6ನೇ ಬಾರಿಗೆ ವಿಶ್ವಕಪ್‌ ಗೆದ್ದ ಆಸ್ಟ್ರೇಲಿಯಾ: ಟ್ರಾವೆಸ್‌ ಹೆಡ್‌ ಆರ್ಭಟ, ಎಲ್ಲಾ ಗೆದ್ದು ಫೈನಲ್‌ನಲ್ಲಿ ಸೋತ ಭಾರತ

World Cup 2023 Final Ind vs aus: Austraila Win 6th times WC  : ಅಜೇಯವಾಗಿ ವಿಶ್ವಕಪ್‌ ಫೈನಲ್‌ಗೆ ಎಂಟ್ರಿ ಕೊಟ್ಟಿದ್ದ ಭಾರತ ಫೈನಲ್‌ನಲ್ಲಿ ಮುಗ್ಗರಿಸಿದ್ದು, ಮೂರನೇ ಬಾರಿಗೆ ವಿಶ್ವಕಪ್‌ ಗೆಲ್ಲುವ ಕೋಟ್ಯಾಂತರ ಭಾರತೀಯರ ಕನಸು ನನಸಾಗಿಲ್ಲ

World Cup 2023 Final Ind vs aus: Austraila Win 6th times WC  : ಅಜೇಯವಾಗಿ ವಿಶ್ವಕಪ್‌ ಫೈನಲ್‌ಗೆ ಎಂಟ್ರಿ ಕೊಟ್ಟಿದ್ದ ಭಾರತ ಫೈನಲ್‌ನಲ್ಲಿ ಮುಗ್ಗರಿಸಿದ್ದು, ಮೂರನೇ ಬಾರಿಗೆ ವಿಶ್ವಕಪ್‌ ಗೆಲ್ಲುವ ಕೋಟ್ಯಾಂತರ ಭಾರತೀಯರ ಕನಸು ನನಸಾಗಿಲ್ಲ. ಟ್ರಾವೆಸ್‌ ಹೆಡ್‌ (Travis Head) ಆರ್ಭಟದ ಎದುರು ಭಾರತೀಯ ಬೌಲರ್‌ಗಳು ಮ್ಯಾಜಿಕ್‌ ಮಾಡಲು ಸಾಧ್ಯವಾಗಲೇ ಇಲ್ಲ. ಈ ಮೂಲಕ ಆಸ್ಟ್ರೇಲಿಯಾ (Austraila)  6ನೇ ಬಾರಿ ವಿಶ್ವಕಪ್‌ ಜಯಿಸಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಟಾಸ್‌ ಸೋತ ಭಾರತ ಮೊದಲು ಬ್ಯಾಟಿಂಗ್‌ ಮಾಡಿತ್ತು. ಆದರೆ ಟೀಂ ಇಂಡಿಯಾಕ್ಕೆ ಆರಂಭದಲ್ಲೇ ಆಸ್ಟ್ರೇಲಿಯಾ ಆಘಾತವನ್ನು ನೀಡಿತ್ತು. 4 ರನ್‌ ಗಳಿಸಿ ಆಡುತ್ತಿದ್ದ ಶುಭಮನ್‌ ಗಿಲ್‌ ಅವರನ್ನು ಸ್ಟಾರ್ಕ್‌ ಬಲಿ ಪಡೆದ್ರು.

World Cup 2023 Final Australia wins World Cup for 6th time ind vs aus Traves Head centry India lost wc final in second time 2003 and 2023
Image Credit : BCCI

ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಉತ್ತಮ ಇನ್ನಿಂಗ್ಸ್‌ ಕಟ್ಟಲು ಮುಂದಾದ್ರೂ ಕೂಡ ರೋಹಿತ್‌ ಶರ್ಮಾ ಮ್ಯಾಕ್ಸ್‌ವೆಲ್‌ ಎಸೆತದಲ್ಲಿ ಕೆಟ್ಟ ಹೊಡೆತಕ್ಕೆ ಮನ ಮಾಡಿ ಔಟಾದ್ರು. 31  ಎಸೆತಗಳನ್ನು ಎದುರಿಸಿದ್ದ ರೋಹಿತ್‌ ಶರ್ಮಾ 47ರನ್‌ ಗಳಿಸಿ ಔಟಾದ್ರೆ, ನಂತರ ಬಂದ ಶ್ರೇಯಸ್‌ ಅಯ್ಯರ್‌ ಆಟ ಕೇವಲ 4 ರನ್‌ ಗಳಿಗೆ ಕೊನೆಯಾಯ್ತು.

