IPL Mumbai Indians ಕ್ರೀಡಾ ತಪಸ್ವಿ ಕಾರ್ತೀಕೇಯ


ಕ್ರಿಕೇಟ್ ಆಟವಾಡುವುದೆಂದರೆ ಎಲ್ಲರಿಗೂ ಇಷ್ಟ. ಚಿಕ್ಕ ಮಕ್ಕಳಿಂದ ಹಿಡಿದು ಮುದುಕರವರೆಗೂ ಕ್ರಿಕೇಟ್ ಆಡಲು ಬಯಸುತ್ತಾರೆ. ಕೆಲವರಿಗೆ ಕ್ರಿಕೇಟ್ ಪ್ಯಾಷನ್ ಆದರೆ ಇನ್ನು ಕೆಲವರಿಗೆ ಅದುವೇ ಜೀವನ. ಅದರಲ್ಲಿಯೂ ಕೆಲವರು ಕ್ರಿಕೇಟ್ ಅನ್ನು ತಪಸ್ಸನ್ನಾಗಿ ಸ್ವೀಕರಿಸಿ ಸಾಧನೆ ಮಡುತ್ತಾರೆ. ಅಂಥವರ ಸಾಲಿನಲ್ಲಿ ನಮಗೆ ಕಾಣಸಿಗುವವರು ಕಡಿಮೆ ಆಟಗಾರರೇ. ಆದರೆ ಈ ರೀತಿ ಕ್ರಿಕೇಟ್ ಅನ್ನು ತಪಸ್ಸಾಗಿ ಸ್ವೀಕರಿಸಿ, ಕಠೀಣ ಪರಿಶ್ರಮದ ಮೂಲಕ ಸಾಧನೆ ಮಾಡಿದವರ ಸಾಲಿಗೆ ಕ್ರಿಕೇಟ್ ಐಪಿಎಲ್‌ಗಳಲ್ಲಿ (IPL) ಮಿಂಚುತ್ತಿರುವ ಮುಂಬೈ ಇಂಡಿಯನ್ಸ್ (Mumbai Indians) ತಂಡದ ವೇಗದ ಬೌಲರ್ ಕುಮಾರ್ ಕಾರ್ತೀಕೇಯ ಮುಖ್ಯ ಎನಿಸಿಕೊಳ್ಳುತ್ತಾರೆ.


ಉತ್ತರಪ್ರದೇಶ ಮೂಲದ ೨೪ ವರ್ಷದ ಕಾರ್ತೀಕೇಯನಿಗೆ ಬಾಲ್ಯದಿಂದಲೇ ಕ್ರಿಕೇಟ್‌ನಲ್ಲಿ ಇನ್ನಿಲ್ಲದ ಆಸಕ್ತಿ. ಕ್ರಿಕೇಟ್ ಲೋಕದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ದೃಢನಿರ್ಧಾರ ಮಾಡಿ ೨೦೧೪ರಲ್ಲಿ ಮನೆಯಿಂದ ಹೊರ ನಡೆದರು. ದಿನಗೂಲಿ ಕೆಲಸ ಮಾಡುತ್ತಾ ಕ್ರಿಕೇಟ್ ಅಭ್ಯಾಸ ನಡೆಸಿದರು. ಅದರ ಫಲವಾಗಿ ೨೦೧೮ರಲ್ಲಿ ಲಿಸ್ಟ್ ಎ ಪಂದ್ಯದ ಮೂಲಕ ಆರಂಭಿಸಿ ಮುಂದೆ ಪಸ್ಟ್ ಕ್ಲಾಸ್ ಮತ್ತು ರಣಜಿ ಪಂದ್ಯಗಳನ್ನಾಡಿದರು.


