India vs Netherland: ಟಿ20 ವಿಶ್ವಕಪ್: ಭಾರತಕ್ಕೆ ನಾಳೆ ನೆದರ್ಲೆಂಡ್ಸ್ ಎದುರಾಳಿ, ಇಲ್ಲಿದೆ ಪಂದ್ಯದ ಪಿನ್ ಟು ಪಿನ್ ಡೀಟೇಲ್ಸ್

ಸಿಡ್ನಿ: ಟಿ20 ವಿಶ್ವಕಪ್ ಟೂರ್ನಿಯ (T20 World Cup 2022) ತನ್ನ 2ನೇ ಲೀಗ್ ಪಂದ್ಯದಲ್ಲಿ ಭಾರತ ತಂಡ ನಾಳೆ (ಗುರುವಾರ) ಸಿಡ್ನಿ ಕ್ರಿಕೆಟ್ ಗ್ರೌಂಡ್’ನಲ್ಲಿ (Sydney Cricket Ground) ಕ್ರಿಕೆಟ್ ಶಿಶು ನೆದರ್ಲೆಂಡ್ಸ್ ತಂಡವನ್ನು ( India vs Netherlands) ಎದುರಿಸಲಿದೆ. ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 4 ವಿಕೆಟ್’ಗಳಿಂದ ರೋಚಕವಾಗಿ ಮಣಿಸಿದ್ದ ಭಾರತ, ಸೂಪರ್-12 ಹಂತದಲ್ಲಿ ಸತತ 2ನೇ ಗೆಲುವಿನ ವಿಶ್ವಾಸದಲ್ಲಿದೆ.

ನೆದರ್ಲೆಂಡ್ಸ್ ವಿರುದ್ಧದ ಪಂದ್ಯ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Indian Cricket Team Captain Rohit Shama) ಮತ್ತು ಉಪನಾಯಕ ಕೆ.ಎಲ್ ರಾಹುಲ್ (KL Rahul) ಅವರಿಗೆ ಮಹತ್ವದ್ದು. ಯಾಕಂದ್ರೆ ಈ ಇಬ್ಬರೂ ಆಟಗಾರರು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕೇವಲ 4 ರನ್ ಗಳಿಸಿ ಔಟಾಗಿದ್ದು, ಲಯ ಕಂಡುಕೊಳ್ಳಲು ಇಬ್ಬರಿಗೂ ನೆದರ್ಲೆಂಡ್ಸ್ ವಿರುದ್ಧದ ಪಂದ್ಯ ಉತ್ತಮ ವೇದಿಕೆ. ನೆದರ್ಲೆಂಡ್ಸ್ ತಂಡ ಅರ್ಹತಾ ಸುತ್ತಿನಿಂದ ಪ್ರಧಾನ ಸುತ್ತಿಗೆ (ಸೂಪರ್-12) ಅರ್ಹತೆ ಪಡೆದಿರುವ ತಂಡವಾಗಿದ್ದು, ಸೂಪರ್-12ನಲ್ಲಿ ಕ್ರಿಕೆಟ್ ಶಿಶು ನೆದರ್ಲೆಂಡ್ಸ್’ಗೆ ಬಲಿಷ್ಠ ಭಾರತದ ಸವಾಲು ಎದುರಾಗಿದೆ.

ನೆದರ್ಲೆಂಡ್ಸ್ ವಿರುದ್ಧ ಪಂದ್ಯದಲ್ಲಿ ಭಾರತದ ಪ್ಲೇಯಿಂಗ್ XIನಲ್ಲಿ ಬದಲಾವಣೆಗಳಾಗುವ ಸಾಧ್ಯತೆಗಳಿಲ್ಲ. ಹೀಗಾಗಿ ಪಾಕಿಸ್ತಾನ ವಿರುದ್ಧ ಗೆದ್ದ ತಂಡವನ್ನೇ ನೆದರ್ಲೆಂಡ್ಸ್ ವಿರುದ್ಧವೂ ಕಣಕ್ಕಿಳಿಸುವುದು ಬಹುತೇಕ ಖಚಿತ. ಭಾರತ ಮತ್ತು ನೆದರ್ಲೆಂಡ್ಸ್ ತಂಡಗಳು ಟಿ20 ಕ್ರಿಕೆಟ್’ನಲ್ಲಿ ಇದೇ ಮೊದಲ ಬಾರಿ ಮುಖಾಮುಖಿಯಾಗುತ್ತಿವೆ.

ನೆದರ್ಲೆಂಡ್ಸ್ ವಿರುದ್ಧದ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ XI

1.ರೋಹಿತ್ ಶರ್ಮಾ (ನಾಯಕ), 2.ಕೆ.ಎಲ್ ರಾಹುಲ್ (ಉಪನಾಯಕ), 3.ವಿರಾಟ್ ಕೊಹ್ಲಿ, 4.ಸೂರ್ಯಕುಮಾರ್ ಯಾದವ್, 5.ಹಾರ್ದಿಕ್ ಪಾಂಡ್ಯ, 6.ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), 7.ರವಿಚಂದ್ರನ್ ಅಶ್ವಿನ್, 8.ಅಕ್ಷರ್ ಪಟೇಲ್, 9.ಭುವನೇಶ್ವರ್ ಕುಮಾರ್, 10.ಮೊಹಮ್ಮದ್ ಶಮಿ, 11.ಅರ್ಷದೀಪ್ ಸಿಂಗ್.

ಪಂದ್ಯ ಆರಂಭ: ಮಧ್ಯಾಹ್ನ 12.30ಕ್ಕೆ (ಭಾರತೀಯ ಕಾಲಮಾನ)
ಸ್ಥಳ: ಸಿಡ್ನಿ ಕ್ರಿಕೆಟ್ ಗ್ರೌಂಡ್, ಸಿಡ್ನಿ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

ಇದನ್ನೂ ಓದಿ : Alien in India Vs Pakistan match: ಭಾರತ Vs ಪಾಕಿಸ್ತಾನ ಪಂದ್ಯದಲ್ಲಿ ಮೈದಾನದಲ್ಲೇ ಕಾಣಿಸಿಕೊಂಡ ಏಲಿಯನ್

ಇದನ್ನೂ ಓದಿ : Ireland beat England : ಟಿ20 ವಿಶ್ವಕಪ್’ನಲ್ಲಿ ಮತ್ತೊಂದು ಅಚ್ಚರಿ. ಐರ್ಲೆಂಡ್ ವಿರುದ್ಧ ಆಘಾತಕಾರಿ ಸೋಲುಂಡ ಇಂಗ್ಲೆಂಡ್

T20 World Cup today: India vs Netherland match time, team, and weather report

Comments are closed.