ವಿರಾಟ್‌ ಕೊಹ್ಲಿಗೆ ಜೊತೆಯಾದ ಕನ್ನಡಿಗ ಕೆಎಲ್‌ ರಾಹುಲ್‌ ಸಂಕಷ್ಟಕ್ಕೆ ಸಿಲುಕಿದ್ದ ಭಾರತಕ್ಕೆ ನೆರವಾದ್ರು. ವಿರಾಟ್‌ ಕೊಹ್ಲಿ 63 ಎಸೆತಗಳಲ್ಲಿ 54  ರನ್‌ ಗಳಿಸಿದ್ರೆ, 107  ಎಸೆತ ಎದುರಿಸಿದ್ದ ಕೆಎಲ್‌ ರಾಹುಲ್‌ 66 ರನ್‌ ಬಾರಿಸಿದ್ದಾರೆ. ಆದರೆ ನಂತರ ಬಂದ ರವೀಂದ್ರ ಜಡೇಜಾ, ಸೂರ್ಯಕುಮಾರ್‌ ಯಾದವ್‌ ಸೇರಿ ಯಾರೊಬ್ಬರೂ ಭಾರತಕ್ಕೆ ನೆರವಾಗಲು ಸಾಧ್ಯವಾಗಿಲ್ಲ.

ಇದನ್ನೂ ಓದಿ : ಶ್ರೀಲಂಕಾ ಕ್ರಿಕೆಟ್ ಮಂಡಳಿಯನ್ನು ಅಮಾನತ್ತುಗೊಳಿಸಿದ ಐಸಿಸಿ : ಅನಿಶ್ಚಿತತೆಯಲ್ಲಿ T20 ವಿಶ್ವಕಪ್ ಭವಿಷ್ಯ

ಅಂತಿಮವಾಗಿ ಭಾರತ ತಂಡ 50 ಓವರ್‌ಗಳಲ್ಲಿ 240 ರನ್‌ ಗಳಿಗೆ ಆಲೌಟ್‌ ಆಗಿತ್ತು. ಆಸ್ಟ್ರೇಲಿಯಾ ತಂಡದ ಪರ ಸ್ಟಾರ್ಕ್‌ 3 ಹಜಲ್‌ವುಡ್‌ ಹಾಗೂ ಪಾಟ್‌ ಕುಮಿನ್ಸ್‌ ತಲಾ 2 ವಿಕೆಟ್‌ ಪಡೆದುಕೊಂಡಿದ್ದಾರೆ. ಅಲ್ಲದೇ ಮ್ಯಾಕ್ಸ್‌ವೆಲ್‌ ಹಾಗೂ ಆಡಂ ಜಂಪಾ ತಲಾ ಒಂದೊಂದು ವಿಕೆಟ್‌ ಗಳಿಸಿಕೊಂಡಿದ್ದಾರೆ.

World Cup 2023 Final Australia wins World Cup for 6th time ind vs aus Traves Head centry India lost wc final in second time 2003 and 2023
Image Credit : BCCI

ಭಾರತ ನೀಡಿದ 241 ರನ್‌ಗಳ ಗುರಿಯನ್ನು ಬೆನ್ನತ್ತಲು ಹೊರಟ ಆಸ್ಟ್ರೇಲಿಯಾ ತಂಡಕ್ಕೆ ಭಾರತೀಯ ಬೌಲರ್‌ ಜಸ್ಪ್ರಿತ್‌ ಬೂಮ್ರಾ ಆರಂಭಿಕ ಆಘಾತ ನೀಡಿದ್ರು. ಆರಂಭಿಕ ಆಟಗಾರ ಡೇವಿಡ್‌ ವಾರ್ನರ್‌ 7 ರನ್‌ಗಳಿಗೆ ವಿಕೆಟ್‌ ಒಪ್ಪಿಸಿದ್ದಾರೆ. ನಂತರ ಬಂದ ಮಿಚಲ್‌ ಮಾರ್ಷ 15 ರನ್‌ ಗಳಿಸಿದ್ದ ವೇಳೆಯಲ್ಲಿ ಬೂಮ್ರಾ ಬಲಿ ಪಡೆದಿದ್ದಾರೆ. ಅಲ್ಲದೇ ಸ್ಟೀವನ್‌ ಸ್ಮಿತ್‌ ಅವರನ್ನು ಕೇವಲ 4 ರನ್‌ ಗಳಿಗೆ ಕಟ್ಟಿ ಹಾಕಿದ್ದಾರೆ.

ಇದನ್ನೂ ಓದಿ : ವಿಶ್ವಕಪ್ 2023 ತಂಡ ಪ್ರಕಟ : ವಿರಾಟ್ ಕೊಹ್ಲಿ ನಾಯಕ, ರೋಹಿತ್‌ ಶರ್ಮಾಗಿಲ್ಲ ಸ್ಥಾನ

