Myositis: ಏನಿದು ಮಯೋಸಿಟಿಸ್‌ ಕಾಯಿಲೆ; ಲಕ್ಷಣ ಮತ್ತು ಕಾರಣಗಳೇನು…

ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ನಟಿ ಸಮಂತಾ ರುತ್ ಪ್ರಭು(Samantha Ruth Prabhu). ಅವರು ಇತ್ತೀಚೆಗೆ ಮಯೋಸಿಟಿಸ್ (Myositis) ಎಂಬ ಅಪರೂಪದ ವೈದ್ಯಕೀಯ ಕಾಯಿಲೆಯಿಂದ ಬಳಲುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಅವರು ಸಂಪೂರ್ಣ ಗುಣಮುಖರಾಗುವ ವಿಶ್ವಾಸವನ್ನು ವೈದ್ಯರು ವ್ಯಕ್ತಪಡಿಸಿದ್ದಾರೆ. ಆದರೆ ಈ ಅಪರೂಪದ ಮಯೋಸಿಟಿಸ್‌ (Myositis) ಕಾಯಿಲೆ ಅಂದರೇನು? ರೋಗ ಲಕ್ಷಣಗಳೇನು ಎಂದು ತಿಳಿದುಕೊಳ್ಳುವ ಅಗತ್ಯವಿದೆ. ಮಯೋಸಿಟಿಸ್‌ ಎನ್ನುವುದು ರೋಗನಿರೋಧಕ ವ್ಯವಸ್ಥೆಯು ನಿಮ್ಮ ಸ್ನಾಯುಗಳ ಮೇಲೆ ಪರಿಣಾಮ ಬೀರುವ ಸ್ಥಿತಿಯಾಗಿದೆ. ಈ ಕಾಯಿಲೆಯಲ್ಲಿ ವಿಧಗಳು ಇವೆ.

ಮಯೋಸಿಟಿಸ್ ಕಾಯಿಲೆ ಎಂದರೇನು :
ಇದೊಂದು ಅಪರೂಪದ ಕಾಯಿಲೆಯಾಗಿದೆ. ಮಯೋಸಿಟಿಸ್ ಎನ್ನುವುದು ನಿಮ್ಮ ರೋಗನಿರೋಧಕ ವ್ಯವಸ್ಥೆಯು ನಿಮ್ಮ ಸ್ನಾಯುಗಳ ಮೇಲೆ ಪರಿಣಾಮ ಬೀರುವ ಸ್ಥಿತಿಯಾಗಿದೆ. ಇದು ದೀರ್ಘಕಾಲದ ಉರಿಯೂತವನ್ನು ಉಂಟುಮಾಡುತ್ತದೆ. ಕಾಲಕ್ರಮೇಣ ಊತವನ್ನು ಉಂಟುಮಾಡುತ್ತದೆ ಈ ಉರಿಯೂತವು ಅಂತಿಮವಾಗಿ ಸ್ನಾಯುಗಳನ್ನು ಹೆಚ್ಚು ದುರ್ಬಲಗೊಳಿಸುತ್ತದೆ. ಮೈಯೋಸಿಟಿಸ್ ಒಂದು ರೀತಿಯ ಮಯೋಪತಿ. ಮಯೋಪತಿ ಎಂದರೆ ಮೂಳೆಗಳನ್ನು ಸಂಪರ್ಕಿಸುವ ಸ್ನಾಯುಗಳ ಮೇಲೆ ಪರಿಣಾಮ ಬೀರುವ ರೋಗಗಳನ್ನು ಸೂಚಿಸುವ ಸಾಮಾನ್ಯ ಪದವಾಗಿದೆ. ಈ ಕಾಯಿಲೆಯು ಸಾಮಾನ್ಯವಾಗಿ ತೋಳು ಮತ್ತು ಭುಜಗಳು, ಕಾಲುಗಳು, ಸೊಂಟ, ಹೊಟ್ಟೆ ಮತ್ತು ಬೆನ್ನುಮೂಳೆಯ ಸ್ನಾಯುಗಳ ಮೇಲೆ ಪರಿಣಾಮ ಬೀರುತ್ತದೆ.

ಕಾರಣಗಳು:
ಮಯೋಸಿಟಿಸ್‌ ಕಾಯಿಲೆಗೆ ನಿರ್ದಿಷ್ಟ ಕಾರಣವೇನು ಎಂದು ವಿಜ್ಞಾನಿಗಳು ಖಚಿತಪಡಿಸಿಲ್ಲ. ಆದರೆ ಇದು ಆನುವಂಶಿಕ ಮತ್ತು ಪರಿಸರ ಅಂಶಗಳು ಬರುತ್ತದೆ ಎಂದು ಹೇಳಲಾಗುತ್ತದೆ. ಅಂತಹ ಅಂಶಗಳ ಯಾವುದೆಂದರೆ: ವೈರಸ್‌, ಬ್ಯಾಕ್ಟೀರಿಯಾ, ನೇರಳಾತೀತ (UV) ವಿಕಿರಣ, ಧೂಮಪಾನ, ಮನರಂಜನೆಗಾಗಿ ಬಳಸುವ ಔಷಧಗಳು, ಪೌಷ್ಟಿಕಾಂಶದ ಪೂರಕಗಳು, ಧೂಳು, ಅನಿಲ, ಅಥವಾ ಹೊಗೆ ಮುಂತಾದವುಗಳು.

