World Stroke Day : ಹೃದಯದ ಆರೋಗ್ಯಕ್ಕೆ 4 ಆಯುರ್ವೇದ ಸಲಹೆಗಳು

ಪ್ರತಿ ವರ್ಷ ವಿಶ್ವ ಸ್ಟ್ರೋಕ್‌ ದಿನ (World Stroke Day) ದಂದು ಹೃದಯದ ಆರೋಗ್ಯದ ಪ್ರಾಮುಖ್ಯತೆಯ ಬಗ್ಗೆ ಗಮನಸೆಳಯಲಾಗುತ್ತದೆ. ನಮ್ಮ ದೇಹದ ಬಹು ಮುಖ್ಯ ಅಂಗ ಹೃದಯ (Heart). ಹೃದಯದ ಬಡಿತ ಏರುಪೇರಾದರೆ ತೀವ್ರ ಪರಿಣಾಮಗಳು ಉಂಟಾಗುತ್ತವೆ. ಹೃದಯವು ಆರೋಗ್ಯಪೂರ್ಣವಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ. ಇಲ್ಲದಿದ್ದರೆ ಅದರಿಂದ ಅನೇಕ ಹಾನಿಯುಂಟಾಗಬಹುದು. ಜಗತ್ತಿನ ಜನರಲ್ಲಿ ಕಾಡುವ ತೀವ್ರ ಅನಾರೊಗ್ಯದಲ್ಲಿ ಸ್ಟ್ರೋಕ್‌ (ಪಾರ್ಶ್ವವಾಯು) ಕೂಡ ಒಂದು.

ಅನಾರೋಗ್ಯಕರ ಆಹಾರ ಮತ್ತು ಜೀವನಶೈಲಿಯಿಂದ ಹೃದಯ ಸಂಬಂಧಿ ಕಾಯಿಲೆಗಳು ಬರುತ್ತವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ. ವೈದ್ಯರನ್ನು ಭೇಟಿಯಾದಾಗ ಇದರ ಬಗ್ಗೆ ಸಮಾಲೋಚಿಸುತ್ತೇವೆ. ಆದರೆ ಮತ್ತೆ ಅದೇ ಅನಾರೋಗ್ಯಕರ ಜೀವನಶೈಲಿಗೇ ಹಿಂತಿರುಗತ್ತೇವೆ. ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದು ಮತ್ತು ಆಯುರ್ವೇದ ಪದ್ಧತಿಯನ್ನುಪಾಲಿಸುವುದರ ಮೂಲಕ ಹೃದಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

‘ಔಷಧ ಶಾಸ್ತ್ರದ ಹಳೆಯ ಶಾಖೆಗಳಲ್ಲಿ ಒಂದಾದ ಆಯುರ್ವೇದವು ಪಾರ್ಶ್ವವಾಯು ಬರುವುದನ್ನು ತಡೆಯಲು ಸಹಾಯ ಮಾಡುವ ಸಲಹೆ ಮತ್ತು ತಂತ್ರಗಳನ್ನು ಹೊಂದಿದೆ. ನಾವೆಲ್ಲರೂ ಮನಸೋ ಇಚ್ಛೆ ತಿನ್ನುವುದನ್ನು ರೂಢಿಸಿಕೊಂಡಿದ್ದೇವೆ. ಆದರೆ, ಆಯುರವೇದ ಪ್ರಕಾರ ಈ ರೀತಿಯ ಅಭ್ಯಾಸವೇ ಅನಾರೋಗ್ಯಕ್ಕೆ ಮುಖ್ಯ ಕಾರಣ. ಆಹಾರಗಳಲ್ಲಿರುವ ಕೊಲೆಸ್ಟ್ರಾಲ್‌ ಜೀರ್ಣವಾಗಲು ಕಷ್ಟವಾಗುತ್ತದೆ. ಇದು ಸಾಮಾನ್ಯವಾಗಿ ಹೃದಯದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ,’ ಎಂದು ಕಪಿವಾ ಆರ್ & ಡಿ ಮುಖ್ಯಸ್ಥ ಡಾ. ಕೃತಿ ಸೋನಿ ಹೇಳುತ್ತಾರೆ.

