Cartoon Network : ನಾವು ಸತ್ತಿಲ್ಲ” : ನಾಸ್ಟಾಲ್ಜಿಕ್ ಮೀಮ್ಸ್ ವೈರಲ್, ಕಾರ್ಟೂನ್ ನೆಟ್‌ವರ್ಕ್ ಸ್ಪಷ್ಟನೆ

ಕಾರ್ಟೂನ್‌ ನೆಟ್‌ವರ್ಕ್‌ (Cartoon Network Explained )ಹಾಗೂ ವಾರ್ನರ್‌ ಬ್ರದರ್ಸ್‌ ವಿಲೀನದ ಸುದ್ದಿ ವಿಶ್ವದಾದ್ಯಂತ ಬಾರೀ ಸದ್ದು ಮಾಡಿತ್ತು. ಈ ಸುದ್ದಿಯ ಬೆನ್ನಲ್ಲೇ ವೀಕ್ಷಕರು ಬೇಸರವನ್ನು ವ್ಯಕ್ತಪಡಿಸಿದ್ದರು. ಕೊಟ್ಯಾಂತರ ಮಂದಿ ಸುದ್ದಿ ಖಚಿತವೋ, ಇಲ್ಲವೋ ಅನ್ನೋ ಕುರಿತು ಹುಡುಕಾಟವನ್ನೂ ನಡೆಸಿದ್ದರು. ಇದೆಲ್ಲದರ ನಡುವಲ್ಲೇ ಕಾರ್ಟೂನ್ ನೆಟ್ ವರ್ಕ್ ಸಂಸ್ಥೆ ಸ್ಪಷ್ಟನೆಯನ್ನು ಕೊಟ್ಟಿದೆ.

ಟಾಮ್‌ ಅಂಡ್‌ ಜೆರಿ ಕಾರ್ಯಕ್ರಮವನ್ನು ನೋಡದವರು ವಿರಳಾತಿವಿರಳ. 1990 ದಶಕದಲ್ಲಿ ಆರಂಭಗೊಂಡ ಈ ಕಾರ್ಯಕ್ರಮ ಇಂದು ವಿಶ್ವದಾದ್ಯಂತ ಕೋಟ್ಯಾಂತರ ಜನರ ಮನ ಗೆದ್ದಿದೆ. ಪುಟಾಣಿ ಮಕ್ಕಳಂತೂ ಟಾಮ್ ಆಂಡ್ ಜೆರಿಯ ತುಂಟಾಟವನ್ನು ಮಿಸ್ ಮಾಡಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲಾ. ಆದೆ ಕಾರ್ಟೂನ್ ನೆಟ್ ವರ್ಕ್ ಸಂಸ್ಥೆ ವಾರ್ನರ್ ಬ್ರೋ ಸಂಸ್ಥೆಯ ಜೊತೆಗೆ ವಿಲೀನವಾದ ನಂತರ ಜನಪ್ರಿಯ ಕಾರ್ಯಕ್ರಮಗಳು ಸ್ಥಗಿತವಾಗಲಿದೆ ಅನ್ನೋ ಸುದ್ದಿ ಎಲ್ಲೆಡೆ ಕಾಡ್ಗಿಚ್ಚಿನಂತೆ ಹರಡಿತ್ತು. ಸಾಕಷ್ಟು ಮಂದಿ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮಂದಿ ಟ್ವೀಟ್ ಮಾಡುತ್ತಿದ್ದಾರೆ. ಕೆಲವರು ಕಾರ್ಟೂನ್ ನೆಟ್ ವರ್ಕ್ ಸಂಸ್ಥೆಗೆ ಶುಭಾಶಯವನ್ನು ಕೋರಿದ್ರೆ, ಇನ್ನೂ ಕೆಲವರು ಶ್ರೇಷ್ಠವಾದ ಕಾರ್ಟೂನ್ ಚಾನೆಲ್ ಎಂದು ಗುಣಗಾನ ಮಾಡಿದ್ದಾರೆ. ಆದರೆ ಮೀಮ್ಸ್ ಗಳಿಗೆ ವಾಹಿನಿ ಸ್ಪಷ್ಟಿಕರಣವನ್ನು ಕೊಟ್ಟಿದೆ.”ನಾವು ಸತ್ತಿಲ್ಲ, ನಮಗೆ 30 ವರ್ಷ ತುಂಬುತ್ತಿದೆ. “ನಮ್ಮ ಅಭಿಮಾನಿಗಳಿಗೆ ನಾವು ಎಲ್ಲಿಯೂ ಹೋಗುತ್ತಿಲ್ಲ. ಪ್ರೀತಿಯ, ನವೀನ ಕಾರ್ಟೂನ್‌ಗಳಿಗಾಗಿ ನಾವು ಯಾವಾಗಲೂ ನಿಮ್ಮ ಮನೆಯಾಗಿದ್ದೇವೆ . ಇನ್ನಷ್ಟು ಶೀಘ್ರದಲ್ಲೇ ಬರಲಿವೆ ಎಂದು ಕಾರ್ಟೂನ್‌ ನೆಟ್‌ವರ್ಕ್‌ ತಮ್ಮ ಅಧಿಕೃತ ಟ್ವೀಟರ್ ಖಾತೆಯಲ್ಲಿ ಟ್ವೀಟ್ ಮಾಡಿದೆ.

