ಧೋನಿಗಾಗಿ 1.5 ಲಕ್ಷ ಖರ್ಚು ಮಾಡಿ ಮನೆಗೆ ಪೈಂಟ್ : ವಿಭಿನ್ನ ರೀತಿಯಲ್ಲಿ ಅಭಿಮಾನ ತೋರಿಸಿದ ಅಭಿಮಾನಿ

0
  • ವಂದನ ಕೊಮ್ಮುಂಜೆ

ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ. ಕ್ರಿಕೇಟ್ ಜಗತ್ತಿನ ಕೂಲ್ ಕ್ಯಾಪ್ಟನ್ ಅಂತಾನೆ ಕರೆಸಿಕೊಳ್ಳುವ ಧೋನಿಗೆ ದೇಶದಲ್ಲಿ ಮಾತ್ರ ವಲ್ಲದೇ ವಿದೇಶದಲ್ಲೂ ಇವರಿಗೆ ಡೈಹಾರ್ಟ್ ಫ್ಯಾನ್ಸ್ ಇದ್ದಾರೆ.

ಸದ್ಯ ಐಪಿಎಲ್ ನಲ್ಲಿ ಧೋನಿ ಪ್ರದರ್ಶನ ಚೆನ್ನಾಗಿಲ್ಲ ಅನ್ನೋದ್ರಿಂದ ನಿರಾಸೆಗೊಂಡ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಧೋನಿಗೆ ಹುರಿದುಂಬಿಸೋ ಕೆಲಸ ಮಾಡ್ತಿದ್ದಾರೆ. ಆದ್ರೆ ಇಲ್ಲೊಬ್ಬ ಅಭಿಮಾನಿ ಮಾತ್ರ ಧೋನಿಯನ್ನು ಹಾಗು ಸಿಎಸ್ ಕೆ ತಂಡವನ್ನು ಹುರಿದುಂಬಿಸೋಕೆ ತನ್ನ ಮನೆಯ ಬಣ್ಣವನ್ನೇ ಬದಲಿಸಿದ್ದಾನೆ.

ಹೌದು, ಈ ಅಭಿಮಾನಿ ತನ್ನ ಮನೆಗೆ ಹಳದಿ ಬಣ್ಣವನ್ನು ಬಳಿದಿದ್ದಾನೆ. ಜೊತೆಗೆ ದೋನಿಯ ಚಿತ್ರಗಳನ್ನು ಕೂಡಾ ಬರೆಸಿದ್ದಾನೆ. ಈ ಮನೆಗೆ “ಹೊಮ್ ಆಫ್ ಧೋನಿ ಫ್ಯಾನ್” ಅಂತ ಬರೆಸಿಕೊಂಡಿದ್ದಾನೆ. ಈ ಅಭಿಮಾನಿ ಹೆಸರು ಗೋಪಿ ಕೃಷ್ಣನ್, ಈತ ತಮಿಳು ನಾಡಿನ ಕಡಲೂರಿನ ನಿವಾಸಿ. ಧೋನಿ ಡೈ ಹಾರ್ಟ್ ಫ್ಯಾನ್ ಕೂಡಾ. ಪ್ರತಿ ವರ್ಷ ಧೋನಿ ಮ್ಯಾಚ್ ಗಳನ್ನು ಲೈವ್ ಆಗಿ ಹೋಗಿ ನೋಡುತ್ತಾರಂತೆ.

ದುಬೈನಲ್ಲಿ ಕೆಲಸದಲ್ಲಿರೋ ಇವರು ಯಾವುದೇ ಐಪಿಎಲ್ ಮ್ಯಾಚ್ ಗಳನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ. ಆದ್ರೆ ಈ ಬಾರಿ ಕೊವಿಡ್ -19 ಹಿನ್ನೆಲೆಯಲ್ಲಿ ತಮ್ಮ ಊರಾದ ತಮಿಳುನಾಡಿನ ಕಡಲೂರಿಗೆ ಬಂದಿದ್ದಾರೆ. ಇದೇ ಕಾರಣಕ್ಕಾಗಿ ಮ್ಯಾಚ್ ನೋಡಲೂ ಹೋಗಲಾಗಲಿಲ್ಲ.

ಹೀಗಾಗಿ ಧೋನಿಯ ಮೇಲಿನ ಅಭಿಮಾನದಿಂದ ಇಡೀ ಮನೆಗೆ ಹಳದಿ ಬಣ್ಣವನ್ನು ಪೈಂಟ್ ಮಾಡಿಸಿದ್ದಾರೆ. ಅದರ ಜೊತೆಯಲ್ಲೇ ಧೋನಿ ಚಿತ್ರವನ್ನು ಬರೆಸಿರೋದು ವಿಶೇಷ . ಇನ್ನು ಇದರ ಕೆಳಗೆ ಸಿ ಎಸ್ ಕೆ ಸ್ಲೋಗನ್ “ವಿಶೆಲ್ ಪೊಡು” ಅಂತ ನಾನು ಬರೆಯಲಾಗಿದೆ.

ಈ ಪೈಂಟ್ ಮಾಡೋಕೆ ಗೋಪಿ ಕೃಷ್ಣನ್ ಗೆ 1.5 ಲಕ್ಷ ಖರ್ಚಾಗಿದೆ. ಆದ್ರೆ ತಮ್ಮ ಸ್ಟಾರ್ ಗಾಗಿ ಇದನ್ನು ಮಾಡಿರೋದಕ್ಕೆ ಗೋಪಿಕೃಷ್ಣನ್ ಮಾತ್ರ ಫುಲ್ ಖುಷ್ ಆಗಿದ್ದಾರೆ. ಅಭಿಮಾನಿಯ ಈ ಆಭಿಮಾನಕ್ಕೆ ಧೋನಿ ಹಾಗೂ ಸಿಎಸ್ ಕೆ ತಂಡ ಫುಲ್ ಫಿದಾ ಆಗಿದೆ.

ಸಿಎಸ್ ಕೆ ತಂಡ ಇದನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಧೋನಿ ಕೂಡಾ ಇದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ “ಧೋನಿ ಕ್ರೇಜ್ ” ಅಂತ ಪೋಸ್ಟ್ ಮಾಡಿದ್ದಾರೆ . ಇನ್ನು ಇದು ಧೋನಿ ಉಳಿದ ಫ್ಯಾನ್ ಗಳಿಗೂ ಮೆಚ್ಚುಗೆಯಾಗಿದೆ.

Leave A Reply

Your email address will not be published.