ಮಧ್ಯಪ್ರದೇಶದ ಪರ ಡೊಮೆಸ್ಟಿಕ್ ಪಂದ್ಯಗಳಲ್ಲಿ ಛಾಪು ಮೂಡಿಸಿದ್ದ ಕಾರ್ತೀಕೇಯ ೨೦೨೧ರಲ್ಲಿ ೨೦ ಲಕ್ಷ ರೂ.ಗಳಿಗೆ ಮುಂಬೈ ಇಂಡಿಯನ್ಸ್ ಪಾಲಾದರು. ಎಡಗೈ ವೇಗಿ ಹರ್ಷದ್ ಖಾನ್ ತಂಡದಿಂದ ಹೊರಬಿದ್ದಾಗ ಕಾರ್ತೀಕೇಯನನ್ನು ತಂಡಕ್ಕೆ ಸೇರಿಸಿಕೊಂಡಿತು. ತನ್ನ ಚೊಚ್ಚಲ ಪಂದ್ಯದಲ್ಲೇ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸಾಮ್ಸನ್ ಅವರ ವಿಕೇಟ್ ಬಲಿ ಪಡೆದರು. ನಾಲ್ಕು ಓವರ್‌ಗಳಲ್ಲಿ ಕೇವಲ ೧೯ ರನ್ ನೀಡಿ ಒಂದು ವಿಕೇಟ್ ಕಬಳಿಸಿರುವುದು ಇವರ ಪ್ರಬಲ ಬೌಲಿಂಗ್ ದಾಳಿಗೆ ಸಾಕ್ಷಿ.


ನಂತರ ಎಲ್ಲಾ ಪಂದ್ಯಗಳಲ್ಲಿ ಶರವೇಗದ ಬೌಲಿಂಗ್ ನಿಂದ ಎದುರಾಳಿಗಳನ್ನು ಕಟ್ಟಿಹಾಕಿ ಹಲವಾರು ವಿಕೇಟ್‌ಗಳನ್ನು ಬಾಚಿಕೊಂಡಿದ್ದಾರೆ. ಈವರೆಗೂ ಕಾರ್ತೀಕೇಯ ಪಸ್ಟ್ ಕ್ಲಾಸ್, ೧೯ ಲಿಸ್ಟ್ ಎ ಮತ್ತು ೮ ಟಿ.೨೦ ಪಂದ್ಯಗಳನ್ನು ಆಡಿ ಕ್ರಮವಾಗಿ ೩೫, ೧೮, ಒಂಬತ್ತು ವಿಕೇಟ್‌ಗಳನ್ನು ಪಡೆದುಕೊಂಡಿದ್ದಾರೆ. ತಂದೆ-ತಾಯಿ ಸಾಕಷ್ಟು ಬಾರಿ ಮನೆಗೆ ಕರೆದರು ಈವರೆಗೆ ಹೋಗದ ಕಾರ್ತೀಕೇಯ ಕ್ರಿಕೇಟ್‌ನಲ್ಲಿ ಏನನ್ನಾದರೂ ಸಾಧಿಸಿಯೇ ಮನೆಗೆ ಮರಳುವುದೆಂದು ತೀರ್ಮಾನ ಮಾಡಿದ್ದರು. ಬರೊಬ್ಬರಿ ಒಂಬತ್ತು ವರ್ಷಗಳ ವನವಾಸದ ನಂತರ ಈ ಬಾರಿಯ ಐಪಿಎಲ್ ಮುಗಿದ ಕೂಡಲೇ ಮನೆಗೆ ಹೋಗುವುನೆಂದು ಕಾರ್ತೀಕೇಯ ಹೇಳಿದ್ದಾರೆ. ಹೀಗೆ ಅಕ್ಷರಶ: ತಪಸ್ಸುಗೈದು ಯೋಚಿಸಿದ್ದನ್ನು ಸಾಧಿಸಿದ ಈ ಯುವ ಪ್ರತಿಭೆಯ ಕನಸುಗಳೆಲ್ಲ ನನಸಾಗಿ ಕ್ರೀಡಾ ಜಗತ್ತಿನ ದಿಗ್ಗಜನಾಗಿ ಮೆರೆಯುವಂತಾಗಲಿ ಎಂಬುದೆ ನಮ್ಮ ಆಶಯ.


ಇದನ್ನೂ ಓದಿ: KKR Star ಅಂದು ಕೂಲಿಕಾರ್ಮಿಕ, ಇಂದು ಕ್ರಿಕೇಟರ್


ಇದನ್ನೂ ಓದಿ: WhatsApp Tips And Tricks : WhatsApp ನ ಈ ಸಿಕ್ರೇಟ್‌ ಫೀಚರ್‌ಗಳು ನಿಮಗೆ ಗೊತ್ತಾ?

IPL Spin Booster for Mumbai Indians

Comments are closed.