ಮಯೋಸಿಟಿಸ್‌ ಕಾಯಿಲೆಯ ವಿಧಗಳು :
ಮಯೋಸಿಟಿಸ್‌ ಕಾಯಿಲೆಯಲ್ಲಿ 5 ವಿಧಗಳಿವೆ.

  1. ಡರ್ಮಟೊಮಿಯೊಸಿಟಿಸ್ : ಮುಖ, ಎದೆ, ಕುತ್ತಿಗೆ ಮತ್ತು ಬೆನ್ನಿನ ಮೇಲೆ ನೇರಳೆ-ಕೆಂಪು ದದ್ದುಗಳನ್ನು ಉಂಟುಮಾಡುತ್ತದೆ.
  2. ಇನ್ಕ್ಲೂಷನ್-ಬಾಡಿ ಮಯೋಸಿಟಿಸ್ (IBM) : ಇದು ಮಹಿಳೆಯರಿಗಿಂತ ಹೆಚ್ಚು ಪುರುಷರ ಮೇಲೆ ಪರಿಣಾಮ ಬೀರುತ್ತದೆ. 50 ವರ್ಷಕ್ಕಿಂತ ಮೇಲ್ಪಟ್ಟ ಜನರ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತಿದೆ. ಮಸಲ್‌ ವೀಕ್‌ನೆಸ್‌, ಬಾಡಿ ಬ್ಯಾಲೆನ್ಸ್‌ ಪ್ರಾಬ್ಲಮ್‌, ಸ್ನಾಯು ಸೆಳೆತ ಇದರ ಲಕ್ಷಣವಾಗಿದೆ.
  3. ಜುವೆನೈಲ್ ಮಯೋಸಿಟಿಸ್ (ಜೆಎಂ) : ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎನ್ನುತ್ತಾರೆ. ಇದು ಹುಡುಗರಿಗಿಂತ ಹುಡುಗಿಯರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಕೆಂಪು–ನೇರಳೆ ಗುಳ್ಳೆಗಳು, ಆಯಾಸ, ಹೊಟ್ಟೆ ನೋವು, ಸ್ನಾಯು ದೌರ್ಬಲ್ಯ ಮುಂತಾದವುಗಳು ಇದರ ಲಕ್ಷಣ.
  4. ಪಾಲಿಮೋಸಿಟಿಸ್: ಇದರಲ್ಲಿ ಪ್ರಾರಂಭದಲ್ಲಿಯೇ ಸ್ನಾಯು ದೌರ್ಬಲ್ಯ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಈ ರೋಗವು ಮೊದಲು ಹೊಟ್ಟೆಗೆ ಹತ್ತಿರವಿರುವ ಸ್ನಾಯುಗಳ ಮೇಲೆ ದಾಳಿ ಮಾಡುತ್ತದೆ. ಸ್ನಾಯು ದೌರ್ಬಲ್ಯ ಮತ್ತು ನೋವು, ನುಂಗುವ ಸಮಸ್ಯೆಗಳು, ಬ್ಯಾಲೆನ್ಸ್‌ ನ ಸಮಸ್ಯೆಗಳು, ಒಣ ಕೆಮ್ಮು, ಕೈಗಳಲ್ಲಿ ದಪ್ಪನಾದ ಚರ್ಮ, ತೂಕ ಇಳಿಕೆ ಇದರ ಲಕ್ಷಣವಾಗಿದೆ.
  5. ಟಾಕ್ಸಿಕ್ ಮಯೋಪತಿ : ಇದನ್ನು ಟಾಕ್ಸಿಕ್ ಮಯೋಸಿಟಿಸ್ ಎಂದೂ ಕರೆಯುತ್ತಾರೆ. ಒಂದು ರೀತಿಯ ಮೈಯೋಸಿಟಿಸ್ ಕಾಯಿಲೆ ಆಗಿದೆ. ಇದು ಔಷಧಿಗಳು ಅಥವಾ ರಾಸಾಯನಿಕಗಳಿಂದ ಉಂಟಾಗುತ್ತದೆ ಎಂದು ಭಾವಿಸಲಾಗಿದೆ.

ಚಿಕಿತ್ಸೆ:
ಮಯೋಸಿಟಿಸ್‌ಗೆ ಯಾವುದೇ ಚಿಕಿತ್ಸೆ ಇಲ್ಲ. ದೈನಂದಿನ ಜೀವನದಲ್ಲಿ ರೋಗಲಕ್ಷಣಗಳಿಗನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ. ಈ ಕಾಯಿಲೆ ಗುಣವಾಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳುತ್ತಾರೆ. ನೋವು ಮತ್ತು ಬಿಗಿತವನ್ನು ಕಡಿಮೆ ಮಾಡಲು ವೈದ್ಯರು ಸ್ಟ್ರೆಚ್‌ಗಳು ಮತ್ತು ವ್ಯಾಯಾಮಗಳನ್ನು ಸೂಚಿಸುತ್ತಾರೆ.

ಇದನ್ನು ಓದಿ : Google Play Store: ಪ್ಲೇ ಸ್ಟೋರ್‌ನಿಂದ 13 ಡೇಂಜರಸ್‌ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿದ ಗೂಗಲ್‌

ಇದನ್ನು ಓದಿ : Gujarat Bridge Collapse: ಗುಜರಾತ್ ತೂಗು ಸೇತುವೆ ಕುಸಿತ ಪ್ರಕರಣ.. ಸಾವಿನ ಸಂಖ್ಯೆ 132ಕ್ಕೆ ಏರಿಕೆ

(Myositis what is the symptoms, causes and treatment of the disease)

Comments are closed.