S Sreesanth : IPL 2022 ಮೆಗಾ ಹರಾಜಿಗೆ ಎಂಟ್ರಿ ಕೊಟ್ಟ ರಾಜಸ್ಥಾನ ರಾಯಲ್ಸ್‌ ಮಾಜಿ ಆಟಗಾರ ಶ್ರೀಶಾಂತ್‌

ಮುಂಬೈ : ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಸಿದ್ದತೆ ಜೋರಾಗಿದೆ. ಲಕ್ನೋ ಮತ್ತು ಅಹಮದಾಬಾದ್‌ ತಂಡಗಳು ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ ಮೆಗಾ ಹರಾಜಿಗಾಗಿ ಆಟಗಾರರ ಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ. ಯಾವ ಆಟಗಾರರು ಯಾವ ತಂಡವನ್ನು ಪ್ರತಿನಿಧಿಸುತ್ತಾರೆ ಅನ್ನೋ ಕುತೂಹಲದ ನಡುವಲ್ಲೇ ರಾಜಸ್ಥಾನ ರಾಯಲ್ಸ್‌ ತಂಡದ ಮಾಜಿ ಆಟಗಾರ ಶ್ರೀಶಾಂತ್‌ (S Sreesanth) ಐಪಿಎಲ್‌ 2022ಗೆ ಎಂಟ್ರಿ ಕೊಟ್ಟಿದ್ದಾರೆ.

ಮ್ಯಾಚ್‌ ಫಿಕ್ಸಿಂಗ್‌ ಆರೋಪದ ಹಿನ್ನೆಲೆಯಲ್ಲಿ ಕ್ರಿಕೆಟ್‌ನಿಂದ ನಿಷೇಧಕ್ಕೆ ಒಳಗಾಗಿದ್ದ 38 ವರ್ಷದ ಶ್ರೀಶಾಂತ್‌, 2021 ರ ಋತುವಿನಲ್ಲಿ 75 ಲಕ್ಷಗಳ ಮೂಲ ಬೆಲೆಗೆ ಹರಾಜಿನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಆದರೆ ಯಾವುದೇ ಪ್ರಾಂಚೈಸಿಗಳು ಶ್ರೀಶಾಂತ್‌ ಅವರನ್ನು ಖರೀದಿ ಮಾಡಿರಲಿಲ್ಲ. ಆದರೀಗ ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಎಸ್ ಶ್ರೀಶಾಂತ್ ಅವರು 50 ಲಕ್ಷ ರೂಪಾಯಿ ಆರಂಭಿಕ ಬೆಲೆಗೆ ನೋಂದಾಯಿಸಿ ಕೊಂಡಿದ್ದಾರೆ. ಶ್ರೀಶಾಂತ್ ಈ ಹಿಂದೆ 2013 ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಐಪಿಎಲ್ ಆಡಿದ್ದರು. ಐಪಿಎಲ್‌ನ ಬಹು ಬೇಡಿಕೆಯ ಆಟಗಾರ ಎನಿಸಿಕೊಂಡಿದ್ದ ಶ್ರೀಶಾಂತ್ 44 ಪಂದ್ಯಗಳನ್ನು ಆಡಿದರು ಮತ್ತು 40 ವಿಕೆಟ್‌ ಪಡೆದುಕೊಂಡಿದ್ದರು.

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಶ್ರೀಶಾಂತ್ ಅತೀ ಹೆಚ್ಚು ವರ್ಷಗಳ ಕಾಲ ರಾಜಸ್ಥಾನ್ ರಾಯಲ್ಸ್ ಜೊತೆ ಆಡಿದ್ದರು. 2008 ರ ಐಪಿಎಲ್‌ನ ಉದ್ಘಾಟನಾ ಆವೃತ್ತಿಯಲ್ಲಿ, ಬರೋಬ್ಬರಿ 18 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಸೊಹೈಲ್ ತನ್ವೀರ್ ನಂತರ ಪಂದ್ಯಾವಳಿಯಲ್ಲಿ ಎರಡನೇ ಅತೀ ಹೆಚ್ಚು ವಿಕೆಟ್‌ ಪಡೆದ ಆಟಗಾರ ಎನಿಸಿಕೊಂಡಿದ್ದರು. ಶ್ರೀಶಾಂತ್ 2009 ರ ಐಪಿಎಲ್ ಆವೃತ್ತಿಯ ದ್ವಿತೀಯಾರ್ಧದಲ್ಲಿ ಮಾತ್ರ ಕಾಣಿಸಿಕೊಂಡಿದ್ದರು. ಆದರೆ ಗಾಯದ ಸಮಸ್ಯೆಯಿಂದ ಹಲವು ಪಂದ್ಯಗಳನ್ನು ಮಿಸ್‌ ಮಾಡಿಕೊಂಡಿದ್ದರು.

