Dhoni in Chennai : ಹೊಸ ಗೆಟಪ್‌ನಲ್ಲಿ ಚೆನ್ನೈಗೆ ಬಂದಿಳಿದ “ಥಲಾ”, 2ನೇ ಮನೆಗೆ ಧೋನಿ ಬಂದದ್ದೇಕೆ ಗೊತ್ತಾ?

ಚೆನ್ನೈ: Dhoni in Chennai : ಚೆನ್ನೈ ಸೂಪರ್ ಕಿಂಗ್ಸ್ ತಂಡದ ದಿಗ್ಗಜ ನಾಯಕ, ಚೆನ್ನೈನ ಮನೆ ಮಗ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ, ಐಪಿಎಲ್ ನಂತರ ಮತ್ತೆ ಚೆನ್ನೈಗೆ ಬಂದಿಳಿದಿದ್ದಾರೆ. ಜುಲೈ 7ರಂದು ತವರು ನೆಲ ರಾಂಚಿಯಲ್ಲಿ 42ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ ಎಂ.ಎಸ್ ಧೋನಿ, ಸೋಮವಾರ ಚೆನ್ನೈಗೆ ಆಗಮಿಸಿದ್ದಾರೆ. ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಧೋನಿಯವರ ಹೊಸ ಹೇರ್‌ಸ್ಟೈಲ್ ಅವರ ಅಭಿಮಾನಿಗಳ ಗಮನ ಸೆಳೆದಿದೆ.

ಧೋನಿ ಚೆನ್ನೈಗೆ ಆಗಮಿಸಿರುವುದು ತಮ್ಮ ಪ್ರೊಡಕ್ಷನ್ ಹೌಸ್‌ನಲ್ಲಿ ನಿರ್ಮಾಣವಾಗುತ್ತಿರುವ “ಲೆಟ್ಸ್ ಗೆಟ್ ಮ್ಯಾರೀಡ್ (Let’s Get Married – LGM) ಸಿನಿಮಾ”ದ ಆಡಿಯೋ ಮತ್ತು ಟ್ರೈಲರ್ ಅನಾವರಣಕ್ಕೆ. ಕೆಲ ತಿಂಗಳ ಹಿಂದಷ್ಟೇ ಧೋನಿ ಸಿನಿಮಾ ಜಗತ್ತಿನಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಲು “ಧೋನಿ ಎಂಟರ್ಟೈನ್ಮೆಂಟ್” ಹೆಸರಿನ ತಮ್ಮದೇ ಪ್ರೊಡಕ್ಷನ್ ಹೌಸ್ ಅನ್ನು ಆರಂಭಿಸಿದ್ದರು. ಧೋನಿ ಎಂಟರ್ಟೈನ್ಮೆಂಟ್‌ನ ಮೊದಲ ಸಿನಿಮಾವೇ ಲೆಟ್ಸ್ ಗೆಟ್ ಮ್ಯಾರೀಡ್. ತಮ್ಮ ನಿರ್ಮಾಣ ಸಂಸ್ಥೆಯ ಚೊಚ್ಚಲ ಸಿನಿಮಾದ ಆಡಿಯೋ ಮತ್ತು ಟ್ರೈಲರನ್ನು ಧೋನಿ ಹಾಗೂ ಪತ್ನಿ ಸಾಕ್ಷಿ ಧೋನಿ ಸೋಮವಾರ ಅನಾವರಣ ಮಾಡಲಿದ್ದಾರೆ.

