Virat Kohli unfollows Sourav Ganguly : ತಾರಕಕ್ಕೇರಿದ ಕಿಂಗ್ Vs ದಾದಾ ಫೈಟ್, ಗಂಗೂಲಿಯನ್ನು ಇನ್‌ಸ್ಟಾಗ್ರಾಂನಲ್ಲಿ ಅನ್ ಫಾಲೋ ಮಾಡಿದ ಕೊಹ್ಲಿ

ಬೆಂಗಳೂರು : ಟೀಮ್ ಇಂಡಿಯಾ ಮಾಜಿ ನಾಯಕರಾದ ಸೌರವ್ ಗಂಗೂಲಿ ಮತ್ತು ವಿರಾಟ್ ಕೊಹ್ಲಿ (Virat Kohli unfollows Sourav Ganguly) ಮಧ್ಯೆ ಕಳೆದ ಕೆಲ ತಿಂಗಳುಗಳಿಂದ ಶೀತಲ ಸಮರ ನಡೆಯುತ್ತಲೇ ಇದೆ. ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿದ್ದಾಗ ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ನಾಯಕತ್ವವನ್ನು ಕಳೆದುಕೊಂಡಿದ್ದರು. ಭಾರತ ಏಕದಿನ ತಂಡದ ನಾಯಕತ್ವದಿಂದ ವಿರಾಟ್ ಕೊಹ್ಲಿ ಅವರನ್ನು ಕೆಳಗಿಳಿಸುವಲ್ಲಿ (Virat Kohli – Sourav Ganguly) ಸೌರವ್ ಗಂಗೂಲಿ ಅವರ ಪಾತ್ರ ಮಹತ್ವದ್ದಾಗಿತ್ತು. ಇದಾದ ನಂತರ ಮಾಜಿ ನಾಯಕರಿಬ್ಬರ ಸಂಬಂಧ ಹಳಸಿತ್ತು.

ಮೊನ್ನೆ ಶನಿವಾರ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಮತ್ತು ಸೌರವ್ ಗಂಗೂಲಿ ಮುಖಾಮುಖಿಯಾಗಿದ್ದರು. ಸೌರವ್ ಗಂಗೂಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾರ್ಗದರ್ಶಕರಾಗಿದ್ದಾರೆ. ರಾಯಲ್ ಚಾಲೆಂಜರ್ಸ್ ತಂಡ ಪಂದ್ಯ ಗೆದ್ದ ನಂತರ ಉಭಯ ತಂಡಗಳ ಆಟಗಾರರು, ಸಹಾಯಕ ಸಿಬ್ಬಂದಿ ಪರಸ್ಪರ ಕೈ ಕುಲುಕುವ ವೇಳೆ ಸೌರವ್ ಗಂಗೂಲಿ ಜೊತೆ ಹ್ಯಾಂಡ್ ಶೇಕ್ ಮಾಡಲು ನಿರಾಕರಿಸಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಇದರ ಜೊತೆ ಪಂದ್ಯದ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ಡಗೌಟ್‌ನಲ್ಲಿ ಕೂತಿದ್ದ ಸೌರವ್ ಗಂಗೂಲಿಯವರನ್ನು ವಿರಾಟ್ ಕೊಹ್ಲಿ ದುರುಗುಟ್ಟಿ ನೋಡಿದ ದೃಶ್ಯವೂ ವೈರಲ್ ಆಗಿತ್ತು.

ಇದನ್ನೂ ಓದಿ : Arjun Tendulkar IPL debut : ಅಪ್ಪ ವಿಶ್ವಕಪ್ ಎತ್ತಿ ಹಿಡಿದ ಮೈದಾನದಲ್ಲೇ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಅರ್ಜುನ್ ತೆಂಡೂಲ್ಕರ್

ಇದನ್ನೂ ಓದಿ : Vyshak Vijaykumar : ಡ್ರೀಮ್ ಡೆಬ್ಯೂ ಮಾಡಿದ RCB ಸ್ಟಾರ್ ವೈಶಾಖ್’ಗೆ ಸಿಕ್ತು ಅಮ್ಮನ ಸಿಹಿ ಮುತ್ತು

ಇದೀಗ ಸೌರವ್ ಗಂಗೂಲಿ ಮತ್ತು ವಿರಾಟ್ ಕೊಹ್ಲಿ ನಡುವಿನ ಶೀತಲ ಸಮರ ಮತ್ತೊಂದು ಹಂತ ತಲುಪಿದ್ದು, ಬಂಗಳಾದ ಹುಲಿ ಖ್ಯಾತಿಯ ಗಂಗೂಲಿಯನ್ನು ವಿರಾಟ್ ಕೊಹ್ಲಿ ಇನ್’ಸ್ಟಾಗ್ರಾಂನಲ್ಲಿ ಅನ್ ಫಾಲೋ ಮಾಡಿದ್ದಾರೆ (Virat Kohli unfollows Sourav Ganguly on Instagram).ಕಿಂಗ್ ಖ್ಯಾತಿಯ ವಿರಾಟ್ ಕೊಹ್ಲಿ ಇನ್’ಸ್ಟಾಗ್ರಾಂನಲ್ಲಿ ಒಟ್ಟು 276 ಮಂದಿಯನ್ನು ಫಾಲೋ ಮಾಡುತ್ತಾರೆ. ಅದರಲ್ಲಿ ಸೌರವ್ ಗಂಗೂಲಿ ಕೂಡ ಒಬ್ಬರು. ಆದರೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ನಂತರ ಗಂಗೂಲಿಯನ್ನು ತಮ್ಮ ಫಾಲೋ ಲಿಸ್ಟ್’ನಿಂದ ಕೊಹ್ಲಿ ತೆಗೆದು ಹಾಕಿದ್ದಾರೆ.

Virat Kohli unfollows Sourav Ganguly: After the star-studded King Vs Dada fight, Kohli unfollowed Ganguly on Instagram.

Comments are closed.