾನಿಯಾ 40 ರನ್ನಿಗೆ 5 ವಿಕೆಟ್ ಪಡೆದು ಕರ್ನಾಟಕದ ಬ್ಯಾಟಿಂಗ್ ಕ್ರಮಾಂಕಕ್ಕೆ ಆಘಾತ ನೀಡಿದರು.

ಪ್ರಥಮ ದಿನದಂತ್ಯಕ್ಕೆ ಕರ್ನಾಟಕ ತಂಡ 40 ಓವರ್’ಗಳಲ್ಲಿ 6 ವಿಕೆಟ್ ಕಳೆದುಕೊಂಡು ಕೇವಲ 148 ರನ್ ಗಳಿಸಿದೆ. ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಬಿ.ಆರ್ ಶರತ್ (ಅಜೇಯ 9) ಮತ್ತು ಆಲ್ರೌಂಡರ್ ಕೃಷ್ಣಪ್ಪ ಗೌತಮ್ (ಅಜೇಯ 10) 2ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಇದನ್ನೂ ಓದಿ : BCCI central contract : ಅಜಿಂಕ್ಯ ರಹಾನೆಗೆ ಕಾದಿದೆ ಬಿಗ್ ಶಾಕ್, ಸೂರ್ಯಕುಮಾರ್ ಯಾದವ್‌ಗೆ ಬಿಗ್ ಸರ್ಪ್ರೈಜ್

ಇದನ್ನೂ ಓದಿ : India Vs Bangladesh test series: ಏಕದಿನ ಸರಣಿ ಸೋತ ಭಾರತಕ್ಕೆ ನಾಳೆಯಿಂದ “ಟೆಸ್ಟ್”, ಟೀಮ್ ಇಂಡಿಯಾಗೆ ರಾಹುಲ್ ನಾಯಕತ್ವ

Karnataka Vs Services ranji match Frist Day Match Report Karnataka 148 runs Lost 6 wicket Ranji Trophy 2022-23 Updates

Comments are closed.