KL Rahul bats for Stray Dogs: “ದಯವಿಟ್ಟು ಇದನ್ನು ನಿಲ್ಲಿಸಿ”.. ಬೀದಿ ನಾಯಿಗಳ ಸಾಮೂಹಿಕ ಹತ್ಯೆಗೆ ಮಿಡಿದ ಕ್ರಿಕೆಟಿಗ ಕೆ.ಎಲ್ ರಾಹುಲ್


ಬೆಂಗಳೂರು: (KL Rahul bats for Stray Dogs)ಕನ್ನಡಿಗ ಕೆ.ಎಲ್ ರಾಹುಲ್ (KL Rahul) ಅವರನ್ನು ಮೂಕಪ್ರಾಣಿಗಳಿಗೆ ಮಿಡಿಯುವ ವ್ಯಕ್ತಿತ್ವ. ಶ್ವಾನಪ್ರೇಮಿಯಾಗಿರುವ ರಾಹುಲ್, ಕಳೆದ 6 ವರ್ಷಗಳಿಂದ ತಮ್ಮ ಮನೆಯಲ್ಲೇ ”ಸಿಂಬಾ” ಹೆಸರಿನ ಮುದ್ದಾದ ನಾಯಿಯೊಂದನ್ನು ಸಾಕಿದ್ದಾರೆ. ”ಸಿಂಬಾ”ನನ್ನು ಮನೆಯ ಸದಸ್ಯನಂತೆಯೇ ನೋಡಿಕೊಳ್ಳುತ್ತಿದ್ದಾರೆ.

(KL Rahul bats for Stray Dogs)ಶ್ವಾನಗಳ ಬಗ್ಗೆ ವಿಶೇಷ ಪ್ರೀತಿ ಹೊಂದಿರುವ ಕೆ.ಎಲ್ ರಾಹುಲ್, ಇದೀಗ ಬೀದಿನಾಯಿಗಳ ರಕ್ಷಣೆಗೆ ಕರೆ ನೀಡಿದ್ದಾರೆ. ಕೇರಳದಲ್ಲಿ ಬೀದಿ ನಾಯಿಗಳನ್ನು ಸಾಮೂಹಿಕವಾಗಿ ಕೊಲ್ಲಲಾಗುತ್ತಿದ್ದು (mass dog killing in kerala), ಇದನ್ನು ತಡೆಯಬೇಕು ರಾಹುಲ್, ತಮ್ಮ ಇನ್’ಸ್ಟಾಗ್ರಾಂ ಸ್ಟೋರೀಸ್ ಮೂಲಕ ಆಗ್ರಹಿಸಿದ್ದಾರೆ.

“ಕೇರಳದಲ್ಲಿ ಬೀದಿ ನಾಯಿಗಳ ಸಾಮೂಹಿಕ ಹತ್ಯೆ ಮತ್ತೆ ಆರಂಭವಾಗಿದ್ದು, ದಯವಿಟ್ಟು ಇದನ್ನು ನಿಲ್ಲಿಸಿ” ಎಂದು ರಾಹುಲ್ ಮನವಿ ಮಾಡಿದ್ದಾರೆ. ಅಲ್ಲದೆ ಬೀದಿ ನಾಯಿಗಳ ರಕ್ಷಣೆಗಾಗಿ ಬೆಂಗಳೂರು ಮೂಲದ VOSD ಸಂಘಟನೆಯನ್ನು ಉಲ್ಲೇಖಿಸಿದ್ದಾರೆ. ಬೆಂಗಳೂರು ಮೂಲದ ಸ್ವಯಂಸೇವಾ ಸಂಸ್ಥೆ VOSD (Voice of Stray Dogs) ಬೀದಿನಾಯಿಗಳ ರಕ್ಷಣೆಗಾಗಿ ಕೆಲಸ ಮಾಡುತ್ತಿರುವ ಸಂಘಟನೆ.

