KKR Star ಅಂದು ಕೂಲಿಕಾರ್ಮಿಕ, ಇಂದು ಕ್ರಿಕೇಟರ್

ನಮ್ಮ ಜೀವನದಲ್ಲಿ ಸಾಧಿಸುವ ಛಲವೊಂದಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುವುದಕ್ಕೆ ನಮ್ಮ ನಡುವೆಯೇ ಹಲವಾರು ಉದಾಹರಣೆಗಳಿವೆ. ಎಂತಹ ಸವಾಲುಗಳು ಎದುರಾದರು ಅದನ್ನು ಧೈರ್ಯದಿಂದ ಎದುರಿಸಬೇಕು ಎಂದು ತೋರಿಸಿಕೊಟ್ಟ ಹಲವು ಮಹಾನುಭಾವರು ತನ್ನ ಜೊತೆಯೇ ಇದ್ದಾರೆ. ಅಲ್ಲದೇ ಕಡು ಬಡತನದಲ್ಲಿ ಹುಟ್ಟಿಯು ಉನ್ನತ ಸ್ಥಾನಕ್ಕೇರಿದವರು ನೂರಾರು ಜನರಿದ್ದಾರೆ. ಅಂತಹವರ ಸಾಲಿನಲ್ಲಿರುವವರು ಐಪಿಎಲ್ ಉತ್ಸವದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದ ಮೂಲಕ ಮಿಂಚುತ್ತಿರುವ ದೇಸಿ ಪ್ರತೀಭೆ ರಿಂಕು ಸಿಂಗ್. (Rinku Singh)


ರಿಂಕು ಸಿಂಗ್ ತಂದೆ ಮನೆ ಮನೆಗೆ ಗ್ಯಾಸ್ ಸಿಲಿಂಡರ್ ವಿತರಿಸುವ ಸಾಮಾನ್ಯ ಕೂಲಿ ಕಾರ್ಮಿಕ. ಹಾಗಾಗಿ ರಿಂಕು ಸಿಂಗ್ ಮನೆಯಲ್ಲಿ ಬಡತನಕ್ಕೆ ಬರವಿರಲಿಲ್ಲ. ಕಲಿಕೆಯಲ್ಲಿಯು ಆಸಕ್ತಿ ಹೊಂದಿರದ ರಿಂಕು ಸಿಂಗ್ ೯ನೇ ತರಗತಿಗೆ ಫೇಲ್ ಅಗಿಬಿಟ್ಟಿದ್ದ. ಆದರೆ ಕ್ರಿಕೇಟ್‌ನಲ್ಲಿ ವಿಶೇಷ ಆಸಕ್ತಿ ಇತ್ತು. ಜೀವನ ನಿರ್ವಹಣೆಗಾಗಿ ರಸ್ತೆಯಲ್ಲಿ ಕಸ ಗುಡಿಸುತ್ತಿದ್ದ. ಆತನ ತಂದೆಗೆ ಮಗ ಕ್ರಿಕೇಟ್ ಆಟವಾಡುವುದು ಇಷ್ಟ ಇರಲಿಲ್ಲ. ಇದಕ್ಕಾಗಿ ಸಾಕಷ್ಟು ಬಾರಿ ಮಗನನ್ನು ಶಿಕ್ಷಿಸಿದ್ದರು. ಆದರೂ ಈ ವಿರೋಧದ ಮಧ್ಯೆಯೂ ಕ್ರಿಕೇಟ್‌ನಲ್ಲಿ ಸಾಧಿಸಬೇಕೆಂಬ ಕನಸು ಹೊತ್ತಿದ್ದ ರಿಂಕು ಸಿಂಗ್ ದೆಹಲಿಯಲ್ಲಿ ನಡೆದ ಪಂದ್ಯವೊಂದರಲ್ಲಿ ಪಂದ್ಯ ಶ್ರೇಷ್ಠ ಬಹುಮಾನ (Man of the Match) ಪಡೆದಿದ್ದರು.