ಆಯುರ್ವೇದದಲ್ಲಿ ಹೇಳಿರುವ ಅಭ್ಯಾಸಗಳು ನಿಮ್ಮ ದೇಹವನ್ನು ಯಾವುದೇ ಹೃದಯ ಸಂಬಂದಿ ಕಾಯಿಲೆ ಮತ್ತು ಅದಕ್ಕೆ ಸಂಬಂಧಿಸಿದ ಅಪಾಯಗಳಿಂದ ರಕ್ಷಿಸುತ್ತದೆ. ಅದಕ್ಕಾಗಿ ಡ. ಸೋನಿ ಅವರು ಉತ್ತಮ ಹೃದಯದ ಆರೋಗ್ಯಕ್ಕಾಗಿ 4 ಆಯುರ್ವೇದ ಸಲಹೆಗಳನ್ನು ನೀಡಿದ್ದಾರೆ.

ಗಿಡಮೂಲಿಕೆಗಳನ್ನು ಸೇವಿಸಿ :
ಅನೇಕ ಆಯುರ್ವೇದ ಗಿಡಮೂಲಿಕೆಗಳು ಹೃದಯವನ್ನು ಆರೋಗ್ಯವಾಗಿಡಲು ಅತ್ಯಂತ ಪರಿಣಾಮಕಾರಿಯಾಗಿದೆ. ಮೆಂತ್ಯ , ನೆಲ್ಲಿಕಾಯಿ ಮತ್ತು ಅರಿಶಿನದಂತಹ ಪದಾರ್ಥಗಳು ನಿಮ್ಮ ದೇಹದ ಒಟ್ಟಾರೆ ಆರೋಗ್ಯಕ್ಕೆ ಅದ್ಭುತ ಪ್ರಯೋಜನಗಳನ್ನು ನೀಡುತ್ತವೆ ಎಂದು ಸಾಬೀತಾಗಿದೆ. ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯುವ ನೆಲ್ಲಿಕಾಯಿ, ನೇರಳೆ ಹಣ್ಣು ಮತ್ತು ಹಾಗಲಕಾಯಿಗಳ ಸಂಯೋಜನೆಯಿಂದ ತಯಾರಿಸಿರುವ ಜ್ಯೂಸ್‌ಗಳ ಬಳಕೆಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು.

ಉತ್ತಮ ಆರೋಗ್ಯಕ್ಕೆ ವ್ಯಾಯಾಮವೇ ದಾರಿ:
ಯಾವುದೇ ರೋಗವನ್ನು ತಡೆಗಟ್ಟುವ ವಿಷಯಕ್ಕೆ ಬಂದಾಗ, ವ್ಯಾಯಾಮವು ಬಹಳ ಮುಖ್ಯವಾಗಿದೆ. ಇದು ಹೃದಯ ಮತ್ತು ದೇಹಕ್ಕೆ ಪೋಷಣೆ ನೀಡುತ್ತದೆ. ವ್ಯಾಯಾಮವು ಆರೋಗ್ಯವನ್ನು ಉತ್ತೇಜಿಸುತ್ತದೆ. ಯಾವುದೇ ರೀತಿಯ ವ್ಯಾಯಾಮ ಅಂದರೆ ಜಿಮ್, ಯೋಗ ಅಥವಾ ಪ್ರಾಣಾಯಾಮಗಳು ಚಯಾಪಚಯವನ್ನು ಹೆಚ್ಚಿಸಲು ಮತ್ತು ನಿಮ್ಮ ಮೇದೋಜ್ಜೀರಕ ಗ್ರಂಥಿಯು ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ : 13 year old Girl Dies Heart Attack: ಕುಂದಾಪುರ : ಓದುತ್ತಿದ್ದಾಗ 13 ವರ್ಷದ ಬಾಲಕಿ ಹೃದಯಾಘಾತದಿಂದ ಸಾವು

