India vs Sri Lanka 1st ODI : ಧವನ್‌, ಕಿಶನ್‌ ಅಬ್ಬರಕ್ಕೆ ಲಂಕಾ ಉಡೀಸ್‌

ಕೊಲಂಬೋ : ಟೀಂ ಇಂಡಿಯಾ ನಾಯಕ ಶಿಖರ್‌ ಧವನ್‌ ಹಾಗೂ ವಿಕೆಟ್‌ ಕೀಪರ್‌ ಇಶಾನ್‌ ಕಿಶನ್‌ ಅಬ್ಬರ ಬ್ಯಾಟಿಂಗ್‌ ನೆರವಿನಿಂದ ಶ್ರೀಲಂಕಾ ವಿರುದ್ದ ಏಕದಿನ ಸರಣಿಯ ಮೊದಲ ಪಂದ್ಯವನ್ನು7 ವಿಕೆಟ್‌ ಅಂತರದಲ್ಲಿ ಗೆಲುವು ಸಾಧಿಸಿದೆ.

ಕೊಲಂಬೋದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಶ್ರೀಲಂಕಾ ತಂಡಕ್ಕೆ ಅವಿಶ್ಕಾ ಫೆರ್ನಾಂಡೋ ಹಾಗೂ ಎಂ ಭನುಕ ಭರ್ಜರಿ ಆರಂಭವೊದಗಿಸಿದ್ರು. ಆದರೆ ಟೀಂ ಇಂಡಿಯಾದ ಬೌಲರ್‌ಗಳಾದ ಚಹಲ್‌ ಹಾಗೂ ಕುಲದೀಪ್‌ ಯಾದವ್‌ ಅವರು ಫೆರ್ನಾಂಡೋ ಹಾಗೂ ಭನುಕ ಅವರಿಗೆ ಪೆವಿಲಿಯನ್‌ ಹಾದಿ ತೋರಿಸಿದ್ರು.

ನಂತರ ಬ್ಯಾಟಿಂಗ್‌ ಗೆ ಇಳಿದ ರಾಜಪಕ್ಷ ಹಾಗೂ ಧನಂಜಯ ಡಿ ಸಿಲ್ವಾ ಅವರು ಕೂಡ ಹೆಚ್ಚು ಹೊತ್ತು ಕ್ರೀಸ್‌ ನಲ್ಲಿ ಉಳಿಯಲಿಲ್ಲ. ಶ್ರೀಲಂಕಾ ಪರ ಅಸಲಂಕಾ 38, ಶನಕ 39 ಕುರುಣರತ್ನೆ 43 ಹಾಗೂ ಫೆರ್ನಾಂಡೋ 33, ಭನುಕ 27 ಹಾಗೂ ರಾಜಪಕ್ಷ 24 ರನ್‌ ನೆರವಿನಿಂದ ಶ್ರೀಲಂಕಾ ತಂಡ 50 ಓವರ್‌ ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 262 ರನ್‌ ಗಳಿಸಿತು. ಭಾರತ ಪರ ದೀಪಕ್‌ ಚಹರ್‌, ಕುಲದೀಪ್‌ ಯಾದವ್‌, ಚಹಲ್‌ ತಲಾ ಎರಡು ವಿಕೆಟ್‌ ಪಡೆದುಕೊಂಡಿದ್ದಾರೆ. ಅಲ್ಲದೇ ಕೃನಾಲ್‌ ಪಾಂಡ್ಯ ಹಾಗೂ ಹಾರ್ದಿಕ್‌ ಪಾಂಡ್ಯ ತಲಾ ಒಂದು ವಿಕೆಟ್‌ ಪಡೆದುಕೊಂಡಿದ್ದಾರೆ.