2010 ರ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಕಿಂಗ್ಸ್ XI ಪಂಜಾಬ್ ಪರ ಆಡಿದ್ದ ಶ್ರೀಶಾಂತ್‌, 201ರಲ್ಲಿ ಕೊಚ್ಚಿ ತಂಡದ ಪರ ಕಾಣಿಸಿಕೊಂಡಿದ್ದರು. 2012 ರಲ್ಲಿ ಶ್ರೀಶಾಂತ್‌ ಮತ್ತೆ ರಾಜಸ್ಥಾನ ರಾಯಲ್ಸ್‌ಗೆ ಮರಳಿದ್ದರು. ಆದರೆ ಅದೃಷ್ಟವಶಾತ್‌ ಗಾಯದ ಸಮಸ್ಯೆಯಿಂದಾಗಿ ಶ್ರೀಶಾಂತ್‌ 2012ರ ಪಂದ್ಯಾವಳಿಯಲ್ಲಿ ಆಡೋದಕ್ಕೆ ಸಾಧ್ಯವಾಗಿರಲಿಲ್ಲ. ಆದರೆ 2013 ರ ಐಪಿಎಲ್ ಪಂದ್ಯಾವಳಿಯಲ್ಲಿ ಸ್ಪಾಟ್‌ ಫಿಕ್ಸಿಂಗ್‌ ಆರೋಪ ಶ್ರೀಶಾಂತ್‌ ವಿರುದ್ದ ಕೇಳಿಬಂದಿತ್ತು. ಇದೇ ಕಾರಣಕ್ಕೆ ರಾಜಸ್ಥಾನ ರಾಯಲ್ಸ್‌ ತಂಡ ಶ್ರೀಶಾಂತ್‌ ಜೊತೆಗಿನ ಒಪ್ಪಂದವನ್ನು ಮುರಿದುಕೊಂಡಿತ್ತು.

25 ಏಪ್ರಿಲ್ 2008 ರಂದು, ಮೊಹಾಲಿಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅವರ ಕಿಂಗ್ಸ್ XI ಪಂಜಾಬ್ ವಿಜಯದ ವಿಜಯದ ನಂತರ, ಮುಂಬೈನ ನಾಯಕ ಹರ್ಭಜನ್ ಸಿಂಗ್ ಶ್ರೀಶಾಂತ್ ಅವರ ಕಣ್ಣಿಗೆ ಕಪಾಳಮೋಕ್ಷ ಮಾಡಿದರು. ಈ ವಿಡಿಯೋ ಸಾಕಷ್ಟು ವೈರಲ್‌ ಆಗಿತ್ತು. ಶ್ರೀಶಾಂತ್‌ ಕಣ್ಣೀರಿಟ್ಟಿದ್ದು ದೇಶ, ವಿದೇಶಗಳಲ್ಲಿಯೂ ಸಾಕಷ್ಟು ಸುದ್ದಿ ಮಾಡಿತ್ತು. ನಂತರದಲ್ಲಿ ಶ್ರೀಶಾಂತ್‌ ಹರ್ಭಜನ್‌ ಸಿಂಗ್‌ ವಿರುದ್ದ ಯಾವುದೇ ದೂರುಗಳನ್ನು ಸಲ್ಲಿಕೆ ಮಾಡಿರಲಿಲ್ಲ. ಇಎಸ್‌ಪಿಎನ್‌ಕ್ರಿಕ್‌ಇನ್‌ಫೋ ವರದಿಯ ಪ್ರಕಾರ ಐಪಿಎಲ್ 2022ರ ಹರಾಜು ಪಟ್ಟಿಗೆ ಭಾರತದ ಮಾಜಿ ಬೌಲರ್ ಎಸ್.ಶ್ರೀಶಾಂತ್ ಸೇರ್ಪಡೆಯಾಗಿದ್ದಾರೆ. ಭಾರತೀಯ ಸ್ಪಿನ್ನರ್‌ಗಳಾದ ಆರ್ ಅಶ್ವಿನ್ ಮತ್ತು ಯುಜ್ವೇಂದ್ರ ಚಾಹಲ್ ಮತ್ತು ಆಸ್ಟ್ರೇಲಿಯಾದ ಆಟಗಾರರಾದ ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಷ್ ಸೇರಿದಂತೆ 49 ಕ್ರಿಕೆಟಿಗರು ಹರಾಜಿಗಾಗಿ ಗರಿಷ್ಠ ಮೂಲ ಬೆಲೆಯಲ್ಲಿ 2 ಕೋಟಿ ರೂಪಾಯಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.

