India vs Bangladesh test : ಭಾರತದ ಗೆಲುವಿಗೆ 4 ವಿಕೆಟ್ ಬಾಕಿ, ಬಾಂಗ್ಲಾ ಗೆಲುವಿಗೆ ಬೇಕು 241 ರನ್

ಛಟ್ಟೋಗ್ರಾಮ್: India vs Bangladesh test : ಆತಿಥೇಯ ಬಾಂಗ್ಲಾದೇಶ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯವನ್ನು ಗೆಲ್ಲಲು ಭಾರತಕ್ಕೆ ನಾಲ್ಕೇ ನಾಲ್ಕು ವಿಕೆಟ್’ಗಳ ಅವಶ್ಯಕತೆಯಿದೆ. ಭಾರತ ವಿರುದ್ಧ ಗೆಲ್ಲಲು ಬಾಂಗ್ಲಾದೇಶಕ್ಕೆ ಬೇಕಿರೋದು 241 ರನ್. ಛಟ್ಟೋಗ್ರಾಮ್’ನ ಜಹೂರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದಲ್ಲಿ 513 ರನ್’ಗಳ ಗೆಲುವಿನ ಗುರಿ ಬೆನ್ನಟ್ಟಿರುವ ಬಾಂಗ್ಲಾದೇಶ 4ನೇ ದಿನದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 272 ರನ್ ಗಳಿಸಿದೆ.

ಬೆಟ್ಟದಂಥಾ ಗುರಿಯ ಮುಂದೆ ಬಾಂಗ್ಲಾ ಆರಂಭಿಕರಾದ ನಜ್ಮುಲ್ ಹೊಸೇನ್ ಶಾಂಥೋ (67) ಮತ್ತು ಚೊಚ್ಚಲ ಟೆಸ್ಟ್ ಪಂದ್ಯವಾಡುತ್ತಿರುವ ಝಾಕಿರ್ ಹಸನ್ (100) ಸಡ್ಡು ಹೊಡೆದು ನಿಂತರು. ಈ ಆರಂಭಿಕ ಜೋಡಿ ಮೊದಲ ವಿಕೆಟ್’ಗೆ 124 ರನ್’ಗಳ ಜೊತೆಯಾಟವಾಡಿ ಭದ್ರ ಅಡಿಪಾಯ ಹಾಕಿಕೊಟ್ಟಿತು. ಭಾರತಕ್ಕೆ ತಲೆ ನೋವಾಗಿದ್ದ ಈ ಜೊತೆಯಾಟವನ್ನು 47ನೇ ಓವರ್’ನಲ್ಲಿ ಶಾಂಥೋ ವಿಕೆಟ್ ಪಡೆಯುವ ಮೂಲಕ ಉಮೇಶ್ ಯಾದವ್ ಮುರಿದರು.

ಆದರೆ ಮತ್ತೊಬ್ಬ ಆರಂಭಕಾರ ಝಾಕಿರ್ ಹಸನ್ ಪದಾರ್ಪಣೆಯ ಟೆಸ್ಟ್ ಪಂದ್ಯದಲ್ಲೇ ಶತಕದೊಂದಿಗೆ ಮಿಂಚಿದರು. ಬಾಂಗ್ಲಾದೇಶದ ಮಧ್ಯಮ ಕ್ರಮಾಂಕದಿಂದ ಭಾರತಕ್ಕೆ ಅಂಥಾ ಪ್ರತಿರೋಧ ಕಂಡು ಬರ್ಲಿಲ್ಲ. ಯಾಸಿರ್ ಅಲಿ (5), ಲಿಟ್ಟನ್ ದಾಸ್ (19), ಮುಷ್ಫಿಕರ್ ರಹೀಂ (23) ಮತ್ತು ವಿಕೆಟ್ ಕೀಪರ್ ನೂರುಲ್ ಹಸನ್ (3) ಪೆವಿಲಿಯನ್ ಸೇರಿಕೊಂಡಿದ್ದಾರೆ. ದಿನದಂತ್ಯಕ್ಕೆ ನಾಯಕ ಶಕೀಬ್ ಅಲ್ ಹಸನ್ 40 ರನ್ ಗಳಿಸಿ ಅಜೇಯರಾಗುಳಿದಿದ್ದು, ನಾಯಕನ ಜೊತೆ ಏಕದಿನ ಸರಣಿಯ ಹೀರೋ ಮೆಹದಿ ಹಸನ್ ಮಿರಾಜ್ 9 ರನ್’ಗಳೊಂದಿಗೆ ಅಂತಿಮ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಭಾರತ ಪರ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ 50 ರನ್ನಿಗೆ 3 ವಿಕೆಟ್ ಪಡೆದರೆ, ವೇಗಿ ಉಮೇಶ್ ಯಾದವ್, ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಮತ್ತು ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ತಲಾ ಒಂದು ವಿಕೆಟ್ ಉರುಳಿಸಿದ್ದಾರೆ.

ಇದನ್ನೂ ಓದಿ : Rahul lucky for Pujara Gill :1443 ದಿನಗಳ ಪೂಜಾರ ಶತಕ, ಗಿಲ್ ಚೊಚ್ಚಲ ಟೆಸ್ಟ್ ಶತಕ; ಮತ್ತೆ ಅದೃಷ್ಟ ತಂದ ರಾಹುಲ್ ನಾಯಕತ್ವ

ಇದನ್ನೂ ಓದಿ : Shreyas Iyer : ಶತಕ ಮಿಸ್ಸಾದ್ರೂ ಯಾರೂ ಮಾಡಲಾಗದ ದಾಖಲೆ ಬರೆದ ಶ್ರೇಯಸ್ ಅಯ್ಯರ್

English News : News Next Live

India vs Bangladesh test match India need 4 wickets to win Bangladesh need 241 runs to win

Comments are closed.