Couple cutoff their heads : ಅಪಾರ ದೈವ ಭಕ್ತಿ : ತಲೆಯನ್ನು ಕತ್ತರಿಸಿ ದೇವರಿಗೆ ಸಮರ್ಪಿಸಿದ ದಂಪತಿ

ಗುಜರಾತ್‌ : (Couple cutoff their heads) ನಮ್ಮ ದೇಶ ದೇವರ ಆರಾಧನೆಗೆ ಹೆಸರುವಾಸಿ. ಇಲ್ಲಿನ ಜನರು ದೇವರ ನಂಬಿಕೆಯ ಮೇಲೆ ವಾಸಿಸುವುದು ಹೆಚ್ಚು. ಆದರೆ ಇಲ್ಲೋರ್ವ ದಂಪತಿ ಅಪಾರ ದೈವ ಭಕ್ತಿಯನ್ನು ಹೊಂದಿದ್ದು, ತಮ್ಮ ಶಿರಚ್ಚೇದನ ಮಾಡಿ ದೇವರಿಗೆ ಅರ್ಪಿಸಿದ ಭಯಾನಕ ಘಟನೆ ನಡೆದಿದೆ.

ಗುಜರಾತ್‌ನ ರಾಜ್‌ಕೋಟ್ ಜಿಲ್ಲೆಯ ವಿಂಚಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ತಮ್ಮ ಜಮೀನಿನಲ್ಲಿ ವ್ಯಕ್ತಿ ಮತ್ತು ಆತನ ಪತ್ನಿ ಗಿಲ್ಲೊಟಿನ್ ಮಾದರಿಯ ಸಾಧನವನ್ನು ಬಳಸಿ ಶಿರಚ್ಛೇದನ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಹೇಮುಭಾಯ್ ಮಕ್ವಾನಾ (38 ವರ್ಷ) ಮತ್ತು ಅವರ ಪತ್ನಿ ಹಂಸಾಬೆನ್ (35 ವರ್ಷ) ಎಂದು ಗುರುತಿಸಲಾಗಿದೆ.

ಈ ದಂಪತಿ ದೇವರ ಮೇಲೆ ಅಪಾರವಾದ ಭಕ್ತಿಯನ್ನು ಹೊಂದಿದ್ದು, ತಮ್ಮ ತಲೆ ಕತ್ತರಿಸಿಕೊಳ್ಳುವ ಮೂಲಕ ದೇವರಿಗೆ ಅರ್ಪಿಸಿದ್ದಾರೆ. ಇದಕ್ಕಾಗಿ ದಂಪತಿಗಳು ಮನೆಯಲ್ಲಿಯೇ ತಲೆಯನ್ನು ಕತ್ತರಿಸುವ ಯಂತ್ರವನ್ನು ಸಿದ್ದಪಡಿಸಿದ್ದಾರೆ ಎಂದು ತಿಳಿದುಬಂದಿದೆ. ತಲೆಯನ್ನು ಕತ್ತರಿಸಿದ ಬಳಿಕ ಅದನ್ನು ಬೆಂಕಿಯ ಮೂಲಕ ದೇವರಿಗೆ ಅರ್ಪಿಸಲು ಪ್ಲಾನ್‌ ಮಾಡಿದ್ದರು. ಅದಕ್ಕೆಂದೇ ಮೊದಲಿಗೆ ಹೋಮ ಮಾಡಿ ಯಂತ್ರಕ್ಕೆ ಸಿಲುಕಿದ ತಲೆಯ ಬಾಗ ನೇರವಾಗಿ ಹೋಮಕ್ಕೆ ಬೀಳುವಂತೆ ಆಯೋಜಿಸಿದ್ದರು.

ದಂಪತಿಗಳು ಇಬ್ಬರು ಒಟ್ಟಿಗೆ ಸೇರಿ ತಲೆಯನ್ನು ಕತ್ತರಿಸಿಕೊಂಡಿದ್ದು, ಯಂತ್ರದ ಹಗ್ಗವನ್ನು ಎಳೆದಾಗ ಹರಿತವಾದ ಬ್ಲೇಡ್‌ ಅವರ ತಲೆಯನ್ನು ಕತ್ತರಿಸುತ್ತದೆ. ತಲೆ ಕತ್ತರಿಸಿದ ಬಳಿಕ ನೇರವಾಗಿ ಅಲ್ಲಿದ್ದ ಹೋಮ ಕುಂಡಕ್ಕೆ ಬೀಳುತ್ತದೆ. ಈ ರೀತಿಯಾಗಿ ದಂಪತಿ ತಮ್ಮ ಜೀವವನ್ನು ದೇವರಿಗೆ ಅರ್ಪಿಸಿದ್ದು, ಸಾಯುವ ಮೊದಲು ಪತ್ರವೊಂದನ್ನು ಬರೆದಿಟ್ಟಿದ್ದಾರೆ. ಶನಿವಾರ ದಂಪತಿಗಳು ಈ ಕೃತ್ಯ ನಡೆಸಿದ್ದು, ಭಾನುವಾರ ಕುಟುಂಬದವರಿಗೆ ಈ ವಿಚಾರ ತಿಳಿದುಬಂದಿದೆ.

ಇದನ್ನೂ ಓದಿ : ಮಹಾರಾಷ್ಟ್ರ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭ: ಬಿಸಿಲಿನ ತಾಪಮಾನಕ್ಕೆ 11 ಮಂದಿ ಬಲಿ

ಕುಟುಂಬದವರು ಕೂಡಲೇ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹಗಳನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಈ ಬಗ್ಗೆ ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Couple cutoff their heads: Great devotion to God: Couple who cut off their heads and dedicated them to God

Comments are closed.