ಇನ್ನು ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಹೊಸ ತಂಡಗಳಾದ ಲಕ್ನೋ ಕೆಎಲ್ ರಾಹುಲ್ ಅವರನ್ನು ಬರೋಬ್ಬರಿ 17 ಕೋಟಿ ರೂ.ಗೆ ಖರೀದಿ ಮಾಡಿದೆ. ಐಪಿಎಲ್‌ ಇತಿಹಾಸ ದಲ್ಲಿಯೇ ರಾಹುಲ್‌ ದುಬಾರಿ ಮೊತ್ತಕ್ಕೆ ತಂಡ ಸೇರ್ಪಡೆಯಾಗಿದ್ದಾರೆ. ಜೊತೆಗೆ ಸ್ಟೊಯಿನಿಸ್ ಮತ್ತು ಬಿಷ್ಣೋಯ್ ಸಹಿ ಹಾಕಿದ್ದು, ಇಬ್ಬರೂ ಕ್ರಮವಾಗಿ 9.2 ಕೋಟಿ ರೂ. ಮತ್ತು 4 ಕೋಟಿ ರೂ. ಪಡೆದುಕೊಂಡಿದ್ದಾರೆ. ಮಾರ್ಕಸ್ ಸ್ಟೊಯಿನಿಸ್ ಕಳೆದ ಕೆಲವು ಋತುಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅವಿಭಾಜ್ಯ ಅಂಗವಾಗಿದ್ದರು. ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ನಲ್ಲಿಯೂ ಮಿಂಚುವ ತಾಕತ್ತು ಹೊಂದಿರುವ ಸ್ಟೋಯಿನಿಸ್‌ ಲಕ್ನೋ ತಂಡದಿಂದ ದೊಡ್ಡ ಆಯ್ಕೆಯಾಗಿದ್ದಾರೆ. ಇನ್ನು ಐಪಿಎಲ್ 2022 ರ ಅಹಮದಾಬಾದ್ ಡ್ರಾಫ್ಟ್ ಪಿಕ್ಸ್ ನಲ್ಲಿ ಹಾರ್ದಿಕ್ ಪಾಂಡ್ಯ (ನಾಯಕ) ಅವರನ್ನು ರೂ 15 ಕೋಟಿ ಖರೀದಿ ಮಾಡಿದೆ. ಉಳಿದಂತೆ ರಶೀದ್ ಖಾನ್ 15 ಕೋಟಿ ರೂ., ಶುಭಮನ್ ಗಿಲ್ 8 ಕೋಟಿ ರೂ.ಗೆ ಸಹಿ ಮಾಡಿದ್ದಾರೆ. ಅಹಮದಾಬಾದ್ ತಂಡ 52 ಕೋಟಿ ರೂಪಾಯಿಯಲ್ಲಿ ಉಳಿದ ಆಟಗಾರನ್ನು ಖರೀದಿ ಮಾಡಬೇಕಾಗಿದೆ.

ಇದನ್ನೂ ಓದಿ : ಐಪಿಲ್‌ ಮೆಗಾ ಹರಾಜಿಗೆ ಆಟಗಾರರ ಪಟ್ಟಿ ಸಿದ್ದ: ಆಟಗಾರರ ಮೂಲ ಬೆಲೆ ಎಷ್ಟು ಗೊತ್ತಾ

ಇದನ್ನೂ ಓದಿ : ಲಕ್ನೋ ತಂಡಕ್ಕೆ ಕೆ.ಎಲ್.ರಾಹುಲ್‌ ನಾಯಕ, ಮಾರ್ಕಸ್ ಸ್ಟೊಯಿನಿಸ್, ರವಿ ಬಿಷ್ಣೋಯ್ ಸೇರ್ಪಡೆ

(Rajasthan Royals former player S Sreesanth enter IPL 2022)

Comments are closed.