News Next Special: IPL Players Auction; ಈ ಮೂವರು ಕನ್ನಡಿಗರ ಮೇಲೆ ಕೃಪೆ ತೋರುತ್ತಾ RCB ?

ಬೆಂಗಳೂರು: (Kannada News Next ) ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಮೇಲೆ ಕನ್ನಡಿಗರನ್ನು ಕಡೆಗಣಿಸುವ ಆರೋಪವಿದೆ. ಆರಂಭದ ಕೆಲ ವರ್ಷಗಳಲ್ಲಿ ಕನ್ನಡಿಗರಿಗೆ ಅವಕಾಶ ನೀಡಿದ್ದನ್ನು ಹೊರತು ಪಡಿಸಿದರೆ ನಂತರದ ಟೂರ್ನಿಗಳಲ್ಲಿ RCB ಫ್ರಾಂಚೈಸಿ ನಿರಂತರವಾಗಿ ಕರ್ನಾಟಕದ ಆಟಗಾರರನ್ನು ಕಡೆಗಣಿಸುತ್ತಾ ಬಂದಿದೆ. ಈ ಬಾರಿಯ ಐಪಿಎಲ್ ಆಟಗಾರರ ಹರಾಜಿನಲ್ಲಾದ್ರೂ (IPL Players Auction) ರಾಯಲ್ ಚಾಲೆಂಜರ್ಸ್ ಬೆಂಗಳೂರು ಕರ್ನಾಟಕದ ಆಟಗಾರರಿಗೆ ಅವಕಾಶ ನೀಡಲಿದ್ಯಾ ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆ.

ಐಪಿಎಲ್-2023ರ ಟೂರ್ನಿಗೆ ಆಟಗಾರರ ಹರಾಜು ಪ್ರಕ್ರಿಯೆಗೆ ಇನ್ನು ಬೆರಳೆಣಿಕೆಯ ದಿನಗಳಷ್ಟೇ ಬಾಕಿ. ಆಟಗಾರರ ಹರಾಜು ಮುಂದಿನ ಶುಕ್ರವಾರ (ಡಿಸೆಂಬರ್ 23) ಕೇರಳದ ಕೊಚ್ಚಿಯಲ್ಲಿ ನಡೆಯಲಿದ್ದು, ಒಟ್ಟು 405 ಮಂದಿ ಆಟಗಾರರು ಹರಾಜು ಪಟ್ಟಿಯಲ್ಲಿದ್ದಾರೆ. ಐಪಿಎಲ್ ಹರಾಜಿಗೊಳಪಡಲಿರುವ ಆಟಗಾರರ ಅಂತಿಮ ಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದ್ದು, ಇದರಲ್ಲಿ 273 ಭಾರತೀಯರು ಮತ್ತು 132 ಮಂದಿ ವಿದೇಶಿ ಆಟಗಾರರು ಸೇರಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್ ಆಡಿದ ಒಟ್ಟು 119 ಆಟಗಾರರು ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 10 ತಂಡಗಳಲ್ಲಿ ಒಟ್ಟು 87 ಸ್ಥಾನಗಳು ಖಾಲಿಯಿದ್ದು, ಇದರಲ್ಲಿ 30 ಮಂದಿ ವಿದೇಶಿ ಆಟಗಾರರಿಗೆ ಅವಕಾಶವಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 4 ಆಟಗಾರರನ್ನಷ್ಟೇ ತಂಡದಿಂದ ರಿಲೀಸ್ ಮಾಡಿದ್ದು, ಆ ಸ್ಥಾನಕ್ಕೆ ನಾಲ್ಕು ಆಟಗಾರರು ಸೇರಿದಂತೆ ಒಟ್ಟು 7 ಮಂದಿಯನ್ನು ಹರಾಜಿನಲ್ಲಿ ಖರೀದಿಸಬಹುದಾಗಿದೆ. ತಂಡದಿಂದ ರಿಲೀಸ್ ಮಾಡಿದ ಆಟಗಾರರ ಪೈಕಿ ಕರ್ನಾಟಕದ ಅನೀಶ್ವರ್ ಗೌತಮ್ ಮತ್ತು ಲವ್ನೀತ್ ಸಿಸೋಡಿಯಾ ಕೂಡ ಸೇರಿದ್ದಾರೆ. ಸದ್ಯ 18 ಆಟಗಾರರನ್ನು ಹೊಂದಿರುವ RCB ತಂಡದಲ್ಲಿ ಒಬ್ಬನೇ ಒಟ್ಟ ಕನ್ನಡಿಗನಿಲ್ಲದಂತಾಗಿದೆ. ಹೀಗಾಗಿ ಶುಕ್ರವಾರ ನಡೆಯುವ ಹರಾಜಿನಲ್ಲಿ ಕರ್ನಾಟಕದ ಆಟಗಾರರನ್ನು RCB ಖರೀದಿ ಮಾಡಲಿದೆಯೇ ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ಈ ಪ್ರಶ್ನೆಯ ಮಧ್ಯೆ ಕರ್ನಾಟಕದ ಮೂವರು ಆಟಗಾರರು RCB ಖರೀದಿಸಲಿರುವ ಸಂಭಾವ್ಯ ಪಟ್ಟಿಯಲ್ಲಿದ್ದಾರೆ.

