Neeraj Chopra: ಸಾಧಕರಿಬ್ಬರ ಭೇಟಿ: ನೀರಜ್ ಚೋಪ್ರಾರನ್ನು ಭೇಟಿ ಮಾಡಿದ ಅಭಿನವ ಬಿಂದ್ರಾ

ಸಾಧಕ ನೀರಜ್ ಚೋಪ್ರಾ ಅವರನ್ನು ಭೇಟಿ ಮಾಡಿದ ಶೂಟಿಂಗ್‌ ದಂತಕತೆ ಅಭಿನವ ಬಿಂದ್ರಾ  ವಿಶೇಷ ಉಡುಗೊರೆ ನೀಡಿದ್ದಾರೆ ಹಾಗೂ ಈ ಸಂತೋಷದ ವಿಷಯವನ್ನು ತಮ್ಮ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.

ಟೊಕಿಯೋ ಒಲಂಪಿಕ್ಸ್ ನಲ್ಲಿ ಚಿನ್ನದ ಸಾಧನೆಗೈಯ್ದ  ನೀರಜ್ ಚೋಪ್ರಾ ಅವರಿಗೆ ಶೂಟಿಂಗ್ ದಂತಕತೆ ಅಭಿನವ್ ಬಿಂದ್ರಾ ವಿಶೇಷ ಕೊಡುಗೆ ನೀಡಿದ್ದು, ನೀರಜ್ ಚೋಪ್ರಾಗೆ ಮುಂದಿನ ಕ್ರೀಡಾಕೂಟಕ್ಕೆ ಶುಭ ಹಾರೈಸಿದ್ದಾರೆ. ತಮ್ಮ ಭೇಟಿಯ ಪೋಟೋವನ್ನು ಅಭಿನವ್ ಬಿಂದ್ರಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.



ನೀರಜ್‌ ಚೋಪ್ರಾಗೆ ಗೋಲ್ಡನ್ ರಿಟ್ರೈವರ್ ನಾಯಿಮರಿಯನ್ನು ಬಿಂದ್ರಾ ಉಡುಗೊರೆಯಾಗಿ ನೀಡುತ್ತಿದ್ದಾರೆ. ಜೊತೆಗೆ 2024ರ ಪ್ಯಾರಿಸ್‌ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಚೋಪ್ರಾಗೆ ಅಭಿನವ್‌ ಬಿಂದ್ರಾ ಶುಭ ಹಾರೈಸಿದ್ದಾರೆ.

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ಬಿಂದ್ರಾ, ಇಂಡಿಯನ್‌ ಗೋಲ್ಡನ್‌ ಮ್ಯಾನ್‌ ನೀರಜ್‌ ಚೋಪ್ರಾ ಅವರನ್ನು ಭೇಟಿಯಾಗಿದ್ದಕ್ಕೆ ತುಂಬಾ ಖುಷಿಯಾಗುತ್ತಿದೆ. ಟೋಕಿಯೋದಲ್ಲಿ ಗೆದ್ದ ಚಿನ್ನದ ಪದಕವು 2024ರ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಇದೇ ಸಾಧನೆ ಮಾಡಲು ಪ್ರೇರಣೆಯಾಗಲಿ ಎಂದು ತಾವು ಹಂಚಿಕೊಂಡಿರುವ ಪೋಟೋಗೆ ಕ್ಯಾಪ್ಸನ್ ನೀಡಿದ್ದಾರೆ.



ಆಗಸ್ಟ್‌ 7 ರಂದು ನಡೆದಿದ್ದ ಪುರುಷರ ಜಾವೆಲಿನ್‌ ಥ್ರೋ ಫೈನಲ್‌ ಸುತ್ತಿನಲ್ಲಿ 87.58 ಮೀಟರ್‌ ದೂರ ಜಾವೆಲಿನ್ ಎಸೆಯುವ ಮೂಲಕ ನೀರಜ್‌ ಚೋಪ್ರಾ ಭಾರತಕ್ಕೆ ಚೊಚ್ಚಲ ಚಿನ್ನದ ಪದಕ ತಂದುಕೊಟ್ಟರು. ಅಲ್ಲದೆ, ಅಭಿನವ್‌ ಬಿಂದ್ರಾ ಬಳಿಕ ಒಲಿಂಪಿಕ್ಸ್‌ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡ ಭಾರತದ ಎರಡನೇ ಅಥ್ಲಿಟ್‌ ಎಂಬ ಕೀರ್ತಿಗೂ ನೀರಜ್‌ ಭಾಜನರಾಗಿದ್ದಾರೆ.

ಇದನ್ನೂ ಓದಿ : ಚಿನ್ನದ ಹುಡುಗನ ಮೊದಲ ಜಾಹೀರಾತು ಸಖತ್​ ವೈರಲ್​ : ನಟನೆಗೂ ಸೈ ಎಂದ ನೀರಜ್​ ಚೋಪ್ರಾ

ಇದನ್ನೂ ಓದಿ : ಸುಮ್ಮನೇ ದಕ್ಕಿದ್ದಲ್ಲ ಚಿನ್ನ…!! ನೀರಜ್‌ ಚೋಪ್ರಾ ಕಣ್ಣೀರ ಕಥೆ ನಿಮಗೆ ಗೊತ್ತಾ ..!!

(Shooter Abhinav Bindra meet Neeraj Chopra)

Comments are closed.