Hardik Pandya follows Dhoni strategy : ಹಾರ್ದಿಕ್ ಪಾಂಡ್ಯ ಬ್ಯಾಟಲ್ಲಿ ಧೋನಿ ಸಕ್ಸಸ್ ತಂತ್ರ, ಪವರ್ ಹಿಟ್ಟಿಂಗ್‌ಗೆ ಮಹೀ ಮಂತ್ರ ಪಾಲಿಸುತ್ತಿದ್ದಾರೆ ಆಲ್ರೌಂಡರ್

ಪರ್ತ್: Hardik Pandya follows Dhoni strategy : ಟಿ20 ಕ್ರಿಕೆಟ್ ಫಾಸ್ಟ್ & ಫ್ಯೂರಿಯಸ್. ಕೇವಲ ಮೂರೂವರೆ ಗಂಟೆಗಳಲ್ಲಿ ಮುಗಿದು ಹೋಗುವ ಚುಟುಕು ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಭರ್ತಿ ಮನರಂಜನೆ ನೀಡುವ ಕ್ರಿಕೆಟ್ ಪ್ರಕಾರ. ಟಿ20ಯಲ್ಲಿ ಯಶಸ್ಸು ಗಳಿಸಲು ಆಟಗಾರರು ನಾನಾ ತಂತ್ರಗಳನ್ನು ಅನುಸರಿಸುತ್ತಾರೆ. ಸ್ಟ್ರಾಟಜಿ, ಬ್ಯಾಟಿಂಗ್, ಬೌಲಿಂಗ್.. ಹೀಗೆ ಪ್ರತೀ ವಿಭಾಗದಲ್ಲೂ ಹೊಸತನವನ್ನು ಕಾಣಬಹುದು. ಇದೀಗ ಟಿ20 ವಿಶ್ವಕಪ್ (T20 World Cup 2022) ಟೂರ್ನಿಯಲ್ಲಿ ಆಡುತ್ತಿರುವ ಭಾರತ ತಂಡದ ಕೆಲ ಆಟಗಾರರು ಯಶಸ್ಸಿಗೆ ಮಹೀ ಮಂತ್ರದ ಮೊರೆ ಹೋಗಿದ್ದಾರೆ. ಇದು ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಅವರ ಸಕ್ಸಸ್ ಮಂತ್ರ. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ವಿಶ್ವಕಪ್’ನಲ್ಲಿ ಭಾರತ ತಂಡದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಧೋನಿ ಯಶೋ ಮಂತ್ರವನ್ನು ಪಾಲಿಸುತ್ತಿದ್ದಾರೆ.

ಹಾರ್ದಿಕ್ ಪಾಂಡ್ಯ ಅವರಿಗೆ ಎಂ.ಎಸ್ ಧೋನಿ ಅವರೇ ರೋಲ್ ಮಾಡೆಲ್. ಧೋನಿ ಗರಡಿಯಲ್ಲಿ ಪಳಗಿರುವ ಪಾಂಡ್ಯ, ಇದೀಗ ಧೋನಿ ಅವರ ಸಕ್ಸಸ್ ಮಂತ್ರವನ್ನು ಅನುಸರಿಸುತ್ತಿದ್ದಾರೆ. ನೀವು ಹಾರ್ದಿಕ್ ಪಾಂಡ್ಯ ಅವರ ಕ್ರಿಕೆಟ್ ಬ್ಯಾಟನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ. ಬ್ಯಾಟ್’ನ ತುದಿಯಲ್ಲಿ ರೌಂಡ್ ಶೇಪನ್ನು (Round shape) ಕಾಣಬಹುದು. ಈ ಹಿಂದೆ ಪಾಂಡ್ಯ ಬಳಸುತ್ತಿದ್ದ ಬ್ಯಾಟ್’ನ ತುದಿ (Bottom) ಸ್ಕ್ವೇರ್ ಆಕಾರದಲ್ಲಿತ್ತು. ಆದರೆ ಈಗ ಪಾಂಡ್ಯ ರೌಂಡ್ ಶೇಪ್’ನ ಬ್ಯಾಟನ್ನು ಬಳಸುತ್ತಿದ್ದಾರೆ. ಇದು ಪವರ್ ಹಿಟ್ಟಿಂಗ್’ಗೆ ಅನುಕೂಲ. ಈ ರೀತಿಯ ಬ್ಯಾಟನ್ನು ಬಳಸುವಂತೆ ಪಾಂಡ್ಯಗೆ ಸ್ವತಃ ಧೋನಿ ಅವರೇ ಸಲಹೆ ನೀಡಿದ್ದಾರೆ.

ಬಾಟಮ್’ನಲ್ಲಿ ರೌಂಡ್ ಶೇಪ್ ಇರುವ ಬ್ಯಾಟನ್ನು ಮೊದಲ ಬಳಸಿದ್ದು ಎಂ.ಎಸ್ ಧೋನಿ. 2019ರ ಐಸಿಸಿ ವಿಶ್ವಕಪ್ ಟೂರ್ನಿಗೂ ಮುನ್ನ ಧೋನಿ ಈ ಬ್ಯಾಟನ್ನು ಬಳಸಿದ್ದರು. ಸೀಮಿತ ಓವರ್’ಗಳ ಕ್ರಿಕೆಟ್’ಗೆಂದೇ ಈ ಬ್ಯಾಟನ್ನು ವಿಶೇಷವಾಗಿ ತಯಾರಿಸಲಾಗುತ್ತದೆ.

Hardik Pandya follows Dhoni strategy : ರೌಂಡ್ ಶೇಪ್ ಬ್ಯಾಟ್’ನ ಪ್ರಯೋಜನವೇನು ?

ಬ್ಯಾಟ್ಸ್’ಮನ್’ಗಳಿಗೆ ಮೈದಾನ ಎಲ್ಲಾ ವಿಭಾಗಗಳಲ್ಲಿ ಚೆಂಡನ್ನು ಬಾರಿಸಲು ಇದು ಸಹಕಾರಿ. ವಿಶೇಷವಾಗಿ ಬ್ಯಾಟಿಂಗ್ ಸ್ಟಾನ್ಸ್’ನಲ್ಲಿ (Batting stance) ಇದು ಫ್ಲೆಕ್ಸಿಬಿಲಿಟಿ ಸಿಗುವಂತೆ ಮಾಡುತ್ತದೆ. ಭಾರತ ತಂಡದಲ್ಲಿ ಹಾರ್ದಿಕ್ ಪಾಂಡ್ಯ, ಕೆ.ಎಲ್ ರಾಹುಲ್ ಮತ್ತು ವಿಕೆಟ್ ಕೀಪರ್ ರಿಷಭ್ ಪಂತ್ ಈ ರೀತಿಯ ಬ್ಯಾಟನ್ನು ಬಳಸುತ್ತಾರೆ.

ಇದನ್ನೂ ಓದಿ : T20 World Cup 2022: ಭಾರತ Vs ದಕ್ಷಿಣ ಆಫ್ರಿಕಾ ಮ್ಯಾಚ್, ಕನ್ನಡಿಗ ರಾಹುಲ್‌ಗೆ ಮತ್ತೊಂದು ಅಗ್ನಿಪರೀಕ್ಷೆ

ಇದನ್ನೂ ಓದಿ : IPL 2023 RCB TEAM : ಟೀಂ ಇಂಡಿಯಾದ 3 ಆಟಗಾರರಿಗೆ ಕೋಕ್ ಕೊಡಲಿದೆ ಆರ್ ಸಿಬಿ

T20 World Cup 2022 Hardik Pandya follows Dhoni strategy

Comments are closed.