Virat Kohli Vs Gautam Gambhir : ಹೊಟ್ಟೆಕಿಚ್ಚಿಗೆ ಮದ್ದೇ ಇಲ್ಲ; ವಿರಾಟ್ ಕೊಹ್ಲಿ ಶತಕ ಬಾರಿಸಿದ ಬೆನ್ನಲ್ಲೇ ಹೊಟ್ಟೆಕಿಚ್ಚಿನ ಮೊಟ್ಟೆಕೋಳಿ ಗಂಭೀರ್ ಹೇಳಿದ್ದೇನು ಗೊತ್ತಾ?

ಗುವಾಹಟಿ: Virat Kohli Vs Gautam Gambhir : ಭಾರತೀಯ ಕ್ರಿಕೆಟ್’ನಲ್ಲಿ ಅತ್ಯಂತ ಹೊಟ್ಟೆಕಿಚ್ಚಿನ ವ್ಯಕ್ತಿನ ಅಂತ ಯಾರಾದ್ರೂ ಇದ್ರೆ ಅದು ಗೌತಮ್ ಗಂಭೀರ್. ಬಿಜೆಪಿ ಸಂಸದನೂ ಆಗಿರುವ ಗಂಭೀರ್’ಗೆ ಟೀಮ್ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ (Virat Kohli) ಅವರನ್ನು ಕಂಡ್ರೆ ಆಗಲ್ಲ. ಸದಾ ಕೊಹ್ಲಿ ವಿರುದ್ಧ ಕಿಡಿ ಕಾರುತ್ತಲೇ ಇರುವ ಗೌತಮ್ ಗಂಭೀರ್ (Gautam Gambhir), ಇದೀಗ ಮತ್ತೊಂದು ಸಣ್ಣತನದ ಹೇಳಿಕೆ ಕೊಟ್ಟು ತಮ್ಮ ಅಸಲಿ ವ್ಯಕ್ತಿತ್ವವನ್ನು ತೋರಿಸಿದ್ದಾರೆ.

ಅಸ್ಸಾಂನ ಗುವಾಹಟಿಯ ಬರ್ಸಪರದಲ್ಲಿರುವ ಅಸ್ಸಾಂ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಮಂಗಳವಾರ ನಡೆದ ಶ್ರೀಲಂಕಾ ವಿರುದ್ಧದ ಪ್ರಥಮ ಏಕದಿನ ಪಂದ್ಯದಲ್ಲಿ (India Vs Sri Lanka ODI) ವಿರಾಟ್ ಕೊಹ್ಲಿ ಭರ್ಜರಿ ಶತಕದೊಂದಿಗೆ ಅಬ್ಬರಿಸಿದ್ದರು. 87 ಎಸೆತಗಳಲ್ಲಿ 113 ರನ್ ಸಿಡಿಸಿದ್ದ ವಿರಾಟ್ ಕೊಹ್ಲಿ, 2023ನೇ ವರ್ಷದ ಅಭಿಯಾನವನ್ನು ಶತಕದೊಂದಿಗೆ ಆರಂಭಿಸಿದ್ದರು. ಇದು ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಕಿಂಗ್ ಕೊಹ್ಲಿ ಸಿಡಿಸಿದ 45ನೇ ಶತಕ. ವಿರಾಟ್ ಕೊಹ್ಲಿ ಇನ್ನು ಐದು ಶತಕಗಳನ್ನು ಬಾರಿಸಿದರೆ ಏಕದಿನ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ಶತಕ (Most centuries in ODI cricket) ದಾಖಲಿಸಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ವಿಶ್ವದಾಖಲೆಯನ್ನು ಪುಡಿಗಟ್ಟಲಿದ್ದಾರೆ. ಸಚಿನ್ ತೆಂಡೂಲ್ಕರ್ 463 ಏಕದಿನ ಪಂದ್ಯಗಳಿಂದ 49 ಶತಕಗಳನ್ನು ಬಾರಿಸಿದ್ರೆ, ವಿರಾಟ್ ಕೊಹ್ಲಿ 266 ಏಕದಿನ ಪಂದ್ಯಗಳಿಂದ 45 ಶತಕಗಳನ್ನು ಸಿಡಿಸಿದ್ದಾರೆ.

ವಿರಾಟ್ ಕೊಹ್ಲಿ ಇನ್ನೇನು ಕೆಲವೇ ತಿಂಗಳುಗಳಲ್ಲಿ ಸಚಿನ್ ತೆಂಡೂಲ್ಕರ್ ಅವರ ಅತೀ ಹೆಚ್ಚು ಏಕದಿನ ಶತಕಗಳ ವಿಶ್ವದಾಖಲೆಯನ್ನು ಪುಟಿಗಟ್ಟುವ ಸಾಧ್ಯತೆಯಿದೆ. ಆದರೆ ಇದನ್ನು ತೆಂಡೂಲ್ಕರ್ ಸಹಿಸುತ್ತಾರೋ ಇಲ್ವೋ ಗೊತ್ತಿಲ್ಲ, ಆದ್ರೆ ಗಂಭೀರ್’ಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ವಿರಾಟ್ ಕೊಹ್ಲಿ 45ನೇ ಏಕದಿನ ಶತಕ ಬಾರಿಸಿದ ಬೆನ್ನಲ್ಲೇ ಮಾತನಾಡಿರುವ ಗೌತಮ್ ಗಂಭೀರ್, ವಿರಾಟ್ ಕೊಹ್ಲಿ ಮತ್ತು ಸಚಿನ್ ತೆಂಡೂಲ್ಕರ್ ಮಧ್ಯೆ ಹೋಲಿಕೆ ಸಲ್ಲದು ಎಂದಿದ್ದಾರೆ. “ಸಚಿನ್ ಜೊತೆ ವಿರಾಟ್ ಕೊಹ್ಲಿ ಅವರನ್ನು ಹೋಲಿಸಲು ಸಾಧ್ಯವೇ ಇಲ್ಲ. ಸಚಿನ್ ಆಡುತ್ತಿದ್ದಾಗ 30 ಯಾರ್ಡ್ ಒಳಗೆ 5 ಫೀಲ್ಡರ್’ಗಳನ್ನು ನಿಲ್ಲಿಸುವ ನಿಯಮವಿರಲಿಲ್ಲ” ಎಂದಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ 45 ಶತಕಗಳನ್ನು ಬಾರಿಸಿರುವುದು ದೊಡ್ಡ ವಿಚಾರವಲ್ಲ ಎಂಬರ್ಥದಲ್ಲಿ ಮಾತನಾಡಿದ್ದಾರೆ.

ವಿರಾಟ್ ಕೊಹ್ಲಿ ಅಂದ್ರೆ ಗಂಭೀರ್ ಯಾವಾಗಲೂ ಹೊಟ್ಟೆ ಕಿಚ್ಚಿನಿಂದಲೇ ಮಾತನಾಡುವುದು ಸಾಮಾನ್ಯ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯವೊಂದರಲ್ಲಿ ನಡೆದ ಗಲಾಟೆಯ ನಂತರ ವಿರಾಟ್ ಕೊಹ್ಲಿ ವಿರುದ್ಧ ಗಂಭೀರ್ ಕತ್ತಿ ಮಸೆಯುತ್ತಲೇ ಇದ್ದಾರೆ. ಇಡೀ ಕ್ರಿಕೆಟ್ ಜಗತ್ತೇ ಕಿಂಗ್ ಕೊಹ್ಲಿ ಅವರನ್ನು ಲೆಜೆಂಡ್ ಅಂತ ಒಪ್ಪಿಕೊಂಡ್ರೂ ಸಣ್ಣತನದ ಗಂಭೀರ್’ಗೆ ಅದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ.

ಏಕದಿನ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ಶತಕ (Most centuries in ODI cricket)(ಟಾಪ್-5) ಆಟಗಾರ ಇನ್ನಿಂಗ್ಸ್ ಶತಕ

  1. ಸಚಿನ್ ತೆಂಡೂಲ್ಕರ್ (ಭಾರತ) 452 49
  2. ವಿರಾಟ್ ಕೊಹ್ಲಿ (ಭಾರತ) 257 45
  3. ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) 365 30
  4. ರೋಹಿತ್ ಶರ್ಮಾ (ಭಾರತ) 229 29
  5. ಸನತ್ ಜಯಸೂರ್ಯ (ಶ್ರೀಲಂಕಾ) 433 28

ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ಶತಕ (Most centuries in international cricket) (ಟಾಪ್-5) ಆಟಗಾರ ಇನ್ನಿಂಗ್ಸ್ ಶತಕ

  1. ಸಚಿನ್ ತೆಂಡೂಲ್ಕರ್ (ಭಾರತ) 782 100
  2. ವಿರಾಟ್ ಕೊಹ್ಲಿ (ಭಾರತ) 541 73
  3. ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) 668 71
  4. ಕುಮಾರ ಸಂಗಕ್ಕಾರ (ಶ್ರೀಲಂಕಾ) 666 63
  5. ಜಾಕ್ ಕಾಲೀಸ್ (ದಕ್ಷಿಣ ಆಫ್ರಿಕಾ) 617 62

ಶ್ರೀಲಂಕಾ ವಿರುದ್ಧದ ಪ್ರಥಮ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಭಾರತ ವಿರಾಟ್ ಕೊಹ್ಲಿ ಅವರ ಶತಕ (87 ಎಸೆತಗಳಲ್ಲಿ 113 ರನ್), ನಾಯಕ ರೋಹಿತ್ ಶರ್ಮಾ (67 ಎಸೆತಗಳಲ್ಲಿ 83 ರನ್) ಮತ್ತು ಓಪನರ್ ಶುಭಮನ್ ಗಿಲ್ (60 ಎಸೆತಗಳಲ್ಲಿ 70 ರನ್) ಅವರ ಅರ್ಧಶತಕಗಳ ನೆರವಿನಿಂದ ಭಾರತ ತಂಡ ನಿಗದಿತ 50 ಓವರ್’ಗಳಲ್ಲಿ 7 ವಿಕೆಟ್ ನಷ್ಟಕ್ಕೆ 373 ರನ್ ಕಲೆ ಹಾಕಿತು. 5ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದ ಕನ್ನಡಿಗ ಕೆ.ಎಲ್ ರಾಹುಲ್ 29 ಎಸೆತಗಳಲ್ಲಿ 39 ರನ್ ಗಳಿಸಿದರು.
ಕಠಿಣ ಗುರಿ ಬೆನ್ನಟ್ಟಿದ ಶ್ರೀಲಂಕಾ 50 ಓವರ್’ಗಳಲ್ಲಿ 8 ವಿಕೆಟ್ ನಷ್ಟಕ್ಕೆ 306 ರನ್ ಗಳಿಸಲಷ್ಟೇ ಶಕ್ತವಾಗಿ 67 ರನ್’ಗಳಿಂದ ಭಾರತಕ್ಕೆ ಶರಣಾಗಿತ್ತು. ಈ ಗೆಲುವಿನೊಂದಿಗೆ ರೋಹಿತ್ ಶರ್ಮಾ ಬಳಗ 3 ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ್ದು, ಸರಣಿಯ 2ನೇ ಪಂದ್ಯ ನಾಳೆ (ಗುರುವಾರ) ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡಯಲಿದೆ.

ಇದನ್ನೂ ಓದಿ : Cricketer KL Rahul: ರಾಹುಲ್‌ಗೆ ಚಾನ್ಸ್ ಕೊಟ್ಟದ್ದೇಕೆ ಎಂದು ಪ್ರಶ್ನಿಸುವ “ಮೈಂಡ್‌ಲೆಸ್” ಜನರಿಗೆ ಇಲ್ಲಿದೆ ಉತ್ತರ!

ಇದನ್ನೂ ಓದಿ : Virat Kohli century: 2023ರಲ್ಲಿ ಶುರು ಕಿಂಗ್ ಕೊಹ್ಲಿಯ ಶತಕ ಬೇಟೆ, ಸಚಿನ್ ದಾಖಲೆ ಮುರಿಯಲು ಇನ್ನು ಐದೇ ಹೆಜ್ಜೆ..!

Virat Kohli Vs Gautam Gambhir Do you know what Gambhir said after Virat Kohli scored a century

Comments are closed.