India Vs South Africa Match : ಅಂಪೈರ್ ಮರ್ಮಾಂಗಕ್ಕೆ ಗುದ್ದಿದ ಟೀಮ್ ಇಂಡಿಯಾ ಸ್ಪಿನ್ನರ್ ಯುಜ್ವೇಂದ್ರ ಚಹಲ್ : Watch

ಪರ್ತ್: ಭಾರತ ಮತ್ತು ದಕ್ಷಿಣ ಆಫ್ರಿಕಾ (India Vs South Africa) ನಡುವಿನ ಟಿ20 ವಿಶ್ವಕಪ್ ಸೂಪರ್-12 ಪಂದ್ಯದಲ್ಲಿ ಇಂಟ್ರೆಸ್ಟಿಂಗ್ ಘಟನೆಯೊಂದು ನಡೆದಿದೆ. ಭಾರತದ ಇನ್ನಿಂಗ್ಸ್ ವೇಳೆ ಟೀಮ್ ಇಂಡಿಯಾ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ (Yuzvendra Chahal) ಫೀಲ್ಡ್ ಅಂಪೈರ್ ಲ್ಯಾಂಗ್ಟನ್ ರುಸೇರ್ (Langton Rusere) ಅವರ ಮರ್ಮಾಂಗಕ್ಕೆ ಕೈಯಿಂದ ಗುದ್ದಿದ್ದಾರೆ. ಟೀಮ್ ಇಂಡಿಯಾ ಇನ್ನಿಂಗ್ಸ್’ನ 2.5 ಓವರ್ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ದಕ್ಷಿಣ ಆಫ್ರಿಕಾದ ಎಡಗೈ ವೇಗಿ ವೇಯ್ನ್ ಪಾರ್ನೆಲ್ ಅವರ ಎಸೆತ ಟೀಮ್ ಇಂಡಿಯಾ ಓಪನರ್ ಕೆ.ಎಲ್ ರಾಹುಲ್ ಅವರ ಮರ್ಮಾಂಗಕ್ಕೆ ಬಡಿದಿತ್ತು. ಈ ವೇಳೆ ತೀವ್ರ ನೋವು ಅನುಭವಿಸಿದ ರಾಹುಲ್ ಮೈದಾನದಲ್ಲಿ ಕುಸಿದು ಕೂತಿದ್ದರು. ಈ ಸಂದರ್ಭದಲ್ಲಿ ಫಿಸಿಯೊ ಜೊತೆ ನೀರಿನ ಬಾಟಲ್’ನೊಂದಿಗೆ ಮೈದಾನಕ್ಕೆ ಬಂದ 12th ಮ್ಯಾನ್ ಯುಜ್ವೇಂದ್ರ ಚಹಲ್ ಪಕ್ಕದಲ್ಲೇ ನಿಂತಿದ್ದ ಅಂಪೈರ್ ಮರ್ಮಾಂಗಕ್ಕೆ ಎರಡು ಬಾರಿ ಗುದ್ದಿದ್ದಾರೆ. ಹಾಗಂತ ಇದೇನು ಸೀರಿಯಸ್ ಮ್ಯಾಟರ್ ಅಲ್ಲ, ತಮಾಷೆಗೆ ಚಹಲ್ ಈ ರೀತಿ ಮಾಡಿದ್ದಾರೆ. ಆ ವೀಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

https://twitter.com/gemsofcricket/status/1586685299241152512?s=21

ಪರ್ತ್’ನ ವಾಕಾ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟಾಸ್ ಗೆದ್ದ ಟೀಮ್ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ 5 ಓವರ್’ಗಳ ಒಳಗೆ ಆರಂಭಿಕರಿಬ್ಬರನ್ನೂ ಕಳೆದುಕೊಂಡ ಭಾರತ ಆರಂಭಿಕ ಆಘಾತ ಎದುರಿಸಿತು. ನಾಯಕ ರೋಹಿತ್ ಶರ್ಮಾ (Rohit Sharma) 15 ರನ್ ಗಳಿಸಿ ಔಟಾದ್ರೆ, ಉಪನಾಯಕ ಕೆ.ಎಲ್ ರಾಹುಲ್ (KL Rahul) 9 ರನ್ನಿಗೆ ವಿಕೆಟ್ ಒಪ್ಪಿಸಿದರು. ಇಬ್ಬರನ್ನೂ ವೇಗಿ ಲುಂಗಿ ಎನ್’ಗಿಡಿ ಪೆವಿಲಿಯನ್’ಗಟ್ಟಿದರು. ನಂತರ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಕೂಡ 12 ರನ್ ಗಳಿಸಿ ಎನ್’ಗಿಡಿಗೆ ವಿಕೆಟ್ ಒಪ್ಪಿಸಿದರು. 5ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದ ಆಲ್ರೌಂಡರ್ ದೀಪಕ್ ಹೂಡ (Deepak Hooda)ಶೂನ್ಯಕ್ಕೆ ಔಟಾದ್ರೆ, ಕೇವಲ 2 ರನ್ನಿಗೆ ಔಟಾದ ಮತ್ತೊಬ್ಬ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಎನ್’ಗಿಡಿಗೆ 4ನೇ ಬಲಿಯಾದರು.

ಒಂದೆಡೆ ವಿಕೆಟ್’ಗಳು ಉರುಳುತ್ತಿದ್ದಾಗ ಕೌಂಟರ್ ಅಟ್ಯಾಕ್ ನಡೆಸಿದ ಸೂರ್ಯಕುಮಾರ್ ಯಾದವ್ (Suryakumar Yadav) 40 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್’ಗಳ ನೆರವಿನಿಂದ 68 ರನ್ ಸಿಡಿಸಿ ಭಾರತಕ್ಕೆ ಆಸರೆಯಾದರು. ಅಂತಿಮವಾಗಿ ಭಾರತ ನಿಗದಿತ 20 ಓವರ್’ಗಳಲ್ಲಿ 9 ವಿಕೆಟ್ ನಷ್ಟಕ್ಕೆ 133 ರನ್ ಕಲೆ ಹಾಕಿತು.

ಇದನ್ನೂ ಓದಿ : ಭಾರತ Vs ದಕ್ಷಿಣ ಆಫ್ರಿಕಾ ಮ್ಯಾಚ್, ರೋಹಿತ್ ಔಟಾದಾಗ ಮುಗಿಲು ಮುಟ್ಟಿತು ಭಾರತೀಯ ಪ್ರೇಕ್ಷಕರ ಸಂಭ್ರಮ, ಕಾರಣವೇನು ಗೊತ್ತಾ ?

ಇದನ್ನೂ ಓದಿ : India Vs South Africa Live : ಕೈಯಲ್ಲಿದ್ದ ಮ್ಯಾಚ್ ಕೈ ಚೆಲ್ಲಿದ ಭಾರತ, ಟೀಮ್ ಇಂಡಿಯಾಗೆ ಮೊದಲ ಸೋಲು

India Vs South Africa Match Team India spinner Yuzvendra Chahal punched umpire : watch

Comments are closed.