ಇದನ್ನೂ ಓದಿ : Rohit Sharma t20 world Cup : ಆಸ್ಟ್ರೇಲಿಯಾದಲ್ಲಿ ರೋಹಿತ್‌ಗೆ 11 ವರ್ಷದ ಹುಡುಗನ ಬೌಲಿಂಗ್, ಯಾರು ಈ ಅದೃಷ್ಟವಂತ ಬಾಲಕ ?

ಇದನ್ನೂ ಓದಿ : Movie Poster:ರಾಣಾ ಹುಟ್ಟುಹಬ್ಬಕ್ಕೆ ರಿಲೀಸ್ ಆಯ್ತು ಹೊಸ ಸಿನಿಮಾ ಥೀಮ್ ಪೋಸ್ಟರ್ – ಹೆಚ್ಚಾಯ್ತು ಕುತೂಹಲ

ಇದನ್ನೂ ಓದಿ : World Food Day 2022 : ಇಂದು “ವಿಶ್ವ ಆಹಾರ ದಿನ” : ಏನಿದರ ಮಹತ್ವ

ಈ ಪೋಸ್ಟ್‌ನ್ನು 2.1 ಲಕ್ಷ ಲೈಕ್‌ ಮತ್ತು 29000ಕ್ಕೂ ಅಧಿಕ ಮಂದಿ ರೀ ಟ್ವೀಟ್ ಮಾಡಿದ್ದಾರೆ. 1992 ಅಕ್ಟೋಬರ್‌ 1ರಂದು ಕಾರ್ಟೂನ್‌ ನೆಟ್‌ವರ್ಕ್‌ ಕಾರ್ಯಾರಂಭ ಮಾಡಿತ್ತು. ಸುಮಾರು ಮೂರು ದಶಕಗಳ ಕಾಲ ಭರ್ಜರಿ ಮನೋರಂಜನೆಯನ್ನು ನೀಡುತ್ತಿದ್ದ ವಾಹಿನಿ ಇದೀಗ ವಾರ್ನರ್‌ ಬ್ರದರ್ಸ್‌ ಅನಿಮೇಷನ್‌ನೊಂದಿಗೆ ವಿಲೀನಗೊಳ್ಳುತ್ತಿದೆ. ಈ ಕುರಿತು ಕಂಪೆನಿಯ ಮುಖ್ಯಸ್ಥರಾದ ಚಾನ್ನಿಂಗ್ ಡುಂಗಿ ಸುದ್ದಿಗೋಷ್ಠಿಯ ಮೂಲಕ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

We’re Not Dead” : Nostalgic Memes Go Viral, Cartoon Network Explained

Comments are closed.