KL Rahul hits back to Critics : ರಾಹುಲ್ ಬಗ್ಗೆ ಇಲ್ಲ ಸಲ್ಲದ ಟೀಕೆ ; ಚುಚ್ಚು ಮಾತುಗಳಿಗೆ ಖಡಕ್ ಉತ್ತರ ಕೊಟ್ಟ ಕನ್ನಡಿಗ

ಬೆಂಗಳೂರು: (KL Rahul hits back to Critics) ಗಾಯದ ಸಮಸ್ಯೆ, ಕೋವಿಡ್ ಪಾಸಿಟಿವ್ ಕಾರಣ ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಕನ್ನಡಿಗ ಕೆ.ಎಲ್ ರಾಹುಲ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲ ಸಲ್ಲದ ಟೀಕೆಗಳು ಕೇಳಿ ಬರುತ್ತವೇ ಇವೆ. ಐಪಿಎಲ್’ನಲ್ಲಿ ಆಡುವಾಗ ಇಲ್ಲದ ಗಾಯ, ಸಮಸ್ಯೆಗಳು ಭಾರತ ಪರ ಆಡುವಾಗ ಮಾತ್ರ ಕಾಣಿಸಿಕೊಳ್ಳುತ್ತವೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ರಾಹುಲ್ ವಿರುದ್ಧ ಒಂದಷ್ಟು ಮಂದಿ ವಿವೇಕ ರಹಿತ ಕ್ರಿಕೆಟ್ ಫ್ಯಾನ್ಸ್ ಟೀಕೆ ಮಾಡಿದ್ದರು.

ತಮ್ಮ ವಿರುದ್ಧ ಕೇಳಿ ಬಂದಿದ್ದ ಟೀಕೆಗಳ ಬಗ್ಗೆ ಇಲ್ಲಿಯವರೆಗೆ ಮೌನವಾಗಿದ್ದ ರಾಹುಲ್ ಈಗ ತುಟಿ ಬಿಚ್ಚಿದ್ದಾರೆ. ಸಾಮಾಜಿಕ ಜಾಲತಾಣಗಳ ಟೀಕೆಗಳಿಗೆ ಅದೇ ವೇದಿಕೆಯಲ್ಲಿ ಉತ್ತರ ಕೊಟ್ಟಿರುವ ರಾಹುಲ್, ಗಾಯದ ಕಾರಣ ಟೀಮ್ ಇಂಡಿಯಾದಿಂದ ಹೊರಗುಳಿಯುವಂತಾಗಿದ್ದು, ಬಳಿಕ ಜರ್ಮನಿಯಲ್ಲಿ ಶಸ್ತ್ರಚಿಕಿತ್ಸೆ, ನಂತರ ಕೋವಿಡ್ ಪಾಸಿಟಿವ್ ಕಾಣಿಸಿ ಕೊಂಡದ್ದು. ಇವೆಲ್ಲದರ ಬಗ್ಗೆ ಬರೆದುಕೊಂಡಿರುವ ರಾಹುಲ್ ದೇಶದ ಪರ ಆಡುವುದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ ಎಂದಿದ್ದಾರೆ. ಮುಂಬರುವ ಜಿಂಬಾಬ್ವೆ ಪ್ರವಾಸಕ್ಕೆ ಭಾರತ ತಂಡದ ಆಯ್ಕೆ ನಡೆದ ಕೆಲವೇ ಗಂಟೆಗಳಲ್ಲಿ ರಾಹುಲ್ ಈ ಸ್ಪಷ್ಟನೆ ಕೊಟ್ಟಿದ್ದಾರೆ.

“ನನ್ನ ಆರೋಗ್ಯ ಮತ್ತು ಫಿಟ್ನೆಸ್ ಬಗ್ಗೆ ಕೆಲ ವಿಚಾರಗಳನ್ನು ನಾನು ಸ್ಪಷ್ಟಪಡಿಸಬೇಕಿದೆ. ಜೂನ್’ನಲ್ಲಿ ನಡೆದ ನನ್ನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿತ್ತು. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಭಾರತ ತಂಡಕ್ಕೆ ಮರಳುವ ಭರವಸೆಯೊಂದಿಗೆ ನಾನು ಟ್ರೈನಿಂಗ್ ಕೂಡ ಶುರು ಮಾಡಿದ್ದೆ. ನಾನು ಸಂಪೂರ್ಣ ಫಿಟ್ ಆಗುವ ಹಂತದಲ್ಲಿದ್ದಾಗ ದುರದೃಷ್ಟವಶಾತ್, ಕೋವಿಡ್-19 ಪಾಸಿಟಿವ್ ಕಾಣಿಸಿಕೊಂಡಿತು. ಇದು ನನ್ನ ಟೀಮ್ ಇಂಡಿಯಾ ಕಂಬ್ಯಾಕ್ ಪ್ರಕ್ರಿಯೆಯನ್ನು ಒಂದಷ್ಟು ವಾರ ಹಿಂದಕ್ಕೆ ತಳ್ಳಿತು. ಆದರೆ ಆದಷ್ಟು ಬೇಗ ಸಂಪೂರ್ಣ ಚೇತರಿಸಿಕೊಂಡು ಟೀಮ್ ಇಂಡಿಯಾ ಆಯ್ಕೆಗೆ ಲಭ್ಯವಾಗುವುದರತ್ತ ಗಮನ ಕೇಂದ್ರೀಕರಿಸಿದ್ದೇನೆ. ಭಾರತ ತಂಡವನ್ನು ಪ್ರತಿನಿಧಿಸುವುದು ಅತೀ ದೊಡ್ಡ ಗೌರವ ಮತ್ತು ಬ್ಲೂ ಜರ್ಸಿಯಲ್ಲಿ ಮತ್ತೆ ಕಾಣಿಸಿಕೊಳ್ಳುವುದನ್ನು ಕಾತರದಿಂದ ಕಾಯುತ್ತಿದ್ದೇನೆ. ಆದಷ್ಟು ಬೇಗ ನಿಮ್ಮೆಲ್ಲರನ್ನು ಕಾಣುತ್ತೇನೆ”.

  • ಕೆ.ಎಲ್ ರಾಹುಲ್, ಕ್ರಿಕೆಟಿಗ.

ಹೀಗಂತ ತಮ್ಮ ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣದ ಮೂಲಕ ಸಂದೇಶ ಕೊಟ್ಟಿರುವ ರಾಹುಲ್, ತಮ್ಮನ್ನು ಟೀಕಿಸಿದವರಿಗೂ ಉತ್ತರ ಕೊಟ್ಟಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ಆಯ್ಕೆ ಮಾಡಲಾಗಿದ್ದ ಭಾರತ ತಂಡದಲ್ಲಿ ರಾಹುಲ್ ಸ್ಥಾನ ಪಡೆದಿದ್ದರು. ಸ್ಪೋರ್ಟ್ಸ್ ಹರ್ನಿಯಾ (Sports Hernia) ಸಮಸ್ಯೆಗೆ ಜರ್ಮನಿ ಯಲ್ಲಿ ಶಸ್ತ್ರಚಿಕಿತ್ಸೆ ಪಡೆದು ಬಂದಿದ್ದ ರಾಹುಲ್, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಖಾಡೆಮಿಯಲ್ಲಿ ಅಭ್ಯಾಸವನ್ನೂ ಆರಂಭಿಸಿದ್ದರು. ಇನ್ನೇನು ವಿಂಡೀಸ್ ಪ್ರವಾಸಕ್ಕೆ ಸಿದ್ಧ ಎನ್ನುವಷ್ಟರಲ್ಲಿ ರಾಹುಲ್ ಅವರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿತ್ತು. ಹೀಗಾಗಿ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ರಾಹುಲ್ ಸ್ಥಾನದಲ್ಲಿ ಕೇರಳದ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಸಂಜು ಸ್ಯಾಮ್ಸನ್ ಅವಕಾಶ ಪಡೆದಿದ್ದರು.

ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ ತವರು ಟಿ20 ಸರಣಿಗೆ ನಾಯಕನಾಗಿ ಆಯ್ಕೆಯಾಗಿದ್ದ ರಾಹುಲ್ ಅವರಿಗೆ ಅಲ್ಲೂ ಅದೃಷ್ಟ ಕೈ ಕೊಟ್ಟಿತ್ತು. ಸರಣಿ ಆರಂಭಕ್ಕೆ ಮುನ್ನಾ ದಿನ ತೊಡೆಸಂಧು (Groin Injury) ಗಾಯಕ್ಕೊಳಗಾಗಿ ಇಡೀ ಸರಣಿಯಿಂದಲೇ ಹೊರ ಬಿದ್ದಿದ್ದರು. ನಂತರ ಇಂಗ್ಲೆಂಡ್ ಪ್ರವಾಸಕ್ಕೂ ರಾಹುಲ್ ಅಲಭ್ಯರಾಗಿದ್ದರು.

ಇದನ್ನೂ ಓದಿ : Gururaja Poojary : ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಕುಂದಾಪುರದ ಗುರುರಾಜ್‌ ಪೂಜಾರಿಗೆ ಕಂಚಿನ ಪದಕ

ಇದನ್ನೂ ಓದಿ : India squad for Zimbabwe tour announced : ಜಿಂಬಾಬ್ವೆ ಪ್ರವಾಸಕ್ಕಿಲ್ಲ ವಿರಾಟ್, ರಾಹುಲ್ : ಟೀಮ್ ಇಂಡಿಯಾಗೆ ಮತ್ತೆ ಶಿಖರ್ ಧವನ್ ಕ್ಯಾಪ್ಟನ್

KL Rahul hits back to Critics

Comments are closed.