ಬಡತನದ ಬೇಗೆಯಿಂದಾಗಿ ಕೆಲವೊಮ್ಮೆ ಹಸಿದ ಹೊಟ್ಟೆಯಲ್ಲೆ ಕ್ರಿಕೇಟ್ ಅಭ್ಯಾಸ ನಡೆಸುತ್ತಿದ್ದರು. ಅಂಡರ್ ೧೯ ಮತ್ತು ಕಾಲೇಜು ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರಿಂದ ರಣಜಿ ತಂಡಕ್ಕೆ ಆಯ್ಕೆಗೊಂಡರು. ಮುಂದೆ ೨೦೧೭ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮೂಲಕ ಐಪಿಎಲ್ ಕ್ರಿಕೇಟ್ ಉತ್ಸವಕ್ಕೆ ಪಾದಾರ್ಪಣೆ ಗೈದರು. ಆದರೆ ನಾಲ್ಕು ವರ್ಷ ಸರಿಯಾದ ಅವಕಾಶ ದೊರಕದೇ ಬೆಂಚ್‌ಗೆ ಸೀಮಿತವಾದರೂ ೨೦೨೧ರಲ್ಲಿ ಮತ್ತೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ೫೫ ಲಕ್ಷ ರೂ.ಗಳಿಗೆ ರಿಂಕು ಸಿಂಗ್ ಅವರನ್ನು ಖರೀದಿಸಿತು. ರಾಜಸ್ಥಾನ್ ರಾಯಲ್ಸ್ (Rajasthan Royals) ವಿರುದ್ದದ ಪಂದ್ಯದಲ್ಲಿ ರಿಂಕು ಸಿಂಗ್ ಎಂಬ ಎಡಗೈ ದಾಂಡಿಗ ಉತ್ತಮ ಪ್ರದರ್ಶನ ನೀಡದಿದ್ದರೆ ಕೆಕೆಆರ್ ಸತತ ಆರನೇ ಬಾರಿ ಸೋಲಬೇಕಾಗಿತ್ತು. ಕೇವಲ ೨೩ ಎಸೆತಗಳಲ್ಲಿ ೪೨ ರನ್‌ಗಳನ್ನು ಕಲೆಹಾಕಿದ ರಿಂಕು ಸಿಂಗ್ ತಂಡವನ್ನು ಸೋಲಿನಿಂದ ಪಾರು ಮಾಡಿದರು. ಈ ಪಂದ್ಯದ ಮೂಲಕವೆ ರಿಂಕು ಸಿಂಗ್ ಭಾರಿ ಸುದ್ದಿಯಲ್ಲಿದ್ದರು.


ಐಪಿಎಲ್ ಅಂಗಳದಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಕ್ರಿಕೇಟ್ ಅಭಿಮಾನಿಗಳ ಮನಗೆದ್ದಿದ್ದಾರೆ. ಕಸ ಗುಡಿಸುತ್ತಿದ್ದ ಯುವಕನೊಬ್ಬ ಕ್ರಿಕೇಟ್ ಲೋಕದಲ್ಲಿ ಭವಿಷ್ಯದ ಪ್ರಬಲ ಆಟಗಾರನಾಗುವತ್ತ ದಾಪುಗಾಲಿಡುತ್ತಿರುವುದು ಅಚ್ಚರಿಯೇ ಸರಿ.


ಇದನ್ನೂ ಓದಿ: Google Showcase Smart Glasses : ಗೂಗಲ್ ಸ್ಮಾರ್ಟ್ ಗ್ಲಾಸ್ ನಲ್ಲಿ ಹೊಸ ಆವಿಷ್ಕಾರ


ಇದನ್ನೂ ಓದಿ: YouTube Shorts ಅನ್ನು ಸುಲಭವಾಗಿ ರಚಿಸುವುದು ಹೇಗೆ ಗೊತ್ತೇ?

KKR Hero Rinku Singh

Comments are closed.