ವಿಶ್ವಕಪ್‌ನ (World Cup 2023) ಮೊದಲ ಪಂದ್ಯವನ್ನು ಜಯಿಸಿರುವ ಭಾರತ ತಂಡ ಎರಡನೇ ಪಂದ್ಯದಲ್ಲಿ ಅಪ್ಘಾನಿಸ್ತಾನ ತಂಡವನ್ನು ಎದುರಿಸಲಿದೆ. ಆದರೆ ಮೂರನೇ ಪಂದ್ಯದಲ್ಲಿ ಪಾಕಿಸ್ತಾನದ ( India vs Pakistan ) ವಿರುದ್ದ ಆಡಲಿದೆ. ಆದರೆ ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಪಡೆ ಕೇಸರಿ ಜರ್ಸಿಯಲ್ಲಿ (saffron colored jersey) ಕಣಕ್ಕೆ ಇಳಿಯಲಿದೆ ಅನ್ನೋ ಚರ್ಚೆ ಶುರುವಾಗಿದೆ.
ಭಾರತ ತಂಡ ಅಕ್ಟೋಬರ್ 14ರಂದು ಅಹಮದಾಬಾದ್‌ನಲ್ಲಿ (Ahamedabad) ಪಾಕಿಸ್ತಾನ ವಿರುದ್ದ ಪಂದ್ಯವನ್ನು ಆಡಲಿದೆ. ಸಾಂಪ್ರದಾಯಿಕ ಎದುರಾಳಿಗಳ ಪಂದ್ಯಕ್ಕಾಗಿ ವಿಶ್ವವೇ ಕಾತರವಾಗಿದೆ. ಭಾರತದಲ್ಲಿ ಹಲವು ವರ್ಷಗಳ ಬಳಿಕ ಪಾಕಿಸ್ತಾನ ತಂಡ ಪಂದ್ಯವನ್ನು ಆಡುತ್ತಿದೆ. ಕೇಸರಿ ಜರ್ಸಿಯಲ್ಲಿ ಭಾರತ ತಂಡ ಕಣಕ್ಕೆ ಇಳಿಯಲಿದೆ.

ವಿಶ್ವಕಪ್ ಸೇರಿದಂತೆ ಎಲ್ಲಾ ಪಂದ್ಯಗಳಲ್ಲಿಯೂ ಭಾರತ ತಂಡ ಬ್ಲೂ ಜರ್ಸಿಯಲ್ಲಿ ಕಣಕ್ಕೆ ಇಳಿಯುತ್ತೆ. ಇದೀಗ ವಿಶ್ವಕಪ್‌ಗಾಗಿ ವಿಶೇಷ ಜರ್ಸಿಯನ್ನೂ ಸಿದ್ದಪಡಿಸಲಾಗಿದೆ. ಇದೆಲ್ಲದರ ನಡುವಲ್ಲೇ ಟೀಂ ಇಂಡಿಯಾ ಕೇಸರಿ ಜರ್ಸಿ ಧರಿಸಿ ಕಣಕ್ಕೆ ಇಳಿಯಲಿದೆ ಅನ್ನೋ ಬಗ್ಗೆ ಚರ್ಚೆ ಶುರುವಾಗಿದೆ.
ಪಾಕಿಸ್ತಾನ ತಂಡ ಈಗಾಗಲೇ ಎರಡು ಪಂದ್ಯಗಳನ್ನು ಆಡಿದ್ದು, ಎರಡರಲ್ಲಿಯೂ ಗೆಲುವು ದಾಖಲಿಸಿದೆ. ಭಾರತ ತಂಡ ಆಸ್ಟ್ರೇಲಿಯಾ ವಿರುದ್ದ ಮೊದಲ ಪಂದ್ಯದಲ್ಲಿಯೇ ಭರ್ಜರಿ ಗೆಲುವು ದಾಖಲಿಸಿದೆ. ಭಾರತ – ಪಾಕಿಸ್ತಾನ ಪಂದ್ಯಕ್ಕಾಗಿ ಎರಡೂ ತಂಡಗಳು ಕಾತರವಾಗಿವೆ.
ಇದನ್ನೂ ಓದಿ : ವಿಶ್ವಕಪ್ ನಿಂದ ಶುಭಮನ್ ಗಿಲ್ ಔಟ್ ? ಭಾರತ ತಂಡಕ್ಕೆ ರುತುರಾಜ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್
ಇದೀಗ ಭಾರತ ತಂಡ ಕೇಸರಿ ಜರ್ಸಿ ಧರಿಸಿ ಪಾಕಿಸ್ತಾನದ ವಿರುದ್ದ ಆಡಲಿದೆ ಅನ್ನೋ ಸುದ್ದಿ ಹರಿಡಿದ ಬೆನ್ನಲ್ಲೇ ಬಿಸಿಸಿಐ ಖಜಾಂಜಿ ಅವರು ಈ ಸುದ್ದಿಯನ್ನು ನಿರಾಕರಿಸಿದ್ದಾರೆ ಎಂದು ಇನ್‌ಸೈಡ್ ಸ್ಪೋರ್ಟ್ ವರದಿ ಮಾಡಿದೆ. ಭಾರತ ತಂಡ ವಿಶ್ವಕಪ್‌ನಲ್ಲಿ ಬ್ಲೂ ಬಣ್ಣದ ಜರ್ಸಿಯಲ್ಲಿ ಕಣಕ್ಕೆ ಇಳಿದಿದೆ.