ಕೆ.ಎಲ್ ರಾಹುಲ್(KL Rahul) ಜೊತೆ ಭಾರತ ಏಕದಿನ ತಂಡದ ಎಡಗೈ ಆರಂಭಿಕ ಬ್ಯಾಟ್ಸ್’ಮನ್ ಶಿಖರ್ ಧವನ್ ಕೂಡ ಕೇರಳದಲ್ಲಿ ಬೀದಿ ನಾಯಿಗಳ ರಕ್ಷಣೆಗೆ ಕರೆ ನೀಡಿದ್ದಾರೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಶಿಖರ್ ಧವನ್, “ಕೇರಳದಲ್ಲಿ ಬೀದಿ ನಾಯಿಗಳ ಸಾಮೂಹಿತ ಹತ್ಯೆ ನಡೆಯುತ್ತಿರುವುದು ನಿಜಕ್ಕೂ ಭಯಾನಕ. ಇಂತಹ ನಡೆಗಳನ್ನು ಮರು ಪರಿಶೀಲಿಸುವಂತೆ ಹಾಗೂ ನಿರ್ದಯ ಹತ್ಯೆಗಳನ್ನು ನಿಲ್ಲಿಸುವಂತೆ ಮನವಿ ಮಾಡುತ್ತೇನೆ” ಎಂದು ಶಿಖರ್ ಟ್ವಿಟರ್’ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ಸಂಜು ಸ್ಯಾಮ್ಸನ್ ಬಾಯಿಗೆ ತುಪ್ಪ ಸವರಿದ ಬಿಸಿಸಿಐ ವಿರುದ್ಧ ಫ್ಯಾನ್ಸ್ ಗರಂ!

ಇದನ್ನೂ ಓದಿ : ಸೈಯದ್ ಮುಷ್ತಾಕ್ ಅಲಿ ಟಿ20ಗೆ ಸೂಪರ್ ಸಬ್ ವಾಪಸ್: ಐಪಿಎಲ್‌ಗೂ ಬರಲಿದೆ ಬಿಸಿಸಿಐನ ಹೊಸ ರೂಲ್ಸ್?

ಇದನ್ನೂ ಓದಿ : ವೆಂಕಟೇಶ್ ಅಯ್ಯರ್ ತಲೆಗೆ ಗಾಯ; ಆಸ್ಪತ್ರೆಗೆ ಹೊತ್ತೊಯ್ಯಲು ಮೈದಾನಕ್ಕೇ ನುಗ್ಗಿದ ಆ್ಯಂಬುಲೆನ್ಸ್

ಇದನ್ನೂ ಓದಿ : ದಕ್ಷಿಣ ಆಫ್ರಿಕಾದ ದಿಗ್ಗಜ ಮುಂಬೈ ಇಂಡಿಯನ್ಸ್ ಕೋಚ್ ; ಮಾರ್ಕ್ ಬೌಷರ್ ಹೆಗಲೇರಿದ ಮುಂಬೈ ಗುರು ಪಟ್ಟ

ಇದನ್ನೂ ಓದಿ : ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಔಟಾದ್ರೆ ಟಿ20ಯಲ್ಲಿ ಭಾರತ 60 ರನ್ನಿಗೆ ಆಲೌಟ್

ಕಳೆದ ಕೆಲವು ದಿನಗಳಿಂದ ಕೇರಳದಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದೆ. ಬೀದಿನಾಯಿಗಳು ಅನೇಕ ಜನರನ್ನು ಕಟ್ಟಿದ್ದು, ಕೆಲವರು ರೇಬೀಸ್ ಕಾಯಿಲೆಯಿಂದ ಸತ್ತಿದ್ದಾರೆ. ಈ ವಿಚಾರದಲ್ಲಿ ಹೈಕೋರ್ಟ್ ಕೂಡ ಮಧ್ಯಪ್ರವೇಶಿಸಿದ್ದು, ನಾಗರಿಕರನ್ನು ರಕ್ಷಿಸುವುದು ಸರ್ಕಾರದ ಜವಾಬ್ದಾರಿ ಎಂದಿದೆ. ಇದರ ಬೆನ್ನಲ್ಲೇ ಕೇರಳ ಸರ್ಕಾರ ರಾಜ್ಯದಲ್ಲಿ ಬೀದಿ ನಾಯಿಗಳ ಸಾಮೂಹಿಕ ಹತ್ಯೆಗೆ ಆದೇಶ ನೀಡಿದೆ.

“Please stop this”.. Cricketer KL Rahul reacts to mass killing of stray dogs

Comments are closed.