ಶ್ರೀಲಂಕಾ ನೀಡಿದ್ದ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಭಾರತ ತಂಡಕ್ಕೆ ನಾಯಕ ಶಿಖರ್‌ ಧವನ್‌ ಹಾಗೂ ಪ್ರಥ್ವಿಶಾ ಭರ್ಜರಿ ಆರಂಭವೊದಗಿಸಿದ್ರು. ಭಾರತ 58 ರನ್‌ ಗಳಿಸಿದ್ದಾಗ 43 ರನ್‌ ಗಳಿಸಿ ಆಡುತ್ತಿದ್ದ ಪ್ರಥ್ವಿ ಶಾ ಧನಂಜಯ ಡಿಸಿಲ್ವಾ ಅವರಿಗೆ ವಿಕೆಟ್‌ ಒಪ್ಪಿಸಿದ್ದಾರೆ. ನಂತರ ಧವನ್‌ ಜೊತೆಯಾದ ಇಶಾನ್‌ ಕಿಶಾನ್‌ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ರು. ಸೊಗಸಾದ ಅರ್ಧಶತಕದ ನೆರವಿನಿಂದ 59 ರನ್‌ ಗಳಿಸಿ ಕಿಶನ್‌ ಔಟಾದ್ರೆ, ನಂತರ ಬಂದ ಮನೀಶ್‌ ಪಾಂಡೆ 26 ರನ್‌ ಬಾರಿಸಿದ್ರು. ಅಂತಿಮವಾಗಿ ಶಿಖರ್‌ ಧವನ್‌ ಹಾಗೂ ಸೂರ್ಯಕುಮಾರ್‌ ಯಾದವ್‌ ಭಾರತ ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ. ಶಿಖರ್‌ ಧವನ್‌ ಔಟಾಗದೇ 86 ರನ್‌ ಗಳಿಸಿದ್ರೆ, ಸೂರ್ಯ ಕುಮಾರ್‌ ಯಾದವ್‌ 31 ರನ್‌ ಬಾರಿಸಿದ್ರು.

ಕೇವಲ 36.4 ಓವರ್‌ ಗಳಲ್ಲಿ ಭಾರತ ತಂಡ 262 ರನ್‌ ಬಾರಿಸುವ ಮೂಲಕ ಮೊದಲ ಏಕದಿನ ಪಂದ್ಯ ದಲ್ಲಿ ಭಾರತ ತಂಡ 7 ವಿಕೆಟ್‌ ಅಂತರದಿಂದ ಗೆಲವು ಸಾಧಿಸಿದೆ. ಈ ಮೂಲಕ ಸರಣಿಯಲ್ಲಿ 1-0ಅಂತರದ ಮುನ್ನಡೆಯನ್ನು ಸಾಧಿಸಿದೆ. ಶ್ರೀಲಂಕಾ ಪರ ಧನಂಜಯ ಡಿಸಿಲ್ವಾ 2 ವಿಕೆಡ್‌ ಪಡೆದ್ರೆ, ಲಕ್ಷಣ ಸನ್ಡಕನ ಒಂದು ವಿಕೆಟ್‌ ಪಡೆದುಕೊಂಡಿದ್ದಾರೆ.

ಸಂಕ್ಷಿಪ್ತ ಸ್ಕೋರ್‌ :
ಭಾರತ : ಶಿಖರ್‌ ಧವನ್‌ 86, ಇಶಾನ್‌ ಕಿಶನ್‌ 59, ಪ್ರಥ್ವಿಶಾ 43, ಸೂರ್ಯಕುಮಾರ್‌ ಯಾದವ್‌ 31, ಮನೀಶ್‌ ಪಾಂಡೆ 26, ಧನಂಜಯ ಡಿಸಿಲ್ವಾ49/2, ಲಕ್ಷಣ ಸನ್ಡಕನ 53/1

ಶ್ರೀಲಂಕಾ : ಸಿ.ಕರುಣರತ್ನೆ 43, ಶನಕ 39, ಅಸಲಂಕಾ 38, ಫರ್ನಾಂಡೊ 33, ಭನುಕ 27, ರಾಜಪಕ್ಷ 24, ಧನಂಜಯ ಡಿಸಿಲ್ವಾ 14, ಚಾಮೀರ 13 ಉದಾನ 8, ದೀಪಕ್‌ ಚಹರ್‌ 37/2, ಚಹಾಲ್‌ 52/2, ಕುಲದೀಪ್‌ ಯಾದವ್‌ 48/2, ಕೃನಾಲ್‌ ಪಾಂಡ್ಯ 26/1, ಹಾರ್ದಿಕ್‌ ಪಾಂಡ್ಯ 34/1.

Comments are closed.