ಆದರೆ ಪರ್ಯಾಯ ಪಂದ್ಯದ ಕಿಟ್ ಅನ್ನು ಧರಿಸಲಿದೆ ಅನ್ನೋ ಮಾಧ್ಯಮಗಳ ವರದಿಯನ್ನ ತಳ್ಳಿಹಾಕಿದ್ದಾರೆ. ವಿಶ್ವಕಪ್‌ನಲ್ಲಿ ಭಾರತ ತಂಡ ಬ್ಲೂ ಬಣ್ಣದ ಜರ್ಸಿಯಲ್ಲಿಯೇ ಕಣಕ್ಕೆ ಇಳಿಯಲಿದೆ ಎಂದು ಬಿಸಿಸಿಐನ ಗೌರವ ಖಜಾಂಚಿ ಆಶಿಶ್ ಶೆಲಾರ್ ತಿಳಿಸಿದ್ದಾರೆ. ಅಲ್ಲದೇ ಭಾರತ ತಂಡ ಕೇಸರಿ ಬಣ್ಣದ ಜರ್ಸಿಯಲ್ಲಿ ಕಣಕ್ಕೆ ಇಳಿಯುವುದು ಅನುಮಾನ.
ಪಾಕಿಸ್ತಾನ ತಂಡ ಮೊದಲ ಪಂದ್ಯದಲ್ಲಿ ನೆದರ್‌ಲ್ಯಾಂಡ್ ತಂಡದ ವಿರುದ್ದ ಭರ್ಜರಿ ಗೆಲುವು ದಾಖಲಿಸಿದೆ. ಎರಡೇ ಪಂದ್ಯವನ್ನು ಶ್ರೀಲಂಕಾ ವಿರುದ್ದವೂ ಜಯಿಸಿದೆ. ಇದೇ ಹುಮ್ಮನಸ್ಸಿನಲ್ಲಿಯೇ ಭಾರತ ವಿರುದ್ದ ಪಂದ್ಯವಾಡಲಿ ಸಜ್ಜಾಗಿದೆ.
ಇದನ್ನೂ ಓದಿ : ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡಕ್ಕೆ ವಾಡಾ ನಿಷೇಧದ ಭೀತಿ !
ಆದರೆ ಭಾರತ ತಂಡ ಮೊದಲ ಪಂದ್ಯದಲ್ಲಿಯೇ ಆಸ್ಟ್ರೇಲಿಯಾವನ್ನು ಸೋಲಿಸಿರುವುದು ಆನೆಬಲ ಬಂದಂತೆ ಆಗಿದೆ. ಭಾರತ ಹಾಗೂ ಪಾಕಿಸ್ತಾನ ಪಂದ್ಯಗಳ ಅಂಕಿಅಂಶಗಳನ್ನು ನೋಡುವುದಾದ್ರೆ, ಭಾರತ ಹಾಗೂ ಪಾಕಿಸ್ತಾನ ತಂಡಗಳು ಒಟ್ಟು 134 ಏಕದಿನ ಪಂದ್ಯಗಳಲ್ಲಿ ಎದುರಾಗಿದೆ. ಈ ಪೈಕಿ ಪಾಕಿಸ್ತಾನ ತಂಡ 73 ಪಂದ್ಯಗಳಲ್ಲಿ ಜಯಿಸಿದ್ದು, 56 ಪಂದ್ಯಗಳನ್ನು ಸೋತಿದೆ.

ಅದ್ರೆ ವಿಶ್ವಕಪ್ ಪಂದ್ಯಾವಳಿಯ ಲೆಕ್ಕಾಚಾರಗಳನ್ನು ನೋಡಿದ್ರೆ ಭಾರತ ತಂಡ ಪಾಕಿಸ್ತಾನದ ವಿರುದ್ದ ಇದುವರೆಗೂ ಯಾವುದೇ ಪಂದ್ಯವನ್ನು ಸೋತಿಲ್ಲ. ಈ ಮೂಲಕ ವಿಶ್ವಕಪ್ ನಲ್ಲಿ ಭಾರತವೇ ಫೇವರೇಟ್ ತಂಡ ಎನಿಸಿಕೊಂಡಿದೆ. ಇನ್ನೊಂದೆಡೆಯಲ್ಲಿ ಏಷ್ಯಾಕಪ್ ಗೆಲುವು ಭಾರತಕ್ಕೆ ಹೊಸ ಹುಮ್ಮಸ್ಸು ತರಿಸಿದೆ.
India cricket team will play in saffron colored jersey in World Cup 2023 India vs Pakistan match BCCI replied