Shubman Gill Next captain : ಜಿಂಬಾಬ್ವೆಯಲ್ಲಿ ಚೊಚ್ಚಲ ಶತಕ ಬಾರಿಸಿದವರು ಟೀಮ್ ಇಂಡಿಯಾ ಕ್ಯಾಪ್ಟನ್ ; ಶುಭಮನ್ ಗಿಲ್ ಮುಂದಿನ ನಾಯಕ ?

ಹರಾರೆ: (Shubman Gill Next captain) ಕಾಕತಾಳೀಯವೋ ಏನೋ ಗೊತ್ತಿಲ್ಲ. ಜಿಂಬಾಬ್ವೆಯಲ್ಲಿ ಚೊಚ್ಚಲ ಏಕದಿನ ಅಂತಾರಾಷ್ಟ್ರೀಯ ಶತಕ ಬಾರಿಸಿದ ಇಬ್ಬರು ಆಟಗಾರರು ಭಾರತ ತಂಡದ ನಾಯಕರಾಗಿದ್ದಾರೆ. ಈಗ ಅದೇ ಜಿಂಬಾಬ್ವೆ ನೆಲದಲ್ಲಿ ಭಾರತದ ಯುವ ಬ್ಯಾಟ್ಸ್’ಮನ್ ಶುಭಮನ್ ಗಿಲ್ ಕೂಡ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ತಮ್ಮ ಮೊದಲ ಶತಕ ಸಿಡಿಸಿದ್ದಾರೆ. ಹಾಗಾದ್ರೆ ಶುಭಮನ್ ಗಿಲ್ ಮುಂದಿನ ದಿನಗಳಲ್ಲಿ ಟೀಮ್ ಇಂಡಿಯಾ ನಾಯಕರಾಗ್ತಾರಾ?

ಟೀಮ್ ಇಂಡಿಯಾದ ಹಾಲಿ ನಾಯಕ ರೋಹಿತ್ ಶರ್ಮಾ (Indian Cricket Team Captain Rohit Sharma) ಮತ್ತು ಉಪನಾಯಕ ಕೆ.ಎಲ್ ರಾಹುಲ್ (KL Rahul) ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ತಮ್ಮ ಚೊಚ್ಚಲ ಶತಕ ಬಾರಿಸಿದ್ದು ಜಿಂಬಾಬ್ವೆ ನೆಲದಲ್ಲೇ. ರೋಹಿತ್ ಶರ್ಮಾ 2010ರ ಜಿಂಬಾಬ್ವೆ ಪ್ರವಾಸದಲ್ಲಿ ಬುಲವಾಯೋದಲ್ಲಿ ನಡೆದ ಪಂದ್ಯದಲ್ಲಿ ಮೊದಲ ಏಕದಿನ ಶತಕ ಬಾರಿಸಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಆಡಿದ 59ನೇ ಇನ್ನಿಂಗ್ಸ್’ನಲ್ಲಿ ರೋಹಿತ್ 114 ರನ್ ಗಳಿಸಿದ್ದರು. ಜಿಂಬಾಬ್ವೆ ನೆಲದಲ್ಲಿ ಜಿಂಬಾಬ್ವೆ ವಿರುದ್ಧ ಮೊದಲ ಏಕದಿನ ಶತಕ ಬಾರಿಸಿದ್ದ ರೋಹಿತ್ ಶರ್ಮಾ ಈಗ ಟೀಮ್ ಇಂಡಿಯಾ ನಾಯಕ.

ಇನ್ನು ಕೆ.ಎಲ್ ರಾಹುಲ್ ಕೂಡ ಏಕದಿನ ಕ್ರಿಕೆಟ್’ನಲ್ಲಿ ತಮ್ಮ ಮೊದಲ ಶತಕ ಬಾರಿಸಿದ್ದು ಜಿಂಬಾಬ್ವೆಯಲ್ಲೇ. 2016ರ ಜೂನ್ 11ರಂದು ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಆಡಿದ ತಮ್ಮ ಚೊಚ್ಚಲ ಏಕದಿನ ಪಂದ್ಯದಲ್ಲೇ ರಾಹುಲ್ ಅಜೇಯ 100 ರನ್ ಗಳಿಸಿ ದಾಖಲೆ ಬರೆದಿದ್ದರು. ವಿಶೇಷ ಏನಂದ್ರೆ ಜಿಂಬಾಬ್ವೆಯಲ್ಲಿ ಮೊದಲ ಏಕದಿನ ಶತಕ ಸಿಡಿಸಿದ ರಾಹುಲ್ ನಂತರದ ದಿನಗಳಲ್ಲಿ ಭಾರತ ತಂಡದ ನಾಯಕರಾಗಿದ್ದಾರೆ. ಸೋಮವಾರವಷ್ಟೇ ಮುಕ್ತಾಯಗೊಂಡ ಜಿಂಬಾಬ್ವೆ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯನ್ನು ರಾಹುಲ್ ನಾಯಕತ್ವದಲ್ಲೇ ಟೀಮ್ ಇಂಡಿಯಾ 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ.

ರೋಹಿತ್ ಶರ್ಮಾ ಮತ್ತು ಕೆ.ಎಲ್ ರಾಹುಲ್ ಬಳಿಕ ಶುಭಮನ್ ಗಿಲ್ ಕೂಡ ಜಿಂಬಾಬ್ವೆಯಲ್ಲೇ ತಮ್ಮ ಮೊದಲ ಏಕದಿನ ಶತಕ ಸಿಡಿಸಿದ್ದಾರೆ. ಜಿಂಬಾಬ್ವೆ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಅಬ್ಬರಿಸಿದ್ದ ಶುಭಮನ್ ಗಿಲ್ ಕೇವಲ 97 ಎಸೆತಗಳಲ್ಲಿ 15 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಸ್ಫೋಟಕ 130 ರನ್ ಸಿಡಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರೋಹಿತ್ ಹಾಗೂ ರಾಹುಲ್ ಅವರಂತೆ ಜಿಂಬಾಬ್ವೆಯಲ್ಲೇ ಶತಕ ಬಾರಿಸಿರುವ ಶುಭಮನ್ ಗಿಲ್ ಕೂಡ ಮುಂದಿನ ದಿನಗಳಲ್ಲಿ ಟೀಮ್ ಇಂಡಿಯಾ ನಾಯಕರಾಗ್ತಾರಾ? ಈ ಪ್ರಶ್ನೆಗೆ ಕಾಲವೇ ಉತ್ತರ ನೀಡಲಿದೆ.

ಇದನ್ನೂ ಓದಿ : Shubman Gill hits maiden hundred : ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ ಶುಭಮನ್ ಗಿಲ್

ಇದನ್ನೂ ಓದಿ : Sania Mirza pulls out of US Open : ಯುಎಸ್ ಓಪನ್ ಟೆನಿಸ್ ನಿಂದ ಹಿಂದೆ ಸರಿದ ಸಾನಿಯಾ ಮಿರ್ಜಾ

Team India captain scored first century in Zimbabwe Shubman Gill Next captain

Comments are closed.