Virak Kohli birthday : ಕಿಂಗ್ ಕೊಹ್ಲಿಗೆ 34ನೇ ಜನ್ಮದಿನ ಸಂಭ್ರಮ, ವಿರಾಟ ಹುಟ್ಟುಹಬ್ಬಕ್ಕೆ ಕ್ರಿಕೆಟ್ ಜಗತ್ತು ಪ್ರತಿಕ್ರಿಯಿಸಿದ್ದು ಹೀಗೆ..

ಬೆಂಗಳೂರು : (Virak Kohli birthday)ಇಂದು ಕ್ರಿಕೆಟ್ ಜಗತ್ತಿನ ರನ್ ಮಷಿನ್ ವಿರಾಟ್ ಕೊಹ್ಲಿಯವರ ಜನ್ಮದಿನ. ಕಿಂಗ್ ಕೊಹ್ಲಿ 34ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ವಿರಾಟ್ ಕೊಹ್ಲಿ(Virak Kohli birthday)ಯವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

477 ಅಂತಾರಾಷ್ಟ್ರೀಯ ಪಂದ್ಯಗಳು, 24,350 ರನ್, 2011ರ ವಿಶ್ವಕಪ್ ವಿಜೇತ, 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ವಿಜೇತ. ಭಾರತದ ಸಾರ್ವಕಾಲಿಕ ಶ್ರೇಷ್ಠ ಮ್ಯಾಚ್ ವಿನ್ನರ್’ಗಳಲ್ಲಿ ಒಬ್ಬ, ಭಾರತೀಯ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕ. ವಿರಾಟ್ ಕೊಹ್ಲಿಯವರಿಗೆ ಜನ್ಮದಿನದ ಶುಭಾಶಯಗಳು (Virak Kohli birthday)ಎಂದು ಬಿಸಿಸಿಐ ಟ್ವೀಟ್ ಮಾಡಿದೆ.

ವಿರಾಟ್ ಕೊಹ್ಲಿ ಅವರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೊತೆಗಾರ, ಕೊಹ್ಲಿ ಅವರ ಆಪ್ತಮಿತ್ರ ದಕ್ಷಿಣ ಆಫ್ರಿಕಾದ ಸೂಪರ್ ಮ್ಯಾನ್ ಕ್ರಿಕೆಟರ್ ಎಬಿ ಡಿವಿಲಿಯರ್ಸ್ ಸದ್ಯ ಬೆಂಗಳೂರಿನಲ್ಲಿದ್ದು, ವೀಡಿಯೊ ಸಂದೇಶ ಮೂಲಕ ತಮ್ಮ ಗೆಳೆಯನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಆ ವೀಡಿಯೊವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಪೋಸ್ಟ್ ಮಾಡಿದೆ.

2007 ಹಾಗೂ 2011ರ ವಿಶ್ವಕಪ್ ಗೆಲುವಿನ ಸೂತ್ರಧಾರಿ ಯುವರಾಜ್ ಸಿಂಗ್ ಕೂಡ ಕೊಹ್ಲಿಗೆ ಜನ್ಮದಿನ ಶುಭಾಶಯ ತಿಳಿಸಿದ್ದು, “ನೀನು ಇಂದು ಎಲ್ಲಿ ನಿಂತಿದ್ದೀಯೋ, ಅದಕ್ಕೆ ಕಾರಣ ನಿನ್ನ ಪರಿಶ್ರಮ, ಸಮರ್ಪಣಾ ಮನೋಭಾವ ಮತ್ತು ನಿನ್ನ ಮನೋಪ್ರವೃತ್ತಿಯೇ ಕಾರಣ. ಭಾರತಕ್ಕೆ ಟಿ20 ವಿಶ್ವಕಪ್ ಗೆದ್ದು ತಾ” ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : Pro Kabaddi League: ಬೆಂಗಳೂರು ಬುಲ್ಸ್‌ಗೆ ಟಕ್ಕರ್, ಕನ್ನಡಿಗನ ಸಾರಥ್ಯದ ಪುಣೇರಿ ಪಲ್ಟನ್ ಟೇಬಲ್ ಟಾಪರ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು’ಪ್ಲೆಸಿಸ್ ಕೂಡ ವೀಡಿಯೊ ಸಂದೇಶ ಮೂಲಕ ವಿರಾಟ್ ಕೊಹ್ಲಿಗೆ ಹ್ಯಾಪಿ ಬರ್ತ್ ಡೇ ಹೇಳಿದ್ದಾರೆ.

ವಿರಾಟ್ ಕೊಹ್ಲಿಯವರ ಟೀಮ್ ಇಂಡಿಯಾ ಜೊತೆಗಾರರೂ ಕಿಂಗ್ ಕೊಹ್ಲಿ ಜನ್ಮದಿನದ ಶುಭಾಶಯ ಕೋರಿದ್ದಾರೆ. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್, ಶಿಖರ್, ಮಯಾಂಕ್ ಅಗರ್ವಾಲ್ ಧವನ್ ಸೇರಿದಂತೆ ಹಲವರು ಕೊಹ್ಲಿಗೆ ಟ್ವೀಟ್ ಮೂಲಕ ಹ್ಯಾಪಿ ಬರ್ತ್’ಡೇ ಹೇಳಿದ್ದಾರೆ.



ಆಸ್ಟ್ರೇಲಿಯಾದ ಅಡಿಲೇಡ್ ಓವಲ್ ಕ್ರಿಕೆಟ್ ಮೈದಾನದ ವತಿಯಿಂತಲೂ ಕಿಂಗ್ ಕೊಹ್ಲಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಲಾಗಿದೆ. ಅಡಿಲೇಡ್ ಓವಲ್’ನಲ್ಲಿ ವಿರಾಟ್ ಕೊಹ್ಲಿ ಒಟ್ಟು 5 ಅಂತಾಷ್ಟ್ರೀಯ ಶತಕಗಳನ್ನು ಬಾರಿಸಿದ್ದಾರೆ.


ವಿರಾಟ್ ಕೊಹ್ಲಿಯವರ ಹುಟ್ಟುಹಬ್ಬದ ಪ್ರಯುಕ್ತ ಹೈದರಾಬಾದ್’ನಲ್ಲಿ ಕೊಹ್ಲಿ ಅವರ ಅಭಿಮಾನಿಗಳು ದೊಡ್ಡ ಕಟೌಟ್ ನಿಲ್ಲಿಸಿದ್ದಾರೆ.


(Virak Kohli birthday)Today is the birthday of Virat Kohli, the run machine of the cricket world. King Kohli has turned 34. A lot of wishes are pouring in for Virak Kohli who is celebrating his birthday.

Comments are closed.