Pro Kabaddi League: ಕೆಂಪುಗೂಳಿಗಳಿಗೆ ಇಂದು ಡೆಲ್ಲಿ ಚಾಲೆಂಜ್, ಪುಣೆಯಲ್ಲಿ ಹಾಲಿ Vs ಮಾಜಿ ಚಾಂಪಿಯನ್ಸ್ ಕಾಳಗ

ಪುಣೆ: Bengaluru Bulls vs Dabang Delhi : ಪ್ರೊ ಕಬಡ್ಡಿ ಲೀಗ್-9ನೇ ಆವೃತ್ತಿಯ ಲೀಗ್ (Pro Kabaddi League 9th season) ಪಂದ್ಯಗಳು ಬೆಂಗಳೂರಿನಿಂದ ಪುಣೆಗೆ ಕಾಲಿಟ್ಟಿದ್ದು, ಬಾಳೇವಾಡಿಯಲ್ಲಿರುವ ಶಿವಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್’ನಲ್ಲಿ ಶನಿವಾರ ನಡೆಯುವ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ (Bengaluru Bulls) ಹಾಗೂ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ಕೆ.ಸಿ (Dabang Delhi K.C) ತಂಡಗಳು ಮುಖಾಮುಖಿಯಾಗಲಿವೆ.

6ನೇ ಆವೃತ್ತಿಯ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡ ತವರು ನೆಲ ಬೆಂಗಳೂರಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಆಡಿದ 7 ಪಂದ್ಯಗಳಲ್ಲಿ 4ನ್ನು ಗೆದ್ದು, 2ರಲ್ಲಿ ಸೋತು ಒಂದು ಪಂದ್ಯವನ್ನು ಟೈ ಮಾಡಿಕೊಂಡು ಒಟ್ಟು 24 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಆಡರುವ 7 ಪಂದ್ಯಗಳಲ್ಲಿ 5ನ್ನು ಗೆದ್ದು 2ರಲ್ಲಿ ಸೋತಿರುವ ದಬಾಂಗ್ ಡೆಲ್ಲಿ 27 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.

ಪ್ರೊ ಕಬಡ್ಡಿ ಲೀಗ್ ಪಂದ್ಯಗಳು ಬೆಂಗಳೂರಿನ ನಂತರ ಇದೀಗ ಪುಣೆಯಲ್ಲಿ ಆರಂಭಗೊಂಡಿದ್ದು, ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ತಮಿಳ್ ತಲೈವಾಸ್ ತಂಡ ಮೊದಲ ಆವೃತ್ತಿಯ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ 38-27ರ ಅಂತರದಲ್ಲಿ ಜಯಭೇರಿ ಬಾರಿಸಿತು. ಆತಿಥೇಯ ಪುಣೇರಿ ಪಲ್ಟನ್ ಹಾಗೂ ಹರ್ಯಾಣ ಸ್ಟೀಲರ್ಸ್ ನಡುವಿನ ದಿನದ 2ನೇ ಪಂದ್ಯ 27-27ರಲ್ಲಿ ಟೈ ಆದ್ರೆ, 3ನೇ ಪಂದ್ಯದಲ್ಲಿ 3 ಬಾರಿಯ ಚಾಂಪಿಯನ್ಸ್ ಪಾಟ್ನಾ ಪೈರೇಟ್ಸ್ ತಂಡ ಯು.ಪಿ ಯೋಧಾ ತಂಡವನ್ನು 34-29ರ ಅಂತರದಲ್ಲಿ ಸೋಲಿಸಿ ಲೀಗ್’ನಲ್ಲಿ 2ನೇ ಗೆಲುವು ದಾಖಲಿಸಿತು.

ಪ್ರೊ ಕಬಡ್ಡಿ ಲೀಗ್-9: ಶನಿವಾರದ ಪಂದ್ಯಗಳು

  1. ಬೆಂಗಳೂರು ಬುಲ್ಸ್ Vs ದಬಾಂಗ್ ಡೆಲ್ಲಿ
  2. ತೆಲುಗು ಟೈಟನ್ಸ್ Vs ಗುಜರಾತ್ ಜೈಂಟ್ಸ್
  3. ಬೆಂಗಾಲ್ ವಾರಿಯರ್ಸ್ Vs ಯು ಮುಂಬಾ

ಸ್ಥಳ: ಛತ್ರಪತಿ ಶಿವಾಜಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಬಾಳೇವಾಡಿ; ಪುಣೆ (ಮಹಾರಾಷ್ಟ್ರ)
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

ಇದನ್ನೂ ಓದಿ : IPL 2023 RCB TEAM : ಟೀಂ ಇಂಡಿಯಾದ 3 ಆಟಗಾರರಿಗೆ ಕೋಕ್ ಕೊಡಲಿದೆ ಆರ್ ಸಿಬಿ

ಇದನ್ನೂ ಓದಿ : Virat Kohli : ಆಗಸ್ಟ್ 27ಕ್ಕೆ 81 ರನ್, ಅಕ್ಟೋಬರ್ 28ಕ್ಕೆ 629 ರನ್; ಹೇಗಿದೆ ನೋಡಿ ಕಿಂಗ್ ಕೊಹ್ಲಿ ಹವಾ!

Pro Kabaddi League Bengaluru Bulls vs Dabang Delhi

Comments are closed.