ಲೆಟ್ಸ್ ಗೆಟ್ ಮ್ಯಾರೀಡ್ ಸಿನಿಮಾದಲ್ಲಿ ಹರೀಶ್ ಕಲ್ಯಾಣ್, ಇವಾನಾ, ನಾದಿಯಾ, ಯೋಗಿ ಬಾಬು ಮತ್ತು ಮಿರ್ಚಿ ವಿಜಯ್ ತಾರಾಗಣದಲ್ಲಿದ್ದಾರೆ. ರಮೇಶ್ ತಮಿಳ್ ಮಣಿ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಐಪಿಎಲ್-2023 ಟೂರ್ನಿಯಲ್ಲಿ ಎಂ.ಎಸ್ ಧೋನಿ ದಾಖಲೆಯ 5ನೇ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಧೋನಿ ನಾಯಕತ್ವದಲ್ಲಿ ಚೆನ್ನೈ ತಂಡ 2010, 2011, 2018, 2021 ಹಾಗೂ 2023ರಲ್ಲಿ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿದೆ. ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 14 ವರ್ಷ ಐಪಿಎಲ್‌ನಲ್ಲಿ ಆಡಿದ್ದು 12 ಬಾರಿ ಪ್ಲೇ ಆಫ್ ತಲುಪಿದೆ. 10 ಬಾರಿ ಫೈನಲ್ ತಲುಪಿ 5 ಬಾರಿ ಪ್ರಶಸ್ತಿ ಗೆದ್ದಿದೆ.

ಇದನ್ನೂ ಓದಿ : Duleep Trophy 2023 : ದುಲೀಪ್ ಟ್ರೋಫಿಯಲ್ಲಿ ಕನ್ನಡಿಗರ ಪರಾಕ್ರಮ, ಫೈನಲ್’ಗೆ ಲಗ್ಗೆ ಇಟ್ಟ ದಕ್ಷಿಣ ವಲಯ

ಇದನ್ನೂ ಓದಿ : Virat Kohli – Rahul Dravid : 11 ವರ್ಷಗಳ ನೆನಪಿನ ಕನವರಿಕೆ, ದ್ರಾವಿಡ್ ಜೊತೆಗಿನ ಫೋಟೋ ಶೇರ್ ಮಾಡಿ ಭಾವುಕರಾದ ವಿರಾಟ್ ಕೊಹ್ಲಿ

2004ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದ ಜಾರ್ಖಂಡ್‌ನ ರಾಂಚಿಯ ಎಂ.ಎಸ್ ಧೋನಿ ಭಾರತಕ್ಕೆ 2 ವಿಶ್ವಕಪ್‌ಗಳನ್ನು ಗೆದ್ದುಕೊಟ್ಟಿದ್ದಾರೆ. 2007ರಲ್ಲಿ ಐಸಿಸಿ ಟಿ20 ವಿಶ್ವಕಪ್ ಗೆದ್ದುಕೊಟ್ಟಿದ್ದ ಧೋನಿ, 2011ರಲ್ಲಿ ಐಸಿಸಿ ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದರು. 2013ರಲ್ಲಿ ಧೋನಿ ನಾಯಕತ್ವದಲ್ಲಿ ಭಾರತ ತಂಡ, ಇಂಗ್ಲೆಂಡ್‌ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿತ್ತು. ಐಸಿಸಿ ಟಿ20 ವಿಶ್ವಕಪ್, ಐಸಿಸಿ ಏಕದಿನ ವಿಶ್ವಕಪ್ ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿಗಳನ್ನು ಗೆದ್ದ ಜಗತ್ತಿನ ಮೊದಲ ಮತ್ತು ಏಕೈಕ ನಾಯಕನೆಂಬ ಖ್ಯಾತಿ ಧೋನಿ ಅವರದ್ದು. ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಒಟ್ಟು 538 ಪಂದ್ಯಗಳನ್ನಾಡಿರುವ ಎಂ.ಎಸ್ ಧೋನಿ, 16 ಶತಕ ಹಾಗೂ 108 ಅರ್ಧಶತಕಗಳ ಸಹಿತ 17,266 ರನ್ ಕಲೆ ಹಾಕಿದ್ದಾರೆ.

Dhoni in Chennai : “Thala” landed in Chennai in a new getup, do you know why Dhoni came to the 2nd house?

Comments are closed.