ಆದರೆ ಟ್ರಾವೆಸ್‌ ಹೆಡ್‌ ಜೊತೆಯಾದ ಲ್ಯಾಬುಶಂಗೆ ಮೂರನೇ ವಿಕೆಟ್‌ಗೆ ಭರ್ಜರಿ 192 ರನ್‌ಗಳ ಜೊತೆಯಾಟ ಆಡಿದ್ದಾರೆ. ಭಾರತೀಯ ಬೌಲರ್‌ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಟ್ರಾವೆಸ್‌ ಹೆಡ್‌ 120 ಎಸೆತಗಳಲ್ಲಿ4 ಭರ್ಜರಿ ಸಿಕ್ಸರ್‌ ಹಾಗೂ 15ಬೌಂಡರಿ ನೆರವಿನಿಂದ 137ರನ್‌ ಬಾರಿಸಿದ್ದಾರೆ. ಇನ್ನು ಲ್ಯಾಬುಶಂಗೆ 110ಎಸೆತಗಳನ್ನು ಎದುರಿಸಿ 58 ರನ್‌ ಬಾರಿಸುವ ಮೂಲಕ ಆಸ್ಟ್ರೇಲಿಯಾ ಗೆಲುವಿಗೆ ಭರ್ಜರಿ ಅಡಿಪಾಯ ಹಾಕಿದ್ದರು.

World Cup 2023 Final Australia wins World Cup for 6th time ind vs aus Traves Head centry India lost wc final in second time 2003 and 2023
Image Credit : ICC

ಸರಣಿಯುದ್ದಕ್ಕೂ ಉತ್ತಮ ಬೌಲಿಂಗ್‌ ದಾಳಿ ನಡೆಸಿದ್ದ ಭಾರತೀಯ ಬೌಲರ್‌ಗಳು ಫೈನಲ್‌ನಲ್ಲಿ ಎಡವಿದ್ದರು. ಅದ್ರಲ್ಲೂ ಮೊಹಮ್ಮದ್‌ ಶೆಮಿ, ಮೊಹಮ್ಮದ್‌ ಸಿರಾಜ್‌, ಕುಲದೀಪ್‌ ಯಾದವ್‌ ದುಬಾರಿಯಾಗಿ ಪರಿಣಮಿಸಿದ್ರು. ರವೀಂದ್ರ ಜಡೇಜಾ ಹಾಗೂ ಕುಲದೀಪ್‌ ಯಾದವ್‌ ಒಂದೇ ಒಂದು ವಿಕೆಟ್‌ ಕೀಳಲು ಕೂಡ ಸಾಧ್ಯವಾಗಿಲ್ಲ.

ಇದನ್ನೂ ಓದಿ : ರೋಹಿತ್‌ ಶರ್ಮಾಗೆ ಕೊನೆಯ ಐಸಿಸಿ ಸರಣಿ ಆಗುತ್ತಾ ವಿಶ್ವಕಪ್‌ ಫೈನಲ್‌ ? ನಿವೃತ್ತಿ ಪಡೆಯುತ್ತಾರಾ ರೋಹಿತ್‌ ಶರ್ಮಾ

ಅಂತಿಮವಾಗಿ ಆಸ್ಟ್ರೇಲಿಯಾ ತಂಡ 43 ಓವರ್‌ಗಳಲ್ಲಿ 4ವಿಕೆಟ್‌ ಕಳೆದುಕೊಂಡು 241 ರನ್‌ ಗಳಿಸುವ ಮೂಲಕ ಆಸ್ಟ್ರೇಲಿಯಾ ೬ನೇ ಬಾರಿಗೆ ವಿಶ್ವಕಪ್‌ ಗೆದ್ದ ಸಾಧನೆಯನ್ನು ಮಾಡಿದೆ. ವಿಶ್ವಕಪ್‌ನಲ್ಲಿ ಆರಂಭಿದಿಂದಲೂ ಸೋಲನ್ನೇ ಕಾಣದೇ ವಿಶ್ವಕಪ್‌ ಫೈನಲ್‌ಗೆ ಎಂಟ್ರಿ ಕೊಟ್ಟಿದ್ದ ಭಾರತ ತಂಡ ಫೈನಲ್‌ನಲ್ಲಿ ಮುಗ್ಗರಿಸುವ ಮೂಲಕ ಎರಡನೇ ಬಾರಿ ರನ್ನರ್ಸ್‌ ಅಪ್‌ ಆಗಿ ಹೊರಹೊಮ್ಮಿದೆ.

World Cup 2023 Final Australia wins World Cup for 6th time ind vs aus Traves Head centry India lost wc final in second time 2003 and 2023

Image Credit : ICCಭಾರತ VS ಆಸ್ಟ್ರೇಲಿಯಾ ತಂಡ :
ಭಾರತ : ರೋಹಿತ್ ಶರ್ಮಾ (ನಾಯಕ ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್‌ ಕೀಪರ್), ಸೂರ್ಯ‌ ಕುಮಾರ್ ಯಾದವ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ.

ಆಸ್ಟ್ರೇಲಿಯಾ : ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಇಂಗ್ಲಿಸ್ (ವಿಕೆಟ್‌ ಕೀಪರ್), ಪ್ಯಾಟ್ ಕಮ್ಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್, ಆಡಮ್ ಝಂಪಾ

World Cup 2023 Final : Australia wins World Cup for 6th time, ind vs aus  Traves Head centry India lost wc final in second time 2003 and 2023

Comments are closed.