1.ವಾಸುಕಿ ಕೌಶಿಕ್ (Vasuki Kaushik)
ಮೂಲ ಬೆಲೆ: 20 ಲಕ್ಷ
ವಯಸ್ಸು: 30
ಬಲಗೈ ಮಧ್ಯಮ ವೇಗದ ಬೌಲರ್

ವಾಸುಕಿ ಕೌಶಿಕ್ ಯಾಕೆ?:
ಬಲಗೈ ವೇಗದ ಬೌಲರ್ ವಾಸುಕಿ ಕೌಶಿಕ್ ಈ ಬಾರಿಯ ವಿಜಯ್ ಹಜಾರೆ ಟ್ರೋಫಿ ಏಕದಿನ
ಟೂರ್ನಿಯಲ್ಲಿ 18 ವಿಕೆಟ್ ಪಡೆದು ಮಿಂಚಿದ್ದಾರೆ. ಆ ಟೂರ್ನಿಯಲ್ಲಿ ಕೌಶಿಕ್ ಅಮೋಘ ಬೌಲಿಂಗ್ ಎಕಾನಮಿಯ ದಾಖಲೆ ಹೊಂದಿದ್ದು, ಓವರ್’ಗೆ ಸರಾಸರಿ 2.71 ರನ್’ಗಳನ್ನಷ್ಟೇ ಬಿಟ್ಟು ಕೊಟ್ಟಿದ್ದಾರೆ. RCB ತಂಡದಲ್ಲಿರುವ ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್’ಗೆ ಕರ್ನಾಟಕದ ಕೌಶಿಕ್ ಬ್ಯಾಕಪ್ ಬೌಲರ್ ಆಗಬಲ್ಲರು.

2. ಮನೋಜ್ ಭಾಂಡಗೆ (Manoj Bhandage)
ಮೂಲ ಬೆಲೆ: 20 ಲಕ್ಷ
ವಯಸ್ಸು: 24
ಬ್ಯಾಟಿಂಗ್ ಆಲ್ರೌಂಡರ್

ಮನೋಜ್ ಭಾಂಡಗೆ ಯಾಕೆ?:
ರಾಯಚೂರು ಮೂಲದವರಾದ ಮನೋಜ್ ಭಾಂಡಗೆ ಮಧ್ಯಮ ಕ್ರಮಾಂಕದ ಸ್ಫೋಟಕ ಎಡಗೈ ದಾಂಡಿಗ ಮತ್ತು ಬಲಗೈ ಮಧ್ಯಮ ವೇಗದ ಬೌಲರ್. ಕರ್ನಾಟಕ ಪರ ಟಿ20 ಹಾಗೂ ಏಕದಿನ ಟೂರ್ನಿಗಳಲ್ಲಿ 7ನೇ ಕ್ರಮಾಂಕದಲ್ಲಿ ಆಡಿ ಗಮನ ಸೆಳೆದಿದ್ದಾರೆ.

3. ಜಗದೀಶ ಸುಚಿತ್ (Jagadeesha Suchit)
ಮೂಲ ಬೆಲೆ: 20 ಲಕ್ಷ
ವಯಸ್ಸು: 28
ಎಡಗೈ ಸ್ಪಿನ್ ಆಲ್ರೌಂಡರ್

ಜಗದೀಶ ಸುಚಿತ್ ಯಾಕೆ ?:
ಎಡಗೈ ಸ್ಪಿನ್ ಆಲ್ರೌಂಡರ್ ಆಗಿರುವ ಜೆ.ಸುಚಿತ್’ಗೆ ಈಗಾಗ್ಲೇ ಐಪಿಎಲ್’ನಲ್ಲಿ ಆಡಿದ ಅನುಭವವಿದೆ. ಮೈಸೂರಿನ ಸುಚಿತ್ ಮುಂಬೈ ಇಂಡಿಯನ್ಸ್, ಪಂಜಾಬ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ಪರ ಆಡಿದ್ದಾರೆ. ಎಡಗೈ ಸ್ಪಿನ್ನರ್ ಆಗಿರುವ ಸುಚಿತ್ ಪವರ್’ಪ್ಲೇನಲ್ಲಿ ಬೌಲಿಂಗ್ ನಡೆಸಬಲ್ಲ ಪ್ರತಿಭಾವಂತ ಬೌಲರ್. ಕೆಳ ಕ್ರಮಾಂಕದಲ್ಲಿ ಸ್ಫೋಟಕ ಆಟಕ್ಕೆ ಹೆಸರುವಾಸಿ. ಹೀಗಾಗಿ ಈಗಾಗ್ಲೇ RCB ತಂಡದಲ್ಲಿರುವ ಬಂಗಾಳದ ಶಹಬಾಜ್ ನದೀಮ್’ಗೆ ನಮ್ಮ ಸುಚಿತ್ ಬ್ಯಾಕಪ್ ಆಟಗಾರನಾಗಬಲ್ಲರು.

ಇದನ್ನೂ ಓದಿ : India Vs Bangladesh test series : ಬಾಂಗ್ಲಾ ವಿರುದ್ಧ ಭಾರತಕ್ಕೆ 188 ರನ್ ಜಯ, ರಾಹುಲ್ ಟೆಸ್ಟ್ ನಾಯಕತ್ವಕ್ಕೆ ಮೊದಲ ಗೆಲುವು

ಇದನ್ನೂ ಓದಿ : Suresh Raina played Gully cricket : ಹುಟ್ಟೂರಲ್ಲಿ ಹುಡುಗರೊಂದಿಗೆ ಗಲ್ಲಿ ಕ್ರಿಕೆಟ್ ಆಡಿದ ಸುರೇಶ್ ರೈನಾ

News Next Special IPL Players Auction Royal Challengers Bangalore my be buy Vasuki Kaushik Manoj Bhandage Jagadeesha Suchit

Comments are closed.