Anushka Sharma Virat Kohli : ಪಾಕ್ ವಿರುದ್ದ ಗೆಲುವು ತಂದುಕೊಟ್ಟ ವಿರಾಟ್ ಕೊಹ್ಲಿಗೆ ಪತ್ನಿ ಅನುಷ್ಕಾ ಶರ್ಮಾ ಭಾವುಕ ಮೆಸೇಜ್

Anushka Sharma Virat Kohli : ಕಳಪೆ ಫಾರ್ಮ್ ವಿಚಾರಕ್ಕೆ ತೀವ್ರ ಟೀಕೆಗೆ ಗುರಿಯಾಗಿದ್ದ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಭಾರತದ ಸಾಂಪ್ರದಾಯಿಕ ಎದುರಾಳಿ ಎಂದೇ ಕರೆಯಿಸಿಕೊಳ್ಳುವ ಪಾಕಿಸ್ತಾನ್ ದ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿ ದೇಶದ ಕ್ರೀಡಾಭಿಮಾನಿಗಳ ಮನ ಗೆದ್ದಿದ್ದಾರೆ. ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸೂಪರ್ 12 ರ ಮೊದಲ ಹಂತದ ಪಂದ್ಯದಲ್ಲಿ ಪಾಕ್ ವಿರುದ್ಧ 4 ವಿಕೆಟ್ ಅಂತರದ ರೋಚಕ ಗೆಲುವು ತಂದುಕೊಟ್ಟಿದ್ದಾರೆ. ಪತಿಯ ಈ ಸಾಧನೆಯನ್ನು ನಟಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಶ್ಲಾಘಿಸಿದ್ದಾರೆ.

ಮೆಲ್ಬರ್ನ್ ನಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಕ್ ನ 159 ರನ್ ಗಳ ಸವಾಲನ್ನು ಚೇಸ್ ಮಾಡಲು ಹೊರಟ ಭಾರತಕ್ಕೆ ಸ್ಫೋಟಕ ಬ್ಯಾಟ್ಸಮನ್ ವಿರಾಟ್ ಕೊಹ್ಲಿ ಗುರಿ ಸಾಧಿಸಲು ನೆರವಾದರು. ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಉಪ ನಾಯಕ ಕೆ.ಎಲ್.ರಾಹುಲ್ ಆಟವಾಡಿ ಮಿಂಚುವ ಮೊದಲೇ ಪೆವಿಲಿಯನ್ ಸೇರಿದರು. ಇನ್ನು ಸೂರ್ಯ ಕುಮಾರ್ ಯಾದವ್, ಅಕ್ಷರ್ ಪಟೇಲ್ ಕೂಡ ಹೆಚ್ಚು ಹೊತ್ತು ನಿಂತು ರನ್ ಗಳಿಸುವಲ್ಲಿ ವಿಫಲರಾದರು.

ಈ ಹಂತದಲ್ಲಿ ತಂಡಕ್ಕೆ ಆಸರೆಯಾದ ವಿರಾಟ್ ಕೊಹ್ಲಿ, 53 ಬಾಲ್ ನಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್ ಜೊತೆ ಭರ್ಜರಿ 82 ರನ್ ಗಳಿಸಿ ತಂಡಕ್ಕೆ ವಿಜಯದ ಹಾದಿ ತೋರಿದರು. ಪತಿಯ ಈ ಗೆಲುವಿನ ಬ್ಯಾಟಿಂಗ್ ಬಗ್ಗೆ ಪತ್ನಿ ಅನುಷ್ಕಾ ಶರ್ಮಾ ಸೋಷಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್ ಹಾಕುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ನೀನು ಅದ್ಭುತವಾದ ವ್ಯಕ್ತಿ. ನಿನ್ನ ಸ್ಥೈರ್ಯ ತ್ಯಾಗ ಮತ್ತು ವಿಶ್ವಾಸವನ್ನು ಎಂಥಹವರನ್ನು ಚಕಿತಗೊಳಿಸುತ್ತದೆ. ನಾನು ನನ್ನ ಜೀವನದಲ್ಲೇ ಒಂದು ಅತ್ಯುತ್ತಮವಾದ ಪಂದ್ಯವನ್ನು ನೋಡಿದೆ ಎಂದು ಹೇಳಬಲ್ಲೇ. ತನ್ನ ತಾಯಿ ಏಕೆ ರೂಮಿನಲ್ಲಿ ಕುಣಿದಾಡುತ್ತಿದ್ದಾಳೆ, ಚೀರಾಡುತ್ತಿದ್ದಾಳೆ ಎಂದು ಅರ್ಥ ಮಾಡಿಕೊಳ್ಳಲುನಮ್ಮ ಮಗಳು ಇನ್ನೂ ಚಿಕ್ಕವಳು.

ಆದರೆ ಆ ರಾತ್ರಿ ಅವಳ ಅಪ್ಪ ಅತ್ಯಂತ ಕಠಿಣ ಸಂದರ್ಭದಲ್ಲಿ ತನ್ನ ಮೇಲೆ ಅಪಾರ ಹೊರೆ ಇದ್ದಾಗಲೂ ತಮ್ಮ ವೃತ್ತಿ ಬದುಕಿನ ಅತ್ಯುತ್ತಮ ಇನ್ನಿಂಗ್ಸ್ ಆಡಿದ್ದರು ಎಂಬುದನ್ನು ಮುಂದೊಂದು ದಿನ ಅರ್ಥ ಮಾಡಿಕೊಳ್ಳುತ್ತಾಳೆ ಎಂದು ನಾನು ತುಂಬ ಹೆಮ್ಮೆ ಪಡುತ್ತಿದ್ದೇನೆ ಎಂದಿದ್ದಾರೆ. ಕೇವಲ ಅನುಷ್ಕಾ ಶರ್ಮಾ ಮಾತ್ರವಲ್ಲ ಸ್ಯಾಂಡಲ್ ವುಡ್ ನ ಕ್ರಿಕೆಟ್ ಪ್ರಿಯ ಸುದೀಪ್ ಕೂಡ ಈ ಮ್ಯಾಚ್ ಅದ್ಭುತ ಎಂದು ಬಣ್ಣಿಸಿದ್ದಾರೆ.

ಇದನ್ನೂ ಓದಿ : Kantara America : ಅಮೇರಿಕಾದಲ್ಲೂ ದೈವಗಗ್ಗರದ ಅಬ್ಬರ : ಎಂಟೂವರೆ ಕೋಟಿ ಗಳಿಸಿದ ಕಾಂತಾರ

ಇದನ್ನೂ ಓದಿ : Rayan Raj Sarja : ಚಿರು ಸರ್ಜಾ – ಮೇಘನಾ ರಾಜ್ ಸರ್ಜಾ ಪುತ್ರ ರಾಯನ್ ರಾಜ್ ಸರ್ಜಾಗೆ ಬರ್ತಡೇ ಸಂಭ್ರಮ

Wife Anushka Sharma emotional message for Virat Kohli after winning against Pakistan ind vs pak

Comments are closed.