ನೈಸರ್ಗಿಕ ಸಿಹಿಯನ್ನೆ ತಿನ್ನಿ :
ನಮ್ಮಲ್ಲಿ ಹೆಚ್ಚಿನವರು ಬಿಳಿ ಸಕ್ಕರೆಯನ್ನು ಇಷ್ಟಪಡುತ್ತಾರೆ. ಆದರೆ ಇದು ಹೆಚ್ಚಿನ ಕ್ಯಾಲೊರಿಗಳನ್ನು ಹೊಂದಿದೆ. ಇದನ್ನು ಆಹಾರದಲ್ಲಿ ಸೇವಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಆದ್ದರಿಂದ, ಹಣ್ಣುಗಳು, ಬೆಲ್ಲ ಅಥವಾ ಜೇನುತುಪ್ಪದಂತಹ ನೈಸರ್ಗಿಕ ಸಿಹಿ ಬಳಸಲು ಸಲಹೆ ನೀಡಲಾಗುತ್ತದೆ. ಕಡಿಮೆ ಗ್ಲೈಸೆಮಿಕ್ ಲೋಡ್ ಮತ್ತು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುವ ಶತಾವರಿ, ಪಲ್ಲೆಹೂವು, ಆವಕಾಡೊ, ಕೋಸುಗಡ್ಡೆ, ಎಲೆಕೋಸು ಮತ್ತು ಹೂಕೋಸುಗಳಂತಹ ಆಹಾರಗಳ ಸೇವನೆಯನ್ನು ಹೆಚ್ಚಿಸುವುದು ದೇಹಕ್ಕೆ ಪ್ರಯೋಜನಕಾರಿಯಾಗಿದೆ.

ಒಳ್ಳೆಯ ಊಟ ಮತ್ತು ನಿದ್ದೆ ಮಾಡಿ :
ಆರೋಗ್ಯಕ ಜೀವನಶೈಲಿ ಅತ್ಯಂತ ಮುಖ್ಯವಾದದ್ದು. ಆಹಾರ–ವಿಹಾರಗಳು ಹೃದಯದ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಪ್ರತಿ ಊಟದ ನಡುವೆ ಸಾಕಷ್ಟು ಇದ್ದರೆ ಒಳ್ಳೆಯದು. ಪ್ರತಿ ಊಟದ ನಡುವೆ ಕನಿಷ್ಟ ಮೂರು ಗಂಟೆಗಳ ಅಂತರವಿರಬೇಕೆಂದು ಸೂಚಿಸಲಾಗುತ್ತದೆ. ಮತ್ತೊಂದು ಬಹಳ ಮುಖ್ಯವಾದ ಅಂಶವೆಂದರೆ ನಿದ್ದೆ. ಹೃದಯವನ್ನು ಆರೋಗ್ಯವಾಗಿಡಲು ಅತಿ ಮುಖ್ಯವಾದದ್ದು ನಿದ್ದೆ. ಪ್ರತಿದಿನ ಕನಿಷ್ಠ 7 ಗಂಟೆಗಳ ಗುಣಮಟ್ಟದ ನಿದ್ದೆ ಅವಶ್ಯಕ. ಇದು ದೀರ್ಘಕಾಲದ ಉರಿಯೂತವನ್ನು ಕಡಿಮೆ ಮಾಡುತ್ತದೆ. ದೈಹಿಕ ಮತ್ತು ಭಾವನಾತ್ಮಕ ಒತ್ತಡವನ್ನು ನಿಭಾಯಿಸುವ ಹಾರ್ಮೋನ್ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನಿದ್ದೆ ಅತ್ಯಗತ್ಯವಾಗಿದೆ.

ಇದನ್ನೂ ಓದಿ : Food For Heart: ಹೃದಯದ ಆರೋಗ್ಯಕ್ಕೆ ಈ ಆಹಾರಗಳನ್ನು ಸೇವಿಸಿ

(World Stroke Day Ayurveda tips for better